ಮಸೀದಿ ಮುಂದೆ ಘೋಷಣೆ ಬರೆಸಿದ ವ್ಯಕ್ತಿ ಬಂಧನ: ಮಕ್ಕಳ ದುರ್ಬಳಕೆಗೆ ಎಸ್‌ಪಿ ಆಕ್ರೋಶ
x

ಸೈಬರ್ ವಂಚನೆಗೆ ಸಂಬಂಧಿಸಿದಂತೆ 14,885 ಪ್ರಕರಣಗಳು ದಾಖಲಾಗಿವೆ

ಮಸೀದಿ ಮುಂದೆ ಘೋಷಣೆ ಬರೆಸಿದ ವ್ಯಕ್ತಿ ಬಂಧನ: ಮಕ್ಕಳ ದುರ್ಬಳಕೆಗೆ ಎಸ್‌ಪಿ ಆಕ್ರೋಶ

ಶುಕ್ರವಾರ ನಡೆದ ಈ ಘಟನೆಯಲ್ಲಿ, ಯಮನೂರಿ ಭಜಂತ್ರಿ ತನ್ನ ನಾಲ್ವರು ಮಕ್ಕಳು ಹಾಗೂ ಸಹೋದರಿಯ ಇಬ್ಬರು ಮಕ್ಕಳನ್ನು ಮಸೀದಿಯ ಬಳಿ ಕರೆದೊಯ್ದಿದ್ದ ಎನ್ನಲಾಗಿದೆ.


Click the Play button to hear this message in audio format

ನಗರದ ನವನಗರ ಪ್ರದೇಶದಲ್ಲಿರುವ ಮಸೀದಿಯೊಂದರ ಮುಂಭಾಗದಲ್ಲಿ ಧಾರ್ಮಿಕ ಘೋಷಣೆ ಬರೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ನವನಗರದ ನಿವಾಸಿ ಯಮನೂರಿ ಭಜಂತ್ರಿ ಎಂಬಾತನೇ ಬಂಧಿತ ಆರೋಪಿ. ಈತ ತನ್ನ ಕುಟುಂಬದ ಆರು ಮಂದಿ ಮಕ್ಕಳನ್ನು ಬಳಸಿಕೊಂಡು ಈ ಕೃತ್ಯ ಎಸಗಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ದೃಢಪಟ್ಟಿದೆ.

ಶುಕ್ರವಾರ ನಡೆದ ಈ ಘಟನೆಯಲ್ಲಿ, ಯಮನೂರಿ ಭಜಂತ್ರಿ ತನ್ನ ನಾಲ್ವರು ಮಕ್ಕಳು ಹಾಗೂ ಸಹೋದರಿಯ ಇಬ್ಬರು ಮಕ್ಕಳನ್ನು ಮಸೀದಿಯ ಬಳಿ ಕರೆದೊಯ್ದಿದ್ದ ಎನ್ನಲಾಗಿದೆ. ಅಲ್ಲಿ ಬಾಲಕನೊಬ್ಬನ ಮೂಲಕ ‘ಜೈ ಶ್ರೀರಾಮ’ ಎಂಬ ಘೋಷಣೆಯನ್ನು ಗೋಡೆಯ ಮೇಲೆ ಬರೆಯಿಸಿದ್ದಾನೆ. ಈ ಇಡೀ ಪ್ರಕ್ರಿಯೆಯು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ಆಧರಿಸಿ ನವನಗರ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಸೆರೆಹಿಡಿದಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಬಾಲಕನನ್ನು ಬಾಲಾಪರಾಧಿ ನ್ಯಾಯಮಂಡಳಿಯ ಎದುರು ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತನಿಖೆ ಚುರುಕುಗೊಳಿಸಿದ ಪೊಲೀಸರು

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಅವರು, "ಸಮುದಾಯಗಳ ನಡುವೆ ದ್ವೇಷ ಬಿತ್ತುವ ಇಂತಹ ಕೃತ್ಯಗಳಿಗೆ ಮಕ್ಕಳನ್ನು ಬಳಸಿಕೊಳ್ಳುವುದು ಕಾನೂನುಬಾಹಿರ ಮತ್ತು ಅಕ್ಷಮ್ಯ ಅಪರಾಧ. ಈ ಘಟನೆಯ ಹಿಂದೆ ಬೇರೆ ಯಾರಾದರೂ ಪ್ರಚೋದನೆ ನೀಡಿದ್ದಾರೆಯೇ ಅಥವಾ ಯಾವುದಾದರೂ ಸಂಘಟನೆಯ ಕೈವಾಡವಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ," ಎಂದು ತಿಳಿಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

Read More
Next Story