ರೇಣುಕಾಸ್ವಾಮಿ ಕೊಲೆ ಕೇಸ್: ಇಂದು ಸಾಕ್ಷಿದಾರ ಪುನೀತ್‌ಗೆ ಪಾಟಿಸವಾಲು- ದರ್ಶನ್‌ಗೆ ಮತ್ತಷ್ಟು ಸಂಕಷ್ಟ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಸಾಕ್ಷಿ ಪುನೀತ್ ವಿಚಾರಣೆ ನಡೆಯಲಿದೆ. ಈ ಹಿಂದೆ ಗೊತ್ತಿಲ್ಲ, ನೋಡಿಲ್ಲ ಎಂದಿದ್ದ ಪುನೀತ್‌ರನ್ನು ಪ್ರತಿಕೂಲ ಸಾಕ್ಷಿ ಎಂದು ಘೋಷಿಸಲು ಎಸ್‌ಪಿಪಿ ಮನವಿ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಮಹತ್ವದ ವಿಚಾರಣೆ ನಡೆಯಲಿದೆ. 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣೆಯಲ್ಲಿ ಇಂದು ಎಲ್ಲರ ಗಮನ ಸಾಕ್ಷಿ ಪುನೀತ್ ಮೇಲಿರಲಿದೆ. ಪ್ರಕರಣದ ಐ ವಿಟ್ನೆಸ್ ಆಗಿರುವ ಪುನೀತ್, ಈ ಹಿಂದೆ ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಕೇಳಿದ ಪ್ರಶ್ನೆಗಳಿಗೆ, 'ಗೊತ್ತಿಲ್ಲ, ನೋಡಿಲ್ಲ, ನೆನಪಿಲ್ಲ' ಎಂದು ಉತ್ತರಿಸಿದ್ದರು. ಹೀಗಾಗಿ ಅವರನ್ನು ಪ್ರತಿಕೂಲ ಸಾಕ್ಷಿ ಎಂದು ಘೋಷಿಸುವಂತೆ ಎಸ್‌ಪಿಪಿ ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
Next Story
