2nd PUC Result 2026| ದ್ವಿತೀಯ ಪಿಯುಸಿ ರಿಸಲ್ಟ್‌ ಪ್ರಕಟ- ಶೇ.86ರಷ್ಟು ಫಲಿತಾಂಶ!
x

2nd PUC Result 2026| ದ್ವಿತೀಯ ಪಿಯುಸಿ ರಿಸಲ್ಟ್‌ ಪ್ರಕಟ- ಶೇ.86ರಷ್ಟು ಫಲಿತಾಂಶ!

2026ರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ! ನಿಮ್ಮ ಅಂಕಗಳನ್ನು https://karresults.nic.in ನಲ್ಲಿ ವೀಕ್ಷಿಸಿ. ಸಂಜೆ 6ಕ್ಕೆ ಶಿಕ್ಷಣ ಸಚಿವರಿಂದ ಅಧಿಕೃತ ಘೋಷಣೆ. ಹೆಚ್ಚಿನ ವಿವರಗಳಿಗಾಗಿ ಓದಿ.


Click the Play button to hear this message in audio format

2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವು ಪ್ರಕಟವಾಗಿದ್ದು, ವಿದ್ಯಾರ್ಥಿಗಳು ಆನ್​​ಲೈನ್ ಮೂಲಕ ತಮ್ಮ ಅಂಕಗಳನ್ನು ವೀಕ್ಷಿಸಬಹುದಾಗಿದೆ. ಈ ಬಾರಿ ದಾಖಲೆಯ ಫಲಿತಾಂಶ ಪ್ರಕಟವಾಗಿದ್ದು, ಶೇ.೮೬ರಷ್ಟು ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ ಆದ https://karresults.nic.in ಮೂಲಕ ತಮ್ಮ ಫಲಿತಾಂಶವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಒಂದು ವೇಳೆ ಅಧಿಕೃತ ಜಾಲತಾಣದಲ್ಲಿ ತಾಂತ್ರಿಕ ತೊಂದರೆ ಅಥವಾ ಸರ್ವರ್ ಸಮಸ್ಯೆ ಉಂಟಾದಲ್ಲಿ ಪರ್ಯಾಯವಾಗಿ ಡಿಜಿಲಾಕರ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಬಳಸಿಯೂ ಫಲಿತಾಂಶವನ್ನು ಪರಿಶೀಲಿಸುವ ಅವಕಾಶ ಕಲ್ಪಿಸಲಾಗಿದೆ.

ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಗುರುವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಚೇರಿಯಲ್ಲಿ ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯು ಕೆಎಸ್‌ಇಎಬಿ ಕರ್ನಾಟಕ ದ್ವಿತೀಯ ಪಿಯುಸಿ ಟಾಪರ್‌ಗಳ ಪಟ್ಟಿ, ಒಟ್ಟಾರೆ ಉತ್ತೀರ್ಣ ಶೇಕಡಾವಾರು ಮತ್ತು ಜಿಲ್ಲಾವಾರು ಕಾರ್ಯಕ್ಷಮತೆಯನ್ನು ಬಿಡುಗಡೆ ಮಾಡಲಿದೆ.

ಈ ವರ್ಷದ ಪರೀಕ್ಷಾ ಪ್ರಕ್ರಿಯೆಯು ಫೆಬ್ರವರಿ 28ರಿಂದ ಮಾರ್ಚ್ 12ರವರೆಗೆ ರಾಜ್ಯದ ಒಟ್ಟು 1217 ಕೇಂದ್ರಗಳಲ್ಲಿ ಯಶಸ್ವಿಯಾಗಿ ಜರುಗಿದ್ದು, 5174 ಕಾಲೇಜುಗಳಿಂದ ಸುಮಾರು 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗಾಗಿ ನೋಂದಾಯಿಸಿಕೊಂಡಿದ್ದರು. ಒಟ್ಟು ಅಭ್ಯರ್ಥಿಗಳ ಪೈಕಿ ವಿಜ್ಞಾನ ವಿಭಾಗದಲ್ಲಿ 2.92 ಲಕ್ಷ ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 2.11 ಲಕ್ಷ ವಿದ್ಯಾರ್ಥಿಗಳು ಹಾಗೂ ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದಾರೆ. ಇದೀಗ ಎಲ್ಲ ವಿದ್ಯಾರ್ಥಿಗಳ ಕಾಯುವಿಕೆ ಅಂತ್ಯವಾಗಿದ್ದು, ಅಧಿಕೃತ ಜಾಲತಾಣಗಳಲ್ಲಿ ಅಂಕಪಟ್ಟಿಗಳು ಲಭ್ಯವಿವೆ.

ಈ ಮೊದಲು ಪಾಸ್‌ ಆಗಲು ಕನಿಷ್ಠ 35 ಅಂಕಗಳು ಬೇಕಿದ್ದವು. ಆದರೆ, ಇದೀಗ KSEAB ಇದನ್ನು ಕಡಿಮೆ ಮಾಡಿದ್ದು, ಪ್ರತಿ ವಿಷಯದಲ್ಲಿ ಕನಿಷ್ಠ 30 ಮಾರ್ಕ್ಸ್‌ಗಳನ್ನು ಬಂದರೆ ಸಾಕು ಉತ್ತೀರ್ಣರಾಗುತ್ತಾರೆ.

ಡಿಜಿಲಾಕರ್‌ನಲ್ಲೂ ಫಲಿತಾಂಶ ಲಭ್ಯ

2025-26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ವಿದ್ಯಾರ್ಥಿಗಳು ಈ ವರ್ಷ ಪ್ರಥಮ ಬಾರಿಗೆ ಡಿಜಿಲಾಕರ್‌ನಲ್ಲೂ https://www.digilocker.govt.in ನಲ್ಲೂ ವೀಕ್ಷಿಸಬಹುದಾಗಿದೆ. ಇದಲ್ಲದೆ ಇದೇ ಮೊದಲ ಬಾರಿಗೆ, ಫಲಿತಾಂಶ ಪ್ರಕಟವಾದ ದಿನವೇ (ಏಪ್ರಿಲ್ 9) ವಿದ್ಯಾರ್ಥಿಗಳ ಅಂಕಪಟ್ಟಿಯನ್ನು National Academic Depository (NAD) ಮತ್ತು DigiLocker ಮೂಲಕ ಒದಗಿಸಲು ನಿರ್ಧರಿಸಲಾಗಿದೆ.

ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದಾಗ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿ ವಿದ್ಯಾರ್ಥಿಗಳು ಪರದಾಡಬೇಕಾಗುತ್ತಿತ್ತು. ಆದರೆ ಈ ಹೊಸ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು ಯಾವುದೇ ಅಡೆತಡೆಯಿಲ್ಲದೆ, ತ್ವರಿತವಾಗಿ ಮತ್ತು ಸುರಕ್ಷಿತವಾಗಿ ತಮ್ಮ ಅಂಕಪಟ್ಟಿಯನ್ನು ತಮ್ಮ ಮೊಬೈಲ್‌ನಲ್ಲೇ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಮುಂದಿನ ವರ್ಷದಿಂದ ಕಾಗದದ ಅಂಕಪಟ್ಟಿ ಇರಲ್ಲ!

ಈ ವರ್ಷ ವಿದ್ಯಾರ್ಥಿಗಳಿಗೆ ಭೌತಿಕ ಅಂಕಪಟ್ಟಿಯ ಪ್ರತಿಯನ್ನು ನೀಡಲು ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ, ಮುಂದಿನ ಶೈಕ್ಷಣಿಕ ಸಾಲಿನಿಂದ (2026-27) ಕಾಗದ ರೂಪದ ಭೌತಿಕ ಪ್ರತಿಗಳನ್ನು ವಿತರಿಸುವ ಪದ್ಧತಿಗೆ ಬ್ರೇಕ್ ಹಾಕಲಾಗುತ್ತಿದೆ. ಬದಲಿಗೆ, ವಿದ್ಯಾರ್ಥಿಗಳ ದಾಖಲೆಗಳನ್ನು APAAR (Automated Permanent Academic Account Registry) ಐಡಿ ಮೂಲಕ ಕಡ್ಡಾಯವಾಗಿ NAD-DigiLocker ನಲ್ಲೇ ಒದಗಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Read More
Next Story