5 ನಿಮಿಷ ಚಾರ್ಜ್ ಮಾಡಿದರೆ 3,000 ಕಿ.ಮೀ  ಓಡಲಿದೆ ಕಾರು! ಹುವಾವೇ ತರುತ್ತಿದೆ ಕ್ರಾಂತಿಕಾರಿ ಬ್ಯಾಟರಿ
x

ಹುವಾವೇ ಪೇಟೆಂಟ್ ಮಾಡಿಸಿರುವ ಈ ತಂತ್ರಜ್ಞಾನವು 'ಸಲ್ಫೈಡ್' ಆಧಾರಿತ ಘನ ಎಲೆಕ್ಟ್ರೋಲೈಟ್ ಅನ್ನು ಒಳಗೊಂಡಿದೆ. ಇದು ಪ್ರಸ್ತುತ ಬಳಕೆಯಲ್ಲಿರುವ ದ್ರವ ಎಲೆಕ್ಟ್ರೋಲೈಟ್‌ಗಳಿಗಿಂತ ಹೆಚ್ಚಿನ ಸುರಕ್ಷತೆ ಮತ್ತು ದಕ್ಷತೆ ಹೊಂದಿದೆ. 

5 ನಿಮಿಷ ಚಾರ್ಜ್ ಮಾಡಿದರೆ 3,000 ಕಿ.ಮೀ ಓಡಲಿದೆ ಕಾರು! ಹುವಾವೇ ತರುತ್ತಿದೆ ಕ್ರಾಂತಿಕಾರಿ ಬ್ಯಾಟರಿ

ಹುವಾವೇ ಪೇಟೆಂಟ್ ಮಾಡಿಸಿರುವ ಈ ತಂತ್ರಜ್ಞಾನವು 'ಸಲ್ಫೈಡ್' ಆಧಾರಿತ ಘನ ಎಲೆಕ್ಟ್ರೋಲೈಟ್ ಅನ್ನು ಒಳಗೊಂಡಿದೆ. ಇದು ಪ್ರಸ್ತುತ ಬಳಕೆಯಲ್ಲಿರುವ ದ್ರವ ಎಲೆಕ್ಟ್ರೋಲೈಟ್‌ಗಳಿಗಿಂತ ಹೆಚ್ಚಿನ ಸುರಕ್ಷತೆ ಮತ್ತು ದಕ್ಷತೆ ಹೊಂದಿದೆ.


Click the Play button to hear this message in audio format

ಚೀನಾದ ಟೆಕ್ ದೈತ್ಯ ಹುವಾವೇ (Huawei), ಎಲೆಕ್ಟ್ರಿಕ್ ವಾಹನ (EV) ಜಗತ್ತನ್ನೇ ಬೆರಗುಗೊಳಿಸುವಂತಹ ಸಾಲಿಡ್-ಸ್ಟೇಟ್ ಬ್ಯಾಟರಿ ತಂತ್ರಜ್ಞಾನದ ಪೇಟೆಂಟ್ ಪಡೆದುಕೊಂಡಿದೆ. ಕೇವಲ 5 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಆಗುವ ಮತ್ತು ಒಂದೇ ಚಾರ್ಜ್‌ಗೆ ಬರೊಬ್ಬರಿ 3,000 ಕಿ.ಮೀ ರೇಂಜ್ ನೀಡಬಲ್ಲ ಸಾಮರ್ಥ್ಯ ಈ ಬ್ಯಾಟರಿಗೆ ಇದೆ ಎಂದು ಕಂಪನಿ ಹೇಳಿಕೊಂಡಿದೆ.

ಹುವಾವೇ ಪೇಟೆಂಟ್ ಮಾಡಿಸಿರುವ ಈ ತಂತ್ರಜ್ಞಾನವು 'ಸಲ್ಫೈಡ್' ಆಧಾರಿತ ಘನ ಎಲೆಕ್ಟ್ರೋಲೈಟ್ ಅನ್ನು ಒಳಗೊಂಡಿದೆ. ಇದು ಪ್ರಸ್ತುತ ಬಳಕೆಯಲ್ಲಿರುವ ದ್ರವ ಎಲೆಕ್ಟ್ರೋಲೈಟ್‌ಗಳಿಗಿಂತ ಹೆಚ್ಚಿನ ಸುರಕ್ಷತೆ ಮತ್ತು ದಕ್ಷತೆ ಹೊಂದಿದೆ. ಈ ಬ್ಯಾಟರಿಗಳು 400–500 Wh/kg ಎನರ್ಜಿ ಡೆನ್ಸಿಟಿಯನ್ನು ಹೊಂದಿರಲಿದ್ದು, ಇದು ಈಗಿನ ಲಿಥಿಯಂ-ಐಯಾನ್ ಬ್ಯಾಟರಿಗಳಿಗಿಂತ 2 ರಿಂದ 3 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿರಲಿವೆ.

ತಂತ್ರಜ್ಞಾನದ ವಿಶೇಷತೆ ಮತ್ತು 'ನೈಟ್ರೋಜನ್ ಡೋಪಿಂಗ್'

ಈ ಬ್ಯಾಟರಿಯನ್ನು 'ಗೇಮ್ ಚೇಂಜರ್' ಎಂದು ಕರೆಯಲು ಮುಖ್ಯ ಕಾರಣ ಇದರಲ್ಲಿ ಬಳಸಲಾದ ನೈಟ್ರೋಜನ್ ಡೋಪಿಂಗ್ (Nitrogen Doping) ವಿಧಾನ. ಸಲ್ಫೈಡ್ ಎಲೆಕ್ಟ್ರೋಲೈಟ್‌ಗೆ ನೈಟ್ರೋಜನ್ ಸೇರಿಸುವುದರಿಂದ ರಾಸಾಯನಿಕ ಸ್ಥಿರತೆ ಹೆಚ್ಚುತ್ತದೆ ಮತ್ತು ಬ್ಯಾಟರಿಯ ಜೀವಿತಾವಧಿ ಸುಧಾರಿಸುತ್ತದೆ. ಇದರಿಂದ ವಾಹನ ಸವಾರರಲ್ಲಿರುವ 'ರೇಂಜ್ ಆಂಗ್ಸೈಟಿ' (ಬ್ಯಾಟರಿ ಖಾಲಿಯಾಗುವ ಭೀತಿ) ಸಂಪೂರ್ಣವಾಗಿ ದೂರವಾಗುವ ನಿರೀಕ್ಷೆಯಿದೆ.

ಸವಾಲುಗಳು ಮತ್ತು ಮಾರುಕಟ್ಟೆ ಲಭ್ಯತೆ

ಇದು ಸದ್ಯಕ್ಕೆ ಪೇಟೆಂಟ್ ಮತ್ತು ಸಂಶೋಧನಾ ಹಂತದಲ್ಲಿದೆ ಎಂಬುದು ಗಮನಾರ್ಹ. ಇದನ್ನು ದೊಡ್ಡ ಮಟ್ಟದಲ್ಲಿ ಉತ್ಪಾದಿಸುವುದು (Mass Production) ದುಬಾರಿ ಮತ್ತು ಸವಾಲಿನ ಕೆಲಸ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗಾಳಿಗೆ ತೆರೆದುಕೊಂಡಾಗ ಉಂಟಾಗುವ ಅಸ್ಥಿರತೆ (Air Stability) ಮತ್ತು ವಾಣಿಜ್ಯೀಕರಣಕ್ಕೆ ಬೇಕಾದ ಸಪ್ಲೈ ಚೈನ್ ಸಿದ್ಧತೆಗಳ ಬಗ್ಗೆ ಇನ್ನೂ ಸ್ಪಷ್ಟತೆ ಬೇಕಿದೆ.

ಹುವಾವೇ ನಿಲುವು ಮತ್ತು ಕಾರ್ಯತಂತ್ರ

ಅಮೆರಿಕದ ನಿರ್ಬಂಧಗಳ ನಂತರ ಹುವಾವೇ ತನ್ನ ಗಮನವನ್ನು ಸ್ಮಾರ್ಟ್‌ಫೋನ್‌ನಿಂದ ಎಲೆಕ್ಟ್ರಿಕ್ ವಾಹನಗಳತ್ತ ಹರಿಸಿದೆ. "ನಾವು ನೇರವಾಗಿ ಕಾರುಗಳನ್ನು ತಯಾರಿಸುವುದಿಲ್ಲ, ಬದಲಾಗಿ ಇತರ ಕಂಪನಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಒದಗಿಸಿ ಉತ್ತಮ ವಾಹನ ತಯಾರಿಸಲು ಸಹಕರಿಸುತ್ತೇವೆ" ಎಂದು ಸಂಸ್ಥೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಟರಿ ತಯಾರಕನಾಗಿ ಅಲ್ಲದಿದ್ದರೂ, ಬ್ಯಾಟರಿ ಸಂಶೋಧನೆಯ ಮೂಲಕ ಇವಿ ಕ್ಷೇತ್ರದಲ್ಲಿ ಹುವಾವೇ ತನ್ನ ಪ್ರಾಬಲ್ಯ ಮೆರೆಯಲು ಸಜ್ಜಾಗಿದೆ.

Read More
Next Story