Brutal murder of MBA student; Accused stands there smiling without any remorse
x

 ಆರೋಪಿ ಪಿಯೂಷ್ ಧಮನೋಡಿಯಾ

ಎಂಬಿಎ ವಿದ್ಯಾರ್ಥಿನಿಯ ಭೀಕರ ಕೊಲೆ; ಕಿಂಚಿತ್ತೂ ಪಶ್ಚಾತ್ತಾಪವಿಲ್ಲದೆ ನಗುತ್ತಾ ನಿಂತ ಆರೋಪಿ

ಯುವತಿಯು ಬೇರೊಬ್ಬ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದಾಳೆ ಎಂಬ ಸಂಶಯ ಪಿಯೂಷ್‌ಗೆ ಇತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದ್ದು, ಆರೋಪಿ ಯುವತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


Click the Play button to hear this message in audio format

ಪ್ರೀತಿಯ ನಾಟಕವಾಡಿ ಸಹಪಾಠಿಯನ್ನೇ ಭೀಕರವಾಗಿ ಹತ್ಯೆಗೈದ ಎಂಬಿಎ ವಿದ್ಯಾರ್ಥಿನಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಿಯೂಷ್ ಧಮನೋಡಿಯಾ, ವಿಚಾರಣೆ ವೇಳೆ ಮತ್ತು ಮಾಧ್ಯಮಗಳ ಮುಂದೆ ತೋರಿರುವ ಉದ್ಧಟತನದ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

24 ವರ್ಷದ ಎಂಬಿಎ ವಿದ್ಯಾರ್ಥಿನಿಯನ್ನು ಉಸಿರುಗಟ್ಟಿಸಿ ಕೊಲೆಗೈದು, ಆಕೆಯ ಮೃತದೇಹದ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಪಿಯೂಷ್‌ನನ್ನು ಪೊಲೀಸರು ಸ್ಥಳ ಮಹಜರು ನಡೆಸಲು ಕರೆತಂದಿದ್ದರು. ಈ ವೇಳೆ ಮಾಧ್ಯಮದವರು "ಯಾಕೆ ಕೊಲೆ ಮಾಡಿದೆ?" ಎಂದು ಪ್ರಶ್ನಿಸಿದಾಗ, ಕಿಂಚಿತ್ತೂ ಪಶ್ಚಾತ್ತಾಪವಿಲ್ಲದೆ, "ಏನೂ ಆಗಿಲ್ಲ, ಬಿಟ್ಟುಬಿಡಿ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ," ಎಂದು ನಗುತ್ತಲೇ ಉತ್ತರಿಸಿರುವುದು ಆತನ ವಿಕೃತ ಮನಸ್ಥಿತಿಗೆ ಸಾಕ್ಷಿಯಾಗಿದೆ.

ಸಂಶಯದ ಭೂತ, ಪ್ರೀತಿಯ ಅಂತ್ಯ

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ಯುವತಿ ಮತ್ತು ಪಿಯೂಷ್ ಇಬ್ಬರೂ ಸಹಪಾಠಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಯುವತಿ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದಾಳೆ ಎಂಬ ಸಂಶಯ ಪಿಯೂಷ್‌ಗೆ ಕಾಡುತ್ತಿತ್ತು. ಇದೇ ವಿಚಾರವಾಗಿ ಫೆಬ್ರವರಿ 13ರಂದು ಇಬ್ಬರ ನಡುವೆ ಜಗಳ ನಡೆದಿದೆ. ಕೋಪಗೊಂಡ ಪಿಯೂಷ್, ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹದ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಬಾಡಿಗೆ ಮನೆಯಿಂದ ದುರ್ವಾಸನೆ ಬರಲಾರಂಭಿಸಿದಾಗ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು, ಫೆಬ್ರವರಿ 14ರಂದು ಮುಂಬೈನ ಅಂಧೇರಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಮಾಟಮಂತ್ರ, ಅಶ್ಲೀಲ ವಿಡಿಯೋ ಹಂಚಿಕೆ

ಕೊಲೆಯ ನಂತರ ಮುಂಬೈಗೆ ಪರಾರಿಯಾಗಿದ್ದ ಆರೋಪಿ, ಅಲ್ಲಿ ಮೃತ ಯುವತಿಯ ಆತ್ಮದೊಂದಿಗೆ ಮಾತನಾಡಲು ಮಾಟಮಂತ್ರ ಮತ್ತು ಅಘೋರಿ ಪೂಜೆಗಳನ್ನು ಮಾಡಿದ್ದಾನೆ ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ. ಅಷ್ಟೇ ಅಲ್ಲದೆ, ಯುವತಿಯ ಮೊಬೈಲ್‌ನಲ್ಲಿದ್ದ ಖಾಸಗಿ ವಿಡಿಯೋಗಳನ್ನು ಕಾಲೇಜಿನ ವಾಟ್ಸಾಪ್ ಗ್ರೂಪ್‌ಗಳಿಗೆ ಹಂಚುವ ಮೂಲಕ ಆಕೆಯ ತೇಜೋವಧೆ ಮಾಡಲು ಯತ್ನಿಸಿದ್ದಾನೆ.

ಸಾಕ್ಷ್ಯಗಳು ಲಭ್ಯ

ದ್ವಾರಕಾಪುರಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಮನೀಶ್ ಮಿಶ್ರಾ ಅವರ ಪ್ರಕಾರ, ಆರೋಪಿಯ ಪರ್ಸ್‌ನಲ್ಲಿ ಒಂದು ಪತ್ರ ಸಿಕ್ಕಿದ್ದು, ಅದರಲ್ಲಿ ಆತ ತನ್ನ ಪ್ರೇಯಸಿಯನ್ನು ಕೊಲೆ ಮಾಡಿರುವ ಬಗ್ಗೆ ಮತ್ತು ಅವರ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಬರೆದುಕೊಂಡಿದ್ದಾನೆ. ಘಟನಾ ಸ್ಥಳದಲ್ಲಿ ಚಾಕುವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿ ಹಂಚಿಕೊಂಡಿರುವ ವಿಡಿಯೋಗಳು ಮತ್ತು ಮೊಬೈಲ್ ಸಂಭಾಷಣೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ.

Read More
Next Story