ʼಲೇಡಿಸ್ ಬಾರ್ʼ ಚಿತ್ರಕ್ಕೆ 25ನೇ ದಿನದ ಸಂಭ್ರಮ
x
ʼಲೇಡಿಸ್ ಬಾರ್ʼ ಚಿತ್ರ 25 ಪೂರ್ಣಗೊಂಡಿದೆ.

ʼಲೇಡಿಸ್ ಬಾರ್ʼ ಚಿತ್ರಕ್ಕೆ 25ನೇ ದಿನದ ಸಂಭ್ರಮ

ಚಿಕ್ಕ ಚಿತ್ರ ತಂಡ ದೊಡ್ಡ ಕನಸುಗಳನ್ನು ಹೊತ್ತುಕೊಂಡು ಮಾಡಿದ ಚಿತ್ರವೇ ʼಲೇಡಿಸ್ ಬಾರ್ʼ.


Click the Play button to hear this message in audio format

ಡಿಎಂಸಿ ಪ್ರೊಡಕ್ಷನ್ ರವರ ಚೊಚ್ಚಲ ಕಾಣಿಕೆ. ಟಿ ಎಂ.ಸೋಮರಾಜು ನಿರ್ಮಾಣದ, ಮುತ್ತು ಎ ಎನ್ ನಿರ್ದೇಶನದ ʼಲೇಡಿಸ್ ಬಾರ್ʼ ಚಿತ್ರ ೨೫ ದಿನ ಯಶಸ್ವಿಯಾಗಿ ಪ್ರದರ್ಶನ ಕಂಡಿದ್ದು, ಈ ಸಂತಸವನ್ನು ಹಂಚಿಕೊಳ್ಳಲು ನಿರ್ಮಾಪಕರು ಸಮಾರಂಭವನ್ನು ಆಯೋಜಿಸಿದ್ದರು.

ಫೆಬ್ರವರಿ 16ರಂದು ಲೇಡಿಸ್ ಬಾರ್ ಸಿನಿಮಾ ಬಿಡುಗಡೆಗೊಂಡಿದ್ದು, ಚಿಕ್ಕ ಚಿತ್ರ ತಂಡ ದೊಡ್ಡ ಕನಸುಗಳನ್ನು ಹೊತ್ತುಕೊಂಡು ಮಾಡಿದ ಚಿತ್ರವೇ ʼಲೇಡಿಸ್ ಬಾರ್ʼ. ಈಗ ಸಿನಿಮಾ ಮಾಡಿ ರಿಲೀಸ್ ಮಾಡುವುದೇ ಎಲ್ಲಿಲ್ಲದ ಕಷ್ಟ. ಜೊತೆಗೆ ಈಗ ಸಾಲು ಸಾಲು ಚಿತ್ರಗಳು ತೆರೆ ಕಾಣುತ್ತಿದ್ದು, ಈ ಪೈಪೋಟಿಗಳ ಮಧ್ಯೆ ಸೋಲು ಗೆಲುವಿನ ಲೆಕ್ಕಾಚಾರ ಇದ್ದ ಚಿತ್ರ ತಂಡ, ಒಂದೊಳ್ಳೆ ಕನ್ನಡ ಸಿನಿಮಾ ಮಾಡಿದಾಗ ಯಾವ ಕಾರಣಕ್ಕೂ ಸಿನಿ ಪ್ರೇಕ್ಷಕರು ಕೈ ಬಿಡುವುದಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಸಿನಿಪ್ರೇಕ್ಷಕರನ್ನು ರಂಜಿಸುವುದರಲ್ಲಿ ಲೇಡೀಸ್ ಬಾರ್ ಚಿತ್ರದ ನಿರ್ದೇಶಕ ಮುತ್ತು ಗೆದ್ದಿದ್ದಾರೆ ಎಂದು ಹೇಳಬಹುದು. ನಿರ್ಮಾಣದೊಂದಿಗೆ ನಟನೆಯಲ್ಲಿ ಪ್ರೇಕ್ಷಕನ ಹೆಗ್ಗಳಿಕೆಯ ಪಾತ್ರಧಾರಿಯಾದ ನಿರ್ಮಾಪಕ ಟಿ ಎಂ ಸೋಮರಾಜ್ ಅವರ ಅಭಿನಯ ಹಾಗೂ ಹರ್ಷ ಕೋಗೋಡ್ ರವರ ಸಂಗೀತ ಚಿತ್ರದ ಗೆಲುವಿನ ಒಂದು ಭಾಗವಾಗಿದೆ.

ಹರೀಶ್ ರಾಜ್, ಕೆಂಪೇಗೌಡ, ಗಣೇಶ್ ರಾವ್ ಕೇಸರ್ ಕರ್, ಮೀನಾಕ್ಷಿ ಹಾಗೂ ಎಲ್ಲಾ ಕಲಾವಿದರು ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಸುಮಾರು ಹಿಟ್ ಚಿತ್ರಗಳನ್ನು ಕೊಟ್ಟಿರುವ ವೀನಸ್ ಮೂರ್ತಿ ಅವರ ಕ್ಯಾಮೆರಾ ಕೈಚಳಕ ಕೂಡ ವರ್ಕೌಟ್ ಆಗಿದೆ.

ಕಾರ್ಯಕ್ರಮದಲ್ಲಿ ಹಿರಿಯ ನಟ ಅಶೋಕ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು, ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ಈ ಚಿತ್ರತಂಡದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

Read More
Next Story