PUC Result | ನಾಳೆ ಮಧ್ಯಾಹ್ನ ಫಲಿತಾಂಶ ಪ್ರಕಟ, ರಿಸಲ್ಟ್ ಚೆಕ್ ಮಾಡಲು ಇಲ್ಲಿವೆ ಡೈರೆಕ್ಟ್ ಲಿಂಕ್‌ಗಳು!
x

ಸಾಂದರ್ಭಿಕ ಚಿತ್ರ

PUC Result | ನಾಳೆ ಮಧ್ಯಾಹ್ನ ಫಲಿತಾಂಶ ಪ್ರಕಟ, ರಿಸಲ್ಟ್ ಚೆಕ್ ಮಾಡಲು ಇಲ್ಲಿವೆ ಡೈರೆಕ್ಟ್ ಲಿಂಕ್‌ಗಳು!

ಈ ವರ್ಷದ ವಿಶೇಷವೆಂದರೆ, ಪರೀಕ್ಷೆಯ ಫಲಿತಾಂಶ ಪ್ರಕಟವಾದ ತಕ್ಷಣವೇ ವಿದ್ಯಾರ್ಥಿಗಳ ಅಂಕಪಟ್ಟಿಯು ಡಿಜಿಲಾಕರ್ (DigiLocker) ನಲ್ಲಿ ಲಭ್ಯವಾಗಲಿದೆ.


Click the Play button to hear this message in audio format

ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ರ ಸಾಲಿನ ದ್ವಿತೀಯ ಪಿಯುಸಿ (ಪರೀಕ್ಷೆ-1) ಫಲಿತಾಂಶದ ದಿನಾಂಕ ಹಾಗೂ ಸಮಯ ನಿಗದಿಯಾಗಿದ್ದು, ಏ. 9 ರಂದು ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ಫಲಿತಾಂಶ ಹೊರಬೀಳಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಪ್ರಕಟಿಸಿದೆ.

ಈ ಬಾರಿ ಪರೀಕ್ಷೆ ಆರಂಭಕ್ಕೂ ಮುನ್ನವೇ ಏ.7ರಂದು ಫಲಿತಾಂಶ ಪ್ರಕಟಮಾಡುವುದಾಗಿ ಮಂಡಳಿ ಅಧಿಕೃತ ದಿನಾಂಕ ಪ್ರಕಟಿಸಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ನಿಗದಿತ ಸಮಯಕ್ಕೆ ಫಲಿತಾಂಶ ನೀಡಲು ವಿಳಂಬವಾಗಿದ್ದು, ಏ.9ರಂದು ಫಲಿತಾಂಶ ಪ್ರಕಟಿಸಲು ನಿರ್ಧರಿಸಿದೆ.

ಫಲಿತಾಂಶ ನೋಡುವುದು ಹೇಗೆ?

ವಿದ್ಯಾರ್ಥಿಗಳು ವಿವಿಧ ಮಾರ್ಗಗಳ ಮೂಲಕ ತಮ್ಮ ಫಲಿತಾಂಶವನ್ನು ಪಡೆಯಬಹುದು. ಅಧಿಕೃತ ವೆಬ್‌ಸೈಟ್ https://karresults.nic.in ಕರ್ನಾಟಕ ಒನ್ (KarnatakaOne) ಮೊಬೈಲ್ ಆಪ್ ಮೂಲಕವೂ ಫಲಿತಾಂಶ ಪಡೆಯಬಹುದು. ವಿದ್ಯಾರ್ಥಿಗಳು ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಮಂಡಲಿಯು ವಾಟ್ಸಾಪ್ ಅಥವಾ ಎಸ್‌ಎಂಎಸ್ ಮೂಲಕ ನೇರವಾಗಿ ಫಲಿತಾಂಶವನ್ನು ಕಳುಹಿಸಲಿದೆ.

ಡಿಜಿಲಾಕರ್‌ನಲ್ಲಿ ಮೊದಲ ಬಾರಿಗೆ ಅಂಕಪಟ್ಟಿ!

ಈ ವರ್ಷದ ವಿಶೇಷವೆಂದರೆ, ಪರೀಕ್ಷೆಯ ಫಲಿತಾಂಶ ಪ್ರಕಟವಾದ ತಕ್ಷಣವೇ ವಿದ್ಯಾರ್ಥಿಗಳ ಅಂಕಪಟ್ಟಿಯು ಡಿಜಿಲಾಕರ್ (DigiLocker) ನಲ್ಲಿ ಲಭ್ಯವಾಗಲಿದೆ. ವಿದ್ಯಾರ್ಥಿಗಳು https://www.digilocker.gov.in ಗೆ ಭೇಟಿ ನೀಡಿ ತಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕಾಲೇಜುಗಳಿಗೆ ಫಲಿತಾಂಶ ರವಾನೆ

ವಿದ್ಯಾರ್ಥಿಗಳ ಫಲಿತಾಂಶದ ಪಟ್ಟಿಯನ್ನು ಏ. 9ರ ಮಧ್ಯಾಹ್ನ 3 ಗಂಟೆಗೆ ಆಯಾ ಕಾಲೇಜುಗಳ ಲಾಗಿನ್ ಐಡಿಗಳಿಗೂ ಮಂಡಲಿಯು ಲಭ್ಯವಾಗುವಂತೆ ಮಾಡಲಿದೆ. ಡಿಜಿಲಾಕರ್‌ನಿಂದ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನದ ಕುರಿತು ವಿದ್ಯಾರ್ಥಿಗಳ ನೆರವಿಗಾಗಿ ಮಂಡಳಿಯು ವಿಡಿಯೋ ಲಿಂಕ್ ಅನ್ನು ಕೂಡ ಹಂಚಿಕೊಂಡಿದೆ. ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಮತ್ತು ಸುಲಭವಾಗಿ ಫಲಿತಾಂಶ ತಲುಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡಳಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More
Next Story