ಕೊಲ್ಕತ್ತದಿಂದ ಶಿಲ್ಲಾಂಗ್‌ಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ
x

ಕೊಲ್ಕತ್ತದಿಂದ ಶಿಲ್ಲಾಂಗ್‌ಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ

ಬೆಳಗ್ಗೆ 9. 15ಕ್ಕೆ ಶಿಲ್ಲಾಂಗ್‌ಗೆ ಟೇಕಾಫ್ ಆಗಬೇಕಿದ್ದ ವಿಮಾನದಲ್ಲಿ, ಸಿಬ್ಬಂದಿಗೆ ಶೌಚಾಲಯದ ಒಳಗೆ ಅನುಮಾನಾಸ್ಪದ ಚೀಟಿ ಸಿಕ್ಕಿದ್ದು, ಅದರಲ್ಲಿ ಬಾಂಬ್​ ಬೆದರಿಕೆ ಹಾಕಲಾಗಿದೆ.


Click the Play button to hear this message in audio format

ಇಂಡಿಗೋ ವಿಮಾನ ಬಾಂಬ್ ಬೆದರಿಕೆ, ಕೊಲ್ಕತ್ತ ವಿಮಾನ ನಿಲ್ದಾಣ, ಶಿಲ್ಲಾಂಗ್ ವಿಮಾನ, ಬಾಂಬ್ ಬೆದರಿಕೆ ಪತ್ರ

ಕೊಲ್ಕತ್ತದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿಲ್ಲಾಂಗ್‌ಗೆ ಹೊರಡಲು ಸಜ್ಜಾಗಿದ್ದ ಇಂಡಿಗೋ ವಿಮಾನಕ್ಕೆ (6E3074) ಬಾಂಬ್ ಬೆದರಿಕೆ ಕರೆ ಬಂದಿದ್ದು, ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ವಿಮಾನದ ಶೌಚಾಲಯದಲ್ಲಿ ಬೆದರಿಕೆ ಪತ್ರವೊಂದು ಪತ್ತೆಯಾದ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ .

ಬೆಳಗ್ಗೆ 9. 15ಕ್ಕೆ ಶಿಲ್ಲಾಂಗ್‌ಗೆ ಟೇಕಾಫ್ ಆಗಬೇಕಿದ್ದ ವಿಮಾನದಲ್ಲಿ, ಸಿಬ್ಬಂದಿಗೆ ಶೌಚಾಲಯದ ಒಳಗೆ ಅನುಮಾನಾಸ್ಪದ ಚೀಟಿಯೊಂದು ಸಿಕ್ಕಿದೆ. ಅದರಲ್ಲಿ ಬಾಂಬ್ ಇರುವುದಾಗಿ ಬರೆಯಲಾಗಿತ್ತು ಎಂದು ವರದಿಯಾಗಿದೆ. ತಕ್ಷಣವೇ ಎಚ್ಚೆತ್ತ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರು.

ಪ್ರಯಾಣಿಕರು ಸುರಕ್ಷಿತ, ತೀವ್ರ ತಪಾಸಣೆ

ಬೆದರಿಕೆ ಪತ್ರ ಸಿಕ್ಕ ಕೂಡಲೇ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ವಿಮಾನ ನಿಲ್ದಾಣದ ನಿರ್ದೇಶಕರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ನಿಲ್ದಾಣದ ಪ್ರತ್ಯೇಕ ಸ್ಥಳಕ್ಕೆ (ಐಸೋಲೇಷನ್ ಬೇ) ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ, ಬಾಂಬ್ ನಿಷ್ಕ್ರಿಯ ದಳ ಮತ್ತು ಭದ್ರತಾ ಸಿಬ್ಬಂದಿ ವಿಮಾನದ ಮೂಲೆ ಮೂಲೆಯನ್ನೂ ತಪಾಸಣೆ ನಡೆಸುತ್ತಿದ್ದಾರೆ. ಇದು ಹುಸಿ ಬೆದರಿಕೆಯೋ ಅಥವಾ ನಿಜವೇ ಎಂಬುದು ತಪಾಸಣೆಯ ನಂತರವಷ್ಟೇ ತಿಳಿದುಬರಬೇಕಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕೆ ವಿಮಾನಯಾನ ಸಂಸ್ಥೆ ವಿಷಾದ ವ್ಯಕ್ತಪಡಿಸಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ .

Read More
Next Story