CCL 2026: Actor Sudeep-led Karnataka Bulldozers crowned champions after 12 years
x

ಟ್ರೋಫಿಗೆ ಮುತ್ತಿಟ್ಟ ನಾಯಕ ಸುದೀಪ್‌

ಸಿಸಿಎಲ್ 2026: 12 ವರ್ಷಗಳ ಬಳಿಕ ನಟ ಸುದೀಪ್ ಸಾರಥ್ಯದ ಕರ್ನಾಟಕ ಬುಲ್ಡೋಜರ್ಸ್‌ಗೆ ಚಾಂಪಿಯನ್ ಪಟ್ಟ

ಕರ್ನಾಟಕ ತಂಡವು ಲೀಗ್‌ನಲ್ಲಿ ಅಜೇಯವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಸೆಮಿಫೈನಲ್‌ನಲ್ಲಿ ಚೆನ್ನೈ ತಂಡದ ವಿರುದ್ಧ ಗೆಲುವು ಸಾಧಿಸಿದ್ದ ಕರ್ನಾಟಕ ಬುಲ್ಡೋಜರ್ಸ್‌ ತಂಡ ಫೈನಲ್‌ನಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು ಸೋಲಿಸಿ ಟ್ರೋಫಿಗೆ ಮುತ್ತಿಟ್ಟಿತು.


Click the Play button to hear this message in audio format

ಭಾರತೀಯ ಚಿತ್ರರಂಗದ ನಟರ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ನ 12ನೇ ಆವೃತ್ತಿಯಲ್ಲಿ ನಟ ಸುದೀಪ್‌ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡವು 12 ವರ್ಷಗಳ ನಂತರ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಮೂರನೇ ಬಾರಿ ಪ್ರಶಸ್ತಿ ಜಯಿಸಿದೆ.

ತಮಿಳುನಾಡಿನ ಕೊಯಮತ್ತೂರಿನ ಶ್ರೀ ರಾಮಕೃಷ್ಣ ಆರ್ಟ್ಸ್ ಆ್ಯಂಡ್​ ಸೈನ್ಸ್ ಕಾಲೇಜು ಮೈದಾನದಲ್ಲಿ ಭಾನುವಾರ(ಫೆ.1) ನಡೆದ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವು ಫೈನಲ್‌ನಲ್ಲಿ ನಟ ಜೆಶು ಸೆಂಗುಪ್ತ ನಾಯಕತ್ವದ ಬೆಂಗಾಲ್ ಟೈಗರ್ಸ್ ತಂಡವನ್ನು ಸೋಲಿಸಿ ಟ್ರೋಫಿ ಗೆದ್ದುಕೊಂಡಿತು. ಆ ಮೂಲಕ 12 ವರ್ಷಗಳ ಕಾಯುವಿಕೆ ನಂತರ ಮತ್ತೆ ಚಾಂಪಿಯನ್ ಪಟ್ಟಕ್ಕೇರಿದೆ.

ಅಜೇಯ ಗೆಲುವು

ಈ ಬಾರಿಯ ಟೂರ್ನಮೆಂಟ್‌ನಲ್ಲಿ ಕರ್ನಾಟಕ ತಂಡವು ಯಾವುದೇ ಪಂದ್ಯವನ್ನು ಸೋಲದೆ ಅಜೇಯವಾಗಿ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದೆ. ಸೆಮಿಫೈನಲ್‌ನಲ್ಲಿ ಚೆನ್ನೈ ತಂಡದ ವಿರುದ್ಧ ಗೆಲುವು ಸಾಧಿಸಿದ್ದ ಕರ್ನಾಟಕ ಬುಲ್ಡೋಜರ್ಸ್‌ ತಂಡ ಫೈನಲ್‌ನಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು ಸೋಲಿಸಿ ಟ್ರೋಫಿಗೆ ಮುತ್ತಿಟ್ಟಿತು.

ಸುದೀಪ್‌ಗೆ ಮನರಂಜಕ ಪ್ರಶಸ್ತಿ

ಕರ್ನಾಟಕ ಬುಲ್ಡೋಜರ್ಸ್‌ ತಂಡದ ನಾಯಕ ನಟ ಸುದೀಪ್‌ 'ಎಂಟರ್ಟೈನರ್ ಆಫ್ ದಿ ಮ್ಯಾಚ್' ಪ್ರಶಸ್ತಿ ಪಡೆದರು.

ಲೀಗ್‌ನಲ್ಲಿ ಭಾಗವಹಿಸಿದ್ದ ತಂಡಗಳು

2011 ರಿಂದ ಆರಂಭವಾದ ಸೆಲಬ್ರಿಟಿ ಕ್ರಿಕೆಟ್‌ ಲೀಗ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್‌, ತೆಲುಗು ವಾರಿಯರ್ಸ್‌, ಮುಂಬೈ ಹಿರೋಸ್‌, ಬೆಂಗಾಲ್‌ ಟೈಗರ್ಸ್‌, ಭೋಜಪುರಿ ದಬಾಂಗ್ಸ್‌, ಚೆನ್ನೈ ಕಿಂಗ್ಸ್‌, ಕೇರಳ ಸ್ಟ್ರೈಕರ್ಸ್‌ ಹಾಗೂ ಪಂಜಾಬ್‌ ದೆ ಶೇರ್ಸ್‌ ತಂಡಗಳು ಭಾಗವಹಿಸುತ್ತಿದ್ದು, ತೆಲುಗು ವಾರಿಯರ್ಸ್‌ ನಾಲ್ಕು ಬಾರಿ, ಕರ್ನಾಟಕ ಮೂರು ಬಾರಿ, ಚೆನ್ನೈ ಎರಡು ಬಾರಿ, ಪಂಜಾಬ್‌ ಹಾಗೂ ಬೆಂಗಾಲ್‌ ಒಂದು ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ.

ಪ್ರಶಸ್ತಿ ಜಯಿಸಿದ ನಂತರ ಆಟಗಾರರು ಟ್ರೋಫಿ ಹಿಡಿದು ಸಂಭ್ರಮಿಸಿದರು.

Read More
Next Story