ದ್ವಿತೀಯ ಪಿಯು ಫಲಿತಾಂಶ  : ಉಡುಪಿ ಫಸ್ಟ್, ದಕ್ಷಿಣ ಕನ್ನಡ ಸೆಕೆಂಡ್, ಇಲ್ಲಿದೆ ಜಿಲ್ಲಾವಾರು ಫಲಿತಾಂಶ ವಿವರ
x

ದ್ವಿತೀಯ ಪಿಯು ಫಲಿತಾಂಶ : ಉಡುಪಿ ಫಸ್ಟ್, ದಕ್ಷಿಣ ಕನ್ನಡ ಸೆಕೆಂಡ್, ಇಲ್ಲಿದೆ ಜಿಲ್ಲಾವಾರು ಫಲಿತಾಂಶ ವಿವರ

2025-26ರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ ಸ್ಥಾನ ಗಳಿಸಿದ್ದರೆ, ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಕರಾವಳಿ ಜಿಲ್ಲೆಗಳು ಈ ಬಾರಿಯೂ ಶೈಕ್ಷಣಿಕ ಪಾರಮ್ಯ ಮೆರೆದಿವೆ.


Click the Play button to hear this message in audio format

ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ಎಂದಿನಂತೆ ಕರಾವಳಿ ಜಿಲ್ಲೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಪಾರಮ್ಯ ಮೆರೆದಿವೆ. ಒಟ್ಟಾರೆ ಶೇಕಡಾ 96.39ರಷ್ಟು ಉತ್ತೀರ್ಣ ಪ್ರಮಾಣದೊಂದಿಗೆ ಉಡುಪಿ ಜಿಲ್ಲೆ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಉಳಿಸಿಕೊಂಡರೆ, ದಕ್ಷಿಣ ಕನ್ನಡ ಜಿಲ್ಲೆ ಅತ್ಯಲ್ಪ ಅಂತರದಲ್ಲಿ (ಶೇ. 96.35) ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಈ ಬಾರಿ ರಾಜ್ಯದ ಒಟ್ಟಾರೆ ಉತ್ತೀರ್ಣ ಪ್ರಮಾಣ ಶೇ. 86.48ರಷ್ಟಿದ್ದು, ಕಳೆದ ಬಾರಿಗೆ (ಶೇ. 73.45) ಹೋಲಿಸಿದರೆ ಫಲಿತಾಂಶದಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ಕೊಡಗಿಗೆ ತೃತೀಯ ಸ್ಥಾನ, ವಿಜಯಪುರಕ್ಕೆ ಬೃಹತ್ ಜಿಗಿತ

ಕರಾವಳಿ ಜಿಲ್ಲೆಗಳ ಬೆನ್ನಲ್ಲೇ ಮಲೆನಾಡಿನ ಕೊಡಗು ಜಿಲ್ಲೆಯು ಶೇ. 92.34ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಕಳೆದ ಬಾರಿ ಕೇವಲ ಶೇ. 58.81ರಷ್ಟು ಫಲಿತಾಂಶ ಪಡೆದು ಅಂತಿಮ ಸ್ಥಾನಗಳಲ್ಲಿದ್ದ ವಿಜಯಪುರ ಜಿಲ್ಲೆ, ಈ ಬಾರಿ ಭರ್ಜರಿ ಸಾಧನೆ ಮಾಡಿದ್ದು, ಶೇ. 92.00ರಷ್ಟು ಉತ್ತೀರ್ಣ ಪ್ರಮಾಣದೊಂದಿಗೆ ನಾಲ್ಕನೇ ಸ್ಥಾನಕ್ಕೆ ಜಿಗಿದು ಅಚ್ಚರಿ ಮೂಡಿಸಿದೆ. ಉತ್ತರ ಕನ್ನಡ (ಶೇ. 91.78) ಐದನೇ ಸ್ಥಾನ ಪಡೆದುಕೊಂಡಿದೆ.

ಯಾದಗಿರಿಗೆ ಮತ್ತೆ ಕೊನೆಯ ಸ್ಥಾನ

ಶೈಕ್ಷಣಿಕವಾಗಿ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದ ಕೆಲವು ಜಿಲ್ಲೆಗಳು ಈ ಬಾರಿಯೂ ಹಿನ್ನಡೆ ಅನುಭವಿಸಿವೆ. ಕಳೆದ ಬಾರಿಗಿಂತ ಹೆಚ್ಚಿನ ಪಾಸ್ ಪರ್ಸೆಂಟೇಜ್ ಪಡೆದಿದ್ದರೂ, ಶೇಕಡಾ 71.21ರಷ್ಟು ಫಲಿತಾಂಶ ದಾಖಲಿಸಿರುವ ಯಾದಗಿರಿ ಜಿಲ್ಲೆ ರಾಜ್ಯದಲ್ಲಿಯೇ ಅತಿ ಕಳಪೆ ಸಾಧನೆ ಮಾಡುವ ಮೂಲಕ ಮತ್ತೆ ಕೊನೆಯ ಸ್ಥಾನ (32ನೇ ಸ್ಥಾನ) ಪಡೆದಿದೆ. ರಾಯಚೂರು (ಶೇ. 74.09), ಗದಗ (ಶೇ. 76.65) ಮತ್ತು ಕಲಬುರಗಿ (ಶೇ. 76.97) ಜಿಲ್ಲೆಗಳು ಸಹ ಅಂತಿಮ ಸ್ಥಾನಗಳಲ್ಲಿವೆ.

ಜಿಲ್ಲಾವಾರು ವಿವರ ಇಲ್ಲಿದೆ

1. ಉಡುಪಿ - 96.39%

2. ದಕ್ಷಿಣ ಕನ್ನಡ - 96.35%

3. ಕೊಡಗು - 92.34%

4. ವಿಜಯಪುರ - 92.00%

5. ಉತ್ತರ ಕನ್ನಡ - 91.78%

6. ಬೆಂಗಳೂರು ಗ್ರಾಮಾಂತರ - 91.00%

7. ಚಿಕ್ಕಮಗಳೂರು - 90.80%

8. ಬೆಂಗಳೂರು ದಕ್ಷಿಣ - 90.55%

9. ಚಿಕ್ಕಬಳ್ಳಾಪುರ - 90.24%

10. ಬೆಂಗಳೂರು ಉತ್ತರ - 90.05%

11. ಹಾಸನ - 89.71%

12. ಮಂಡ್ಯ - 88.85%

13. ರಾಮನಗರ - 87.90%

14. ಶಿವಮೊಗ್ಗ - 87.62%

15. ಕೋಲಾರ - 87.38%

16. ತುಮಕೂರು - 86.89%

17. ಕೊಪ್ಪಳ - 86.80%

18. ಮೈಸೂರು - 84.80%

19. ಚಾಮರಾಜನಗರ - 84.68%

20. ಬೀದರ್ - 84.61%

21. ಬಾಗಲಕೋಟೆ - 84.12%

22. ಹಾವೇರಿ - 84.11%

23. ಧಾರವಾಡ - 83.31%

24. ಚಿಕ್ಕೋಡಿ - 83.10%

25. ದಾವಣಗೆರೆ - 81.99%

26. ಬೆಳಗಾವಿ - 80.32%

27. ಚಿತ್ರದುರ್ಗ - 79.12%

28. ಬಳ್ಳಾರಿ - 78.69%

29. ಕಲಬುರಗಿ - 76.97%

30. ಗದಗ - 76.65%

31. ರಾಯಚೂರು - 74.09%

32. ಯಾದಗಿರಿ - 71.21%

Read More
Next Story