
ಪೊಲೀಸರು ತನಿಖೆ ತೀವ್ರಗೊಳಿಸುತ್ತಿದ್ದಂತೆ, ಗ್ರಾಮಸ್ಥರು ಅದೇ ಗ್ರಾಮದ ಯುವಕ ವೀರಭದ್ರನ ವರ್ತನೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಗ್ರಾಮಸ್ಥರ ಸುಳಿವಿನ ಮೇರೆಗೆ ಶುಕ್ರವಾರ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಹಣಕ್ಕಾಗಿ 90 ವರ್ಷದ ವೃದ್ಧೆಯ ಬರ್ಬರ ಹತ್ಯೆ, ಮನೆಯ ಹಿಂಭಾಗದ ಯುಜಿಡಿ ಗುಂಡಿಯಲ್ಲಿ ಶವ ಪತ್ತೆ
ಸುಮಾರು ಹತ್ತು ದಿನಗಳ ಹಿಂದೆ ಆರೋಪಿ ವೀರಭದ್ರ ಹಣ ಮತ್ತು ಒಡವೆಗಾಗಿ ಈ ಕೃತ್ಯವೆಸಗಿದ್ದ ಎನ್ನಲಾಗಿದೆ. ಏಪ್ರಿಲ್ ತಿಂಗಳಾಂತ್ಯದಲ್ಲಿ ಗೌರಮ್ಮ ಅವರು ಏಕಾಏಕಿ ನಾಪತ್ತೆಯಾಗಿದ್ದರು.
ಹಣದಾಸೆಗಾಗಿ 90 ವರ್ಷದ ವೃದ್ಧೆಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಗೋಣಿಚೀಲದಲ್ಲಿ ಕಟ್ಟಿ ಮನೆಯ ಹಿಂಭಾಗದ ಶೌಚಗುಂಡಿಯಲ್ಲಿ (ಯುಜಿಡಿ) ಮುಚ್ಚಿಟ್ಟಿದ್ದ ಭೀಕರ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ತಿಪ್ಪೂರು ಗ್ರಾಮದಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.
ಗ್ರಾಮದ ನಿವಾಸಿ, ಮೂಡಲಶೆಟ್ಟಿ ಅವರ ಪತ್ನಿ ಗೌರಮ್ಮ (90) ಹತ್ಯೆಗೀಡಾದ ದುರ್ದೈವಿ. ಇದೇ ಗ್ರಾಮದ ವೀರಭದ್ರ ಎಂಬಾತನೇ ಈ ಕೃತ್ಯವೆಸಗಿದ ಆರೋಪಿ.
ಘಟನೆಯ ವಿವರ:
ಸುಮಾರು ಹತ್ತು ದಿನಗಳ ಹಿಂದೆ ಆರೋಪಿ ವೀರಭದ್ರ ಹಣ ಮತ್ತು ಒಡವೆಗಾಗಿ ಈ ಕೃತ್ಯವೆಸಗಿದ್ದ ಎನ್ನಲಾಗಿದೆ. ಏಪ್ರಿಲ್ ತಿಂಗಳಾಂತ್ಯದಲ್ಲಿ ಗೌರಮ್ಮ ಅವರು ಏಕಾಏಕಿ ನಾಪತ್ತೆಯಾಗಿದ್ದರು. ತಾಯಿ ನಾಪತ್ತೆಯಾಗಿರುವ ಬಗ್ಗೆ ಅವರ ಪುತ್ರ ಸದಾನಂದ ಅವರು ಏಪ್ರಿಲ್ 27ರಂದು ಕೆ.ಆರ್.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಇದು ಕೊಲೆಯಾಗಿರಬಹುದು ಎಂಬ ಅನುಮಾನ ಬಂದಿರಲಿಲ್ಲ.
ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
ಪೊಲೀಸರು ತನಿಖೆ ತೀವ್ರಗೊಳಿಸುತ್ತಿದ್ದಂತೆ, ಗ್ರಾಮಸ್ಥರು ಅದೇ ಗ್ರಾಮದ ಯುವಕ ವೀರಭದ್ರನ ವರ್ತನೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಗ್ರಾಮಸ್ಥರ ಸುಳಿವಿನ ಮೇರೆಗೆ ಶುಕ್ರವಾರ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಆತ, ಹಣಕ್ಕಾಗಿ ತಾನೇ ವೃದ್ಧೆಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕೃತ್ಯದ ಬಳಿಕ ಯಾರಿಗೂ ಅನುಮಾನ ಬಾರದಂತೆ ಮೃತದೇಹವನ್ನು ಚೀಲದಲ್ಲಿ ತುಂಬಿ ಮನೆಯ ಹಿಂಭಾಗದಲ್ಲಿದ್ದ ಶೌಚಗುಂಡಿಯಲ್ಲಿ ಹೂತು ಹಾಕಿರುವುದಾಗಿ ಬಾಯಿಬಿಟ್ಟಿದ್ದಾನೆ.
ಆರೋಪಿಯ ಮಾಹಿತಿಯ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಶೌಚಗುಂಡಿಯಿಂದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್.ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

