ಬೆಂಗಳೂರಿನಲ್ಲಿ ಮೆಟ್ರೋ ಹಳಿಯಲ್ಲಿ ವೃದ್ಧನ ವಾಕಿಂಗ್‌; 15 ನಿಮಿಷ ಸಂಚಾರ ವ್ಯತ್ಯಯ
x

ಬೆಂಗಳೂರಿನ ನಮ್ಮ ಮೆಟ್ರೋ ಹಳಿಯಲ್ಲಿ 65 ವರ್ಷದ ವ್ಯಕ್ತಿಯೊಬ್ಬರು ನಡೆದುಕೊಂಡು ಹೋದ ಕಾರಣ ನೇರಳೆ ಮಾರ್ಗದಲ್ಲಿ 15 ನಿಮಿಷ ರೈಲು ಸಂಚಾರ ಸ್ಥಗಿತಗೊಂಡಿತು. 

ಬೆಂಗಳೂರಿನಲ್ಲಿ ಮೆಟ್ರೋ ಹಳಿಯಲ್ಲಿ ವೃದ್ಧನ ವಾಕಿಂಗ್‌; 15 ನಿಮಿಷ ಸಂಚಾರ ವ್ಯತ್ಯಯ

ಅಕ್ಟೋಬರ್ 12ರ ರಾತ್ರಿ ಮೈಸೂರು ರಸ್ತೆ ಮತ್ತು ದೀಪಾಂಜಲಿ ನಗರ ಮೆಟ್ರೋ ನಿಲ್ದಾಣಗಳ ನಡುವಿನ ಹಳಿಗೆ ಸುಮಾರು 65 ವರ್ಷದ ವ್ಯಕ್ತಿಯೊಬ್ಬರು ಪ್ರವೇಶಿಸಿದ್ದರು.


Click the Play button to hear this message in audio format

ಬೆಂಗಳೂರಿನಲ್ಲಿ ಮೆಟ್ರೋ ಹಳಿಯ ಮೇಲೆ ವೃದ್ಧರೊಬ್ಬರು ನಡೆದುಕೊಂಡು ಹೋದ ಘಟನೆ ಸೋಮವಾರ ಸಂಜೆ ಆತಂಕಕ್ಕೆ ಕಾರಣವಾಗಿದೆ. ಘಟನೆಯಿಂದ ನೇರಳೆ ಮಾರ್ಗದ ಮೆಟ್ರೋ ರೈಲುಗಳ ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾಯಿತು. ಮೆಟ್ರೋ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ವೃದ್ಧರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಬೆಂಗಳೂರಿನ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಮೈಸೂರು ರಸ್ತೆ ಮತ್ತು ದೀಪಾಂಜಲಿ ನಗರ ಮೆಟ್ರೋ ನಿಲ್ದಾಣಗಳ ನಡುವಿನ ಹಳಿಗೆ ಸುಮಾರು 65 ವರ್ಷದ ವ್ಯಕ್ತಿಯೊಬ್ಬರು ಪ್ರವೇಶಿಸಿದ್ದರು. ಬಳಿಕ ಹಳಿಯ ಮೇಲೆ ನಡೆದುಕೊಂಡು ದೀಪಾಂಜಲಿ ನಗರ ನಿಲ್ದಾಣದ ಕಡೆಗೆ ಸಾಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮೆಟ್ರೋ ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡಿದ್ದಾರೆ.

15 ನಿಮಿಷಗಳ ಕಾಲ ರೈಲು ಸಂಚಾರಕ್ಕೆ ಅಡ್ಡಿ

ಸೋಮವಾರ ರಾತ್ರಿ 8.15ರಿಂದ 8.30ರ ಅವಧಿಯಲ್ಲಿ ಈ ಘಟನೆ ನಡೆದಿದ್ದು, ನೇರಳೆ ಮಾರ್ಗದ ಕೆಲವು ರೈಲುಗಳ ಸಂಚಾರಕ್ಕೆ ತಾತ್ಕಾಲಿಕ ಅಡ್ಡಿಯಾಯಿತು. ಹಳಿಯಲ್ಲಿದ್ದ ವ್ಯಕ್ತಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಮೀಪಿಸುತ್ತಿದ್ದ ರೈಲನ್ನು ಕೆಲಕಾಲ ನಿಲ್ಲಿಸಲಾಯಿತು. ಬಳಿಕ ಸಿಬ್ಬಂದಿ ವೃದ್ಧರನ್ನು ಸುರಕ್ಷಿತವಾಗಿ ರಕ್ಷಿಸಿದ್ದು, ಯಾವುದೇ ಗಾಯದ ಘಟನೆ ವರದಿಯಾಗಿಲ್ಲ.

ಸಹಜ ಸ್ಥಿತಿಗೆ ಮರಳಿದ ಮೆಟ್ರೋ ಸಂಚಾರ

ವೃದ್ಧರನ್ನು ಹಳಿಯಿಂದ ಸುರಕ್ಷಿತವಾಗಿ ತೆರವುಗೊಳಿಸಿದ ನಂತರ ರಾತ್ರಿ 8.30ರ ವೇಳೆಗೆ ನೇರಳೆ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭಗೊಂಡಿತು. ಘಟನೆಯಿಂದ ಪ್ರಯಾಣಿಕರಿಗೆ ಕೆಲಕಾಲ ತೊಂದರೆಯಾದರೂ, ಪರಿಸ್ಥಿತಿಯನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರಲಾಯಿತು.

Read More
Next Story