1,000 ಕೋಟಿ ರೂ. ಕಲೆಕ್ಷನ್ ಮಾಡಿದ `ಕಲ್ಕಿ 2898 ಎಡಿ ಸಿನಿಮಾ
ನಾಗ್ ಅಶ್ವಿನ್ ನಿರ್ದೇಶನ ಪ್ರಭಾಸ್ ಅಭಿನಯದ `ಕಲ್ಕಿ 2898 ಎಡಿ‘ ವಿಶ್ವಾದ್ಯಂತ 1000 ಕೋಟಿ ರೂ. ಗಳಿಕೆ ಕಂಡಿದೆ.
ನಾಗ್ ಅಶ್ವಿನ್ ನಿರ್ದೇಶನ ಪ್ರಭಾಸ್ ಅಭಿನಯದ `ಕಲ್ಕಿ 2898 ಎಡಿ‘ ವಿಶ್ವಾದ್ಯಂತ 1000 ಕೋಟಿ ರೂ. ಗಳಿಕೆ ಕಂಡಿದೆ.
ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಬಿಡುಗಡೆಯಾದ 15 ದಿನಗಳಲ್ಲಿ ವಿಶ್ವಾದ್ಯಂತ 1000 ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಈ ಬಗ್ಗೆ ಕಲ್ಕಿ 2898 AD ಚಿತ್ರತಂಡ ಹಂಚಿಕೊಂಡಿದೆ.
ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಅವರು ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ.ಕಲ್ಕಿ 2898 ಎಡಿ ಬಾಕ್ಸ್ ಆಫೀಸ್‌ನಲ್ಲಿ 1,000 ಕೋಟಿಗಳನ್ನು ದಾಟಿದೆ” ಎಂದು ಬರೆದಿದ್ದಾರೆ. ಜುಲೈ 8 ರಂದು, ಚಿತ್ರ ವಿಶ್ವಾದ್ಯಂತ 900 ಕೋಟಿ ರೂ. ದಾಟಿದೆ ಎಂದು ಅಧಿಕೃತ ವೈಜಯಂತಿ ಮೂವೀಸ್ ಹ್ಯಾಂಡಲ್‌ನಲ್ಲಿ ತಂಡವು ಹಂಚಿಕೊಂಡಿತ್ತು.
#KALKI2898AD has crossed 1,000 Crs at the WW Box office.. 🔥
— Ramesh Bala (@rameshlaus) July 11, 2024
ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದು, ಜೂನ್ 27 ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು. ‘ಕಲ್ಕಿ 2898 ಎಡಿ’ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಿಲೀಸ್ ಆಗಿದೆ. ವೈಜಯಂತಿ ಮೂವಿಸ್ ಮೂಲಕ ಅಶ್ವಿನಿ ದತ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. , ಇದು ಭಾರತೀಯ ಚಿತ್ರರಂಗದಲ್ಲಿ ಅವರ ಮೂರನೇ ಅತಿದೊಡ್ಡ ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ.