ಭಾರತೀಯ ಚಿತ್ರರಂಗಕ್ಕೆ ವಿಭಿನ್ನ ರೂಪರೇಷೆ ನೀಡಿದ ನಿರ್ದೇಶಕಿಯರು
x
ಭಾರತೀಯ ಚಿತ್ರರಂಗದ ರೂಪರೇಷೆಗಳನ್ನು ಬದಲಿಸಿದ 20 ಚಲನಚಿತ್ರ ನಿರ್ದೇಶಕಿಯರು

ಭಾರತೀಯ ಚಿತ್ರರಂಗಕ್ಕೆ ವಿಭಿನ್ನ ರೂಪರೇಷೆ ನೀಡಿದ ನಿರ್ದೇಶಕಿಯರು

ಮಹಿಳೆಯರ ನಿರ್ದೇಶನದಲ್ಲಿ ಮೂಡಿ ಬರುವ ಸಿನಿಮಾಗಳು ವಿಭಿನ್ನ ಸಂವೇದನೆ ಮತ್ತು ಸೂಕ್ಷ್ಮತೆಯನ್ನುಒಳಗೊಂಡಿರುತ್ತವೆ.


Click the Play button to hear this message in audio format

ಮಹಿಳೆಯರ ನಿರ್ದೇಶನದಲ್ಲಿ ಮೂಡಿ ಬರುವ ಸಿನಿಮಾಗಳು ವಿಭಿನ್ನ ಸಂವೇದನೆ ಮತ್ತು ಸೂಕ್ಷ್ಮತೆಯನ್ನುಒಳಗೊಂಡಿರುತ್ತವೆ. ಅಂತಹ ಸಂವೇದನಾಶೀಲ ಸಿನಿಮಾಗಳಿಗೆ ಹೆಸರಾಗಿರುವ 20 ಮಹಿಳಾ ನಿರ್ದೇಶಕರ ಸಿನಿಮಾ ಕುರಿತ ಒಳನೋಟ ಇಲ್ಲಿದೆ.

1. ಅಲಂಕೃತಾ ಶ್ರೀವಾಸ್ತವ (44): ಅಲಂಕೃತಾ ನಿರ್ದೇಶನದದಲ್ಲಿ ಮೂಡಿಬಂದಿದ್ದ ಸಿನಿಮಾ ʻಲಿಪ್‌ಸ್ಟಿಕ್ ಅಂಡರ್ ಮೈ ಬುರ್ಖಾʼ ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಸಿನಿಮಾದಲ್ಲಿದ್ದ ಲೈಂಗಿಕ ದೃಶ್ಯಗಳು ವಿವಾದಕ್ಕೆ ಕಾರಣವಾಗಿತ್ತು.

ದೇಶದಲ್ಲಿ ಸೆನ್ಸಾರ್ಶಿಪ್ ಮತ್ತು ಲಿಂಗ ಸಮಾನತೆ ಬಗ್ಗೆ ಚರ್ಚೆ ಹುಟ್ಟುಹಾಕಿತ್ತು. ಅವರ ನಿರ್ದೇಶನದ ಚೊಚ್ಚಲ ಚಿತ್ರ ʻಟರ್ನಿಂಗ್ 30 (2011)ʼ ನೀರಸ ಸಂಬಂಧ ಕುರಿತಾಗಿದ್ದು, ಮಹಿಳೆಯರ ಲೈಂಗಿಕ ಬಯಕೆ ಮತ್ತು ವಿಮೋಚನೆ ಕಥಾಹಂದರವನ್ನು ಹೊಂದಿತ್ತು.ʻ ಡಾಲಿ ಕಿಟ್ಟಿ ಔರ್ ವೋ ಚಮಕ್ತೆ ಸಿತಾರೆʼ ಮತ್ತು ʻಮೇಡ್‌ ಇನ್‌ ಹೆವೆನ್‌ ಸಿರೀಸ್‌ʼ, ʻಬಾಂಬೆ ಬೇಗಮ್ಸ್‌ʼ ಮತ್ತು ʻಮೈ ಬ್ಯೂಟಿಫುಲ್ ರಿಂಕಲ್ಸ್ ಇನ್ ಆಂಥಾಲಜಿʼ, ʻಮಾಡರ್ನ್ ಲವ್: ಮುಂಬೈ !ʼ ಸಿನಿಮಾಗಳು ಕೂಡ ಸ್ಮರಣೀಯ..

2. ಅಪರ್ಣಾ ಸೇನ್ (78): ಬೆಂಗಾಲಿ ನಟಿ-ಚಲನಚಿತ್ರ ನಿರ್ದೇಶಕಿ ಅಪರ್ಣಾ ಸೇನ್ 1981 ರಲ್ಲಿ ʻ36 ಚೌರಂಗೀ ಲೇನ್ʼ ಚಿತ್ರದ ಮೂಲಕ ನಿರ್ದೇಶಕಿಯಾಗಿ ಪದಾರ್ಪಣೆ ಮಾಡಿದರು. ಈ ಸಿನಿಮಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆ ಪಡೆಯಿತು. ಅವರ ನಿರ್ದೇಶನದ ಸಿನಿಮಾಗಳು ಲಿಂಗ ಕ್ರಿಯಾತ್ಮಕತೆ ಕುರಿತು ಇರುತ್ತವೆ.

ʻಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್ʼ (2002), ʻದಿ ಜಪಾನೀಸ್ ವೈಫ್ (2010), ʻಇತಿ ಮೃಣಾಲಿನಿ ʼ(2011) , ʻಸೋನಾಟಾ ʼ(2017), ʻಗೊಯ್ನಾರ್ ಬಕ್ಷೋ (ದಿ ಜ್ಯುವೆಲರಿ ಬಾಕ್ಸ್,)ʼ( 2013), ಮತ್ತು ʻದಿ ರೇಪಿಸ್ಟ್ ʼ(2021) ಅವರ ಕಾದಂಬರಿ ಆಧಾರಿತ ಸಿನಿಮಾಗಳು.

3. ಅಶ್ವಿನಿ ಅಯ್ಯರ್ ತಿವಾರಿ (44): ಸ್ವರಾ ಭಾಸ್ಕರ್ ನಟಿಸಿದ ಕಾಮಿಡಿ ಸಿನಿಮಾ ʻನಿಲ್ ಬಟ್ಟೆ ಸಣಾಟಾ ʼ(2015) ಅಶ್ವಿನಿ ಅಯ್ಯರ್‌ ತಿವಾರಿ ಅವರ ನಿರ್ದೇಶನದ ಚೊಚ್ಚಲ ಸಿನಿಮಾ. ತಮಿಳಿನ ʻಅಮ್ಮ ಕಣಕ್ಕುʼ ಸಿನಿಮಾದ ರಿಮೇಕ್‌ ಇದು. ಈ ಸಿನಿಮಾದ ಕಥೆ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿದ್ದ ಕೌನ್ ಬನೇಗಾ ಕರೋಡ್‌ ಪತಿ ಕಾರ್ಯಕ್ರಮದಿಂದ ಸ್ಪೂರ್ತಿ ಪಡೆದಿದೆ. ಬಾಕ್ಸ್‌ ಆಫೀಸ್‌ನಲ್ಲಿ ಹೆಚ್ಚು ಸದ್ದು ಮಾಡದಿದ್ದರೂ, ಚೊಚ್ಚಲ ನಿರ್ದೇಶಕರ ಚೊಚ್ಚಲ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ತಂದುಕೊಟ್ಟಿತು. ಸ್ತ್ರೀ ಪಾತ್ರಗಳ ಸುತ್ತ ಚಲನಚಿತ್ರ ರಚಿಸುವ ಅವರ ಕೌಶಲಯವು ʻಬರೇಲಿ ಕಿ ಬರ್ಫಿʼ (2017) ರೊಮ್ಯಾಂಟಿಕ್ ಹಾಸ್ ಸಿನೆಮಾದೊಂದಿಗೆ ಮುಂದುವರಿಯಿತು.

4. ದೀಪಾ ಮೆಹ್ತಾ (74): ಎಲಿಮೆಂಟ್ಸ್ ಟ್ರಯಾಲಜಿ - ಫೈರ್ (1996), ಅರ್ಥ್ (1998), ಮತ್ತು ವಾಟರ್ (2005), ಸಿನಿಮಾಗಳು ಟೊರೊಂಟೊ ಮೂಲದ ದೀಪಾ ಮೆಹ್ತಾ ಅವರಿಗೆ ಸೇರಿವೆ. ಅವರ ಸಿನಿಮಾ ಸಾಮಾಜಿಕ ನಿಷೇಧ, ಲಿಂಗ ಸಮಸ್ಯೆ ಮತ್ತು ದೇಶ ವಿಭಜನೆ ಕುರಿತು ಒಳನೋಟ ನೀಡುತ್ತವೆ.

ʻವಾಟರ್ʼ ಅತ್ಯುತ್ತಮ ವಿದೇಶಿ ಭಾಷೆ ಚಲನಚಿತ್ರವೆಂದು ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು. ʻದಿ ರಿಪಬ್ಲಿಕ್ ಆಫ್ ಲವ್ ʼ(2003), ʻಅನಾಟಮಿ ಆಫ್ ವಯಲೆನ್ಸ್ ʼ(2010 ರ ದೆಹಲಿ ಗ್ಯಾಂಗ್‌ರೇಪ್ ಮತ್ತು ಕೊಲೆ ಆಧರಿತ), ಸಲ್ಮಾನ್ ರಶ್ದಿಯವರ ಮಿಡ್‌ನೈಟ್ಸ್ ಚಿಲ್ಡ್ರನ್ (2012) ಮತ್ತು ಶ್ರೀಲಂಕಾದ ಬರಹಗಾರ ಶ್ಯಾಮ್ ಸೆಲ್ವದುರೈ ಅವರ ಫನ್ನಿ ಬಾಯ್ (2020) ಸಿನಿಮಾಗಳು ಸ್ಮರಣೀಯ.

5. ಫರಾ ಖಾನ್ (59): ಖ್ಯಾತ ಡಾನ್ಸ್‌ ಕೊರಿಯೋಗ್ರಾಫರ್‌ ಆಗಿರುವ ಫರಾ ಖಾನ್, ಸಿನಿಮಾ ನಿರ್ದೇಶಕಿಯೂ ಹೌದು. ಮೈ ಹೂ ನಾ (2004) ಮತ್ತು ಶಾರುಖ್ ಖಾನ್ ನಟಿಸಿದ ಓಂ ಶಾಂತಿ ಓಂ (2007) ದೊಡ್ಡ ಯಶಸ್ಸನ್ನು ಗಳಿಸಿವೆ. ತೀಸ್ ಮಾರ್ ಖಾನ್ (2010) ಬಾಕ್ಸ್‌ ಆಫೀಸ್‌ನಲ್ಲಿ ಸಾಧಾರಣ ಯಶಸ್ಸು ಕಂಡಿತು.

6. ಗೌರಿ ಶಿಂಧೆ (49): ಗೌರಿ ಶಿಂಧೆ ಅವರ ಸಿನಿಮಾಗಳು ವೈಯಕ್ತಿಕ ಬೆಳವಣಿಗೆ ಮತ್ತು ಮಹಿಳೆಯರ ಆಂತರಿಕ ಜೀವನವನ್ನು ಕೇಂದ್ರೀಕರಿಸುತ್ತವೆ. ಇಂಗ್ಲಿಷ್ ವಿಂಗ್ಲಿಷ್ (2012) ಅವರ ಮೊದಲ ಸಿನಿಮಾ. ವಿಮರ್ಶಕರಿಂದ ಶ್ಲಾಘನೆಯಲ್ಲದೆ, ವಾಣಿಜ್ಯ ಯಶಸ್ಸನ್ನು ಕಂಡಿತು. ಚಿತ್ರದಲ್ಲಿ ಶ್ರೀದೇವಿ, ಶಶಿ ಗೋಡ್‌ಬೋಲೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮನೆಯಲ್ಲಿ ತಯಾರಿಸಿದ ಲಾಡು ಮಾರುವ ಆಕೆಯ ಇಂಗ್ಲಿಷ್‌ ಕೌಶಲವನ್ನು ಪತಿ ಮತ್ತು ಮಗಳು ಗೇಲಿ ಮಾಡುತ್ತಾರೆ. ಇಂಗ್ಲಿಷ್ ಸ್ಪೀಕಿಂಗ್‌ ಕ್ಲಾಸ್‌ಗೆ ಸೇರಿಕೊಳ್ಳುವ ಅವರು ಸ್ವಾಭಿಮಾನಿಯಾಗುವುದನ್ನು ಸಿನಿಮಾ ತೋರಿಸುತ್ತದೆ.ನಾಲ್ಕು ವರ್ಷಗಳ ನಂತರ ಆಲಿಯಾ ಭಟ್ ಮತ್ತು ಎಸ್‌ಆರ್‌ಕೆ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡ ʻಡಿಯರ್ ಜಿಂದಗಿʼ ಸಿನಿಮಾ ನಿರ್ದೇಶಿಸಿದ್ದರು.

7. ಕಿರಣ್ ರಾವ್ (50): ಧೋಬಿ ಘಾಟ್ (2010) ಭಾರಿ ಪ್ರಭಾವ ಬೀರಿದ ಸಿನಿಮಾ. ಮುಂಬೈ ಮತ್ತು ಅದರ ನಿವಾಸಿಗಳ ಚಿತ್ರಣಕ್ಕಾಗಿ ವಿಮರ್ಶಕರ ಮೆಚ್ಚುಗೆ ಗಳಿಸಿತು. ಅವರ ಎರಡನೇ ಚಿತ್ರ ʻಲಾಪಾತ ಲೇಡೀಸ್ʼ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸದ್ದು ಮಾಡಿತ್ತು. ಮಾರ್ಚ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

8. ಕೊಂಕಣಾ ಸೇನ್ ಶರ್ಮಾ (44): ಅಸಾಧಾರಣ ಪ್ರತಿಭೆಯ ನಟಿ ಮಾತ್ರವಲ್ಲದೆ, ಉತ್ತಮ ನಿರ್ದೇಶಕಿ. ವಿಕ್ರಾಂತ್ ಮಾಸ್ಸೆ, ಗುಲ್ಶನ್ ದೇವಯ್ಯ ಮತ್ತು ತಿಲೋತ್ತಮಾ ಶೋಮ್ ನಟಿಸಿದ

ಎ ಡೆತ್ ಇನ್ ದಿ ಗುಂಜ್ (2016) ವಿಮರ್ಶಕರಿಂದ ಮೆಚ್ಚುಗೆ ಪಡೆದ ಚಲನಚಿತ್ರ.

9. ಲೀನಾ ಯಾದವ್ (53): ಪುರುಷ ಪ್ರಧಾನ ಸಮಾಜದಲ್ಲಿ ತಮ್ಮ ಸ್ಥಾನ ಕಂಡುಕೊಳ್ಳಲು ಹೆಣಗಾಡುವ ಗ್ರಾಮೀಣ ರಾಜಸ್ಥಾನದ ನಾಲ್ಕು ಮಹಿಳೆಯರ ಸುತ್ತ ಸುತ್ತುವ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ ಚಿತ್ರ ಪಾರ್ಚಡ್‌, ಬರೆದು ನಿರ್ದೇಶನ ಮಾಡಿದ್ದಾರೆ. ರಿಷಿ ಕಪೂರ್ ಅಭಿನಯದ 2018 ರ ಚಿತ್ರ ರಾಜ್ಮಾ ಚಾವಲ್, ಶಬ್ದ್ (2005), ತೀನ್ ಪತ್ತಿ (2010) ಅವರ ಇತರ ಸಿನಿಮಾಗಳು.

10. ಮೇಘನಾ ಗುಲ್ಜಾರ್ (50): ಚಲನಚಿತ್ರ ನಿರ್ಮಾಪಕ-ಕವಿ-ಗೀತರಚನೆಕಾರ ಗುಲ್ಜಾರ್ ಮತ್ತು ನಟಿ ರಾಖಿ ಅವರ ಪುತ್ರಿ ಮೇಘನಾ ಗುಲ್ಜಾರ್ , ತಲ್ವಾರ್ (2015), ರಾಝಿ (2018), ಛಪಕ್ (2020) ಮತ್ತು ಸ್ಯಾಮ್ ಬಹದ್ದೂರ್ (2023) ನಂತಹ ಸ್ಮರಣೀಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಮೇಘನಾ ಅವರ ನಿರ್ದೇಶನದ ಚೊಚ್ಚಲ ಸಿನಿಮಾ,ಫಿಹಾಲ್‌(2002) ಸಿನಿಮಾ ಬಾಡಿಗೆ ತಾಯ್ತನದ ಕಥಾಹಂದರವನ್ನು ಹೊಂದಿದ್ದು, ಜನಪ್ರಿಯವಾಗಿತ್ತು. 2008 ರ ನೋಯ್ಡಾ ಜೋಡಿ ಕೊಲೆ ಪ್ರಕರಣವನ್ನು ಆಧರಿಸಿದ ʻತಲ್ವಾರ್ʼ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು.

11. ಮೀರಾ ನಾಯರ್ (66): ದೀಪಾ ಮೆಹ್ತಾ ಅವರಂತೆ ಮೀರಾ ನಾಯರ್ ಜಾಗತಿಕ ವೇದಿಕೆಯಲ್ಲಿ ಭಾರತೀಯ ಚಿತ್ರರಂಗದ ಪ್ರಮುಖ ರಾಯಭಾರಿಗಳಲ್ಲಿ ಒಬ್ಬರು. ಸಲಾಮ್ ಬಾಂಬೆ! (1988) ಕ್ಯಾನ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು ಮಿಸ್ಸಿಸಿಪ್ಪಿ ಮಸಾಲಾ (1991), ಮತ್ತು ಮಾನ್ಸೂನ್ ವೆಡ್ಡಿಂಗ್ (2001), ಹಿಸ್ಟಾರಿಕಲ್ ಬ್ಲೈಂಡ್‌ನೆಸ್ (2002), ದಿ ನೇಮ್‌ಸೇಕ್ (2006), ದಿ ರಿಲಕ್ಟಂಟ್ ಫಂಡಮೆಂಟಲಿಸ್ಟ್ (2012, ಮೊಹ್ಸಿನ್ ಹಮೀದ್ ಅವರ ಕಾದಂಬರಿ ಆಧಾರಿತ) ಮತ್ತು ವಿಲಿಯಂ ಮೇಕ್‌ಪೀಸ್ ಠಾಕ್ರೆ ಅವರ ಮಹಾಕಾವ್ಯವನ್ನು ಆಧರಿಸಿದ ವ್ಯಾನಿಟಿ ಫೇರ್ (2004) ಮತ್ತು ವಿಕ್ರಮ್ ಸೇಥ್ ಅವರ ಎ ಸೂಟಬಲ್ ಬಾಯ್ (2020) ಇವರ ನಿರ್ದೇಶನದ ಸಿನಿಮಾಗಳು.

12. ನಂದಿತಾ ದಾಸ್ (54): ಫಿರಾಕ್ (2008) ಮತ್ತು ಮಾಂಟೊ (2018) ಸಿನಿಮಾ ನೋಡಿದ್ದರೆ, ನಟಿ-ನಿರ್ದೇಶಕಿ ನಂದಿತಾ ದಾಸ್ ಅವರ ನಿರ್ದೇಶನ ಪ್ರತಿಭೆ ನಿಮಗೆ ಗೊತ್ತಿರುತ್ತದೆ. ಫಿರಾಕ್ 2002ರ ಗುಜರಾತ್ ಗಲಭೆ ನಂತರದ ಪರಿಣಾಮಗಳನ್ನು ಪರಿಶೋಧಿಸುವ ವಿಮರ್ಶಕರಿಂದ ಪ್ರಶಂಸಿಸಲ್ಪಟ್ಟ ಚಲನಚಿತ್ರ.

ಸಾದತ್ ಹಸನ್ ಮಂಟೋ ಅವರ ಜೀವನವನ್ನುಆಧರಿಸಿದ ʻಮಂಟೋʼ, ಸತ್ಯವನ್ನು ಹೇಳುವ ಬದ್ಧತೆಯನ್ನು ಚಿತ್ರಿಸುತ್ತದೆ. ಕೇವಲ ಎರಡು ಸಿನಿಮಾಗಳ ಮೂಲಕ ರಾಜಕೀಯ, ಐತಿಹಾಸಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರುವ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.

13. ಪೂಜಾ ಭಟ್ (52): ಪೂಜಾ ಭಟ್ ಅವರು ಜಾನ್ ಅಬ್ರಹಾಂ ಮತ್ತು ಉದಿತಾ ಗೋಸ್ವಾಮಿ ನಟಿಸಿದ ವಿಮರ್ಶಕರಿಂದ ಮೆಚ್ಚುಗೆ ಪಡೆದ ಕ್ರೈಂ ಥ್ರಿಲ್ಲರ್ ಪಾಪ್‌ (2003) ಸಿನಿಮಾದೊಂದಿಗೆ ನಿರ್ದೇಶನ ಆರಂಭಿಸಿದರು. ಹಾಲಿಡೇ (2006), ಧೋಖಾ (2007), ಕಜರಾರೆ (2010), ಮತ್ತು ಕಾಮಪ್ರಚೋದಕ ಥ್ರಿಲ್ಲರ್ ಜಿಸ್ಮ್ 2 ನಂತಹ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

14. ರೇವತಿ (57): ರೇವತಿ 2002 ರಲ್ಲಿ ʻಮಿತ್ರ್, ಮೈ ಫ್ರೆಂಡ್ʼ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟರು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಫಿರ್ ಮಿಲೇಂಗೆ ದೇಶದಲ್ಲಿ ಎಚ್‌ ಐವಿ/ಏಡ್ಸ್‌ ಕುರಿತ ಚಿತ್ರ. ರೇವತಿ ನಟನೆ ಮುಂದುವರಿಸಿಕೊಂಡೇ, ಚಲನಚಿತ್ರ-ದೂರದರ್ಶನಕ್ಕೆ ನಿರ್ದೇಶಿಸುತ್ತಿದ್ದಾರೆ. ಅವರ 2023 ರ ಸಲಾಮ್ ವೆಂಕಿ, ಕಾಜೋಲ್ ಮತ್ತು ವಿಶಾಲ್ ಜೇತ್ವಾ ನಟನೆಯ ಚಿತ್ರ. ತಾಯಿ ತನ್ನ ಮಗನ ಮಾರಣಾಂತಿಕ ಕಾಯಿಲೆಯೊಂದಿಗೆ ವ್ಯವಹರಿಸುವ ಭಾವನಾತ್ಮಕ ಪ್ರಯಾಣ ಮತ್ತು ಅಂಗಾಂಗ ದಾನದ ಬಯಕೆಯನ್ನು ಗುರುತಿಸುತ್ತದೆ. ಕೇರಳ ಕೆಫೆ ಮತ್ತು ಬಿಡುಗಡೆಯಾಗದ ʻಮುಂಬೈ ಕಟಿಂಗ್ ʼಗೆ ಒಂದು ಸಂಚಿಕೆಯನ್ನು ನಿರ್ದೇಶಿಸಿದ್ದಾರೆ.

15. ರೀಮಾ ಕಾಗ್ತಿ (52): ಹನಿಮೂನ್ ಟ್ರಾವೆಲ್ಸ್ ಪ್ರೈವೇಟ್‌ ಲಿಮಿಟೆಡ್‌ ಚಿತ್ರದ ಮೂಲಕ ನಿರ್ದೇಶಕಿಯಾಗಿ ಪದಾರ್ಪಣೆ ಮಾಡಿದ ಅವರು ತಲಾಶ್ (2012) ಮತ್ತು ಅಕ್ಷಯ್‌ ಕುಮಾರ್‌ ನಟನೆಯ,

ಮೊದಲ ಒಲಿಂಪಿಕ್ ಚಿನ್ನದ ಪದಕದ ಗೆಲುವಿನಿಂದ ಸ್ಫೂರ್ತಿ ಪಡೆದ ಚಿತ್ರ ಗೋಲ್ಡ್‌ ನಿರ್ದೇಶಿಸಿದ್ದಾರೆ. ಜೋಯಾ ಅಖ್ತರ್ ಜೊತೆಗೆ ಅಕ್ಟೋಬರ್ 2015 ರಲ್ಲಿ ಟೈಗರ್ ಬೇಬಿ ಫಿಲ್ಮ್ಸ್‌ ಸ್ಟುಡಿಯೋ ಸ್ಥಾಪಿಸಿದ್ದಾರೆ. 2023 ರಲ್ಲಿ ಅವರು ದಹಾದ್ ಎಂಬ ಕ್ರೈಮ್ ಥ್ರಿಲ್ಲರ್ ಸರಣಿಯನ್ನು ನಿರ್ದೇಶಿಸಿದರು. ಅವಿವಾಹಿತ ಮಹಿಳೆಯರನ್ನು ಬೇಟೆಯಾಡುವ ಸರಣಿ ಕೊಲೆಗಾರನ ಕುರಿತ ಕಥೆ.

16. ರಿಮಾ ದಾಸ್ (46): ಅಸ್ಸಾಮಿ ಚಲನಚಿತ್ರ ನಿರ್ಮಾಪಕಿ, ವಿಲೇಜ್ ರಾಕ್‌ಸ್ಟಾರ್ಸ್ (2017) ಚಲನಚಿತ್ರದೊಂದಿಗೆ ಅಂತಾರಾಷ್ಟ್ರೀಯ ಮೆಚ್ಚುಗೆ ಗಳಿಸಿದರು. ಅತ್ಯುತ್ತಮ ಚಲನಚಿತ್ರ ಎಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದುಕೊಂಡಿತು; ಆಸ್ಕರ್‌ನಲ್ಲಿ ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಿತು. ಬುಲ್‌ಬುಲ್ ಕ್ಯಾನ್ ಸಿಂಗ್ (2018) ಮತ್ತು ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆ ಹೊಂದಿರುವ ಟೋರಾಸ್ ಹಸ್ಬೆಂಡ್ (2023) ಇವರ ನಿರ್ದೇಶನದಲ್ಲಿ ಮೂಡಿ ಬಂದಿದೆ.

17. ತನುಜಾ ಚಂದ್ರ (54): ಸುರ್: ದಿ ಮೆಲೋಡಿ ಆಫ್ ಲೈಫ್ (2002) ಮತ್ತು ಕರೀಬ್ ಕರೀಬ್ ಸಿಂಗಲ್‌ (2017), ಆಧುನಿಕ ಸಂಬಂಧಗಳ ಕಥಾಹಂದರವನ್ನು ಹೊಂದಿರುವ ಸಮಕಾಲೀನ ರೋಮ್ಯಾಂಟಿಕ್ ಹಾಸ್ಯಮಯ ಚಿತ್ರಗಳು. 2022 ರಲ್ಲಿ ಜೂಹಿ ಚಾವ್ಲಾ ನಟಿಸಿರುವ ವೆಬ್‌ ಸಿರೀಸ್‌ ಹುಶ್ ಹುಶ್, ಸ್ನೇಹಿತನ ಸಾವಿನ ರಹಸ್ಯ ಹುಡುಕುತ್ತಿರುವ ನಾಲ್ವರು ಮಹಿಳಾ ಸ್ನೇಹಿತರ ಕಥೆಯನ್ನು ಹೊಂದಿದೆ.

18. ಸಾಯಿ ಪರಾಂಜಪೆ (84): ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಸ್ಪರ್ಶ್ (ದಿ ಟಚ್, 1980) ಸೂಕ್ಷ್ಮ ಸಮಸ್ಯೆಗಳನ್ನುಸಮರ್ಥವಾಗಿ ನಿಭಾಯಿಸಿದೆ. ಅವರ ನಿರ್ದೇಶನದ ಮೊದಲ ಸಿನಿಮಾ. ಚಶ್ಮೆ ಬದ್ದೂರ್ (1981) ಮತ್ತು ಕಥಾ (1982) ನಂತಹ ಹಾಸ್ಯ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ರಾಷ್ಟ್ರೀಯ ಸಾಕ್ಷರತಾ ಮಿಷನ್ ಬಗ್ಗೆ ಅಂಗೂಟಾ ಛಾಪ್ (1988), ವಲಸೆ ಕಾರ್ಮಿಕರ ದುರವಸ್ಥೆ ಬಗ್ಗೆ ದಿಶಾ (1990), ಪಾಪೀಹಾ (ಫಾರೆಸ್ಟ್ ಲವ್ ಬರ್ಡ್) (1993), ಸಾಜ್ (1997) (ಪ್ರಸಿದ್ಧ ಗಾಯಕ-ಸಹೋದರಿಯರಾದ ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಅವರಿಂದ ಸ್ಫೂರ್ತಿ ಪಡೆದಿದೆ ಎನ್ನಲಾಗಿದೆ) ಮತ್ತು ಪರಿಸರ ಸಮಸ್ಯೆಗಳ ಪರಿಶೋಧನೆಗೆ ಸಂಬಂಧಿಸಿದ ಸಿನಿಮಾ ಚಕಾ ಚಕ್ (2005) ಇವರ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾಗಳು.

19. ಶೋನಾಲಿ ಬೋಸ್ (58): 1984 ರ ಸಿಖ್ ವಿರೋಧಿ ಗಲಭೆಗಳನ್ನು ಆಧರಿಸಿದ ಜೀವನಚರಿತ್ರೆಯ ಸಿನಿಮಾ ಅಮು (2005 ), ಚೊಚ್ಚಲ ಚಲನಚಿತ್ರ. ಮಾರ್ಗರಿಟಾ ವಿದ್‌ ಎ ಸ್ಟ್ರಾ (2015), ಪ್ರಿಯಾಂಕಾ ಚೋಪ್ರಾ, ಫರ್ಹಾನ್ ಅಖ್ತರ್ ಮತ್ತು ಝೈರಾ ವಾಸಿಮ್ ನಟನೆಯ ದಿ ಸ್ಕೈ ಈಸ್ ಪಿಂಕ್ (2019) ಇವರ ನಿರ್ದೇಶನದ ಸಿನಿಮಾಗಳು.

20. ಜೋಯಾ ಅಖ್ತರ್ (51): ಜೋಯಾ ಅಖ್ತರ್‌ ಅವರ ನಿರ್ದೇಶನದ ಜನಪ್ರಿಯ ಸಿನಿಮಾಗಳಲ್ಲಿ ಜಿಂದಗಿ ನಾ ಮಿಲೇಗಿ ದೊಬಾರಾ (2011) ಮತ್ತು ಗಲ್ಲಿ ಬಾಯ್ (2019) ಸೇರಿವೆ. ಅಂತಾರಾಷ್ಟ್ರೀಯ ಅಕಾಡೆಮಿ ಪ್ರಶಸ್ತಿಗೆ ದೇಶದ ಅಧಿಕೃತ ಪ್ರವೇಶವಾಗಿದೆ. 2009ರಲ್ಲಿ ಲಕ್ ಬೈ ಚಾನ್ಸ್‌ ಮೂಲಕ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದರು.ಗಲ್ಲಿ ಬಾಯ್ ಮತ್ತು ದಿಲ್ ಧಡಕ್‌ ನೆ ದೋ (2015), ಮೇಡ್ ಇನ್ ಹೆವನ್ (2019, 2023) ಎಂಬ ಸರಣಿ ನಿರ್ದೇಶಿಸಿದ್ದಾರೆ. ಆರ್ಚೀಸ್ (2023), ಕಾಮಿಕ್ ಸರಣಿಯ ರೂಪಾಂತರ.

Read More
Next Story