Stock Market| ಸೆನ್ಸೆಕ್ಸ್ 1,400, ನಿಫ್ಟಿ 400 ಪಾಯಿಂಟ್ಸ್ ಇಳಿಕೆ; ಹೂಡಿಕೆದಾರರಿಗೆ ಆತಂಕ!
x
ಷೇರು ಮಾರುಕಟ್ಟೆ ಕುಸಿತ(ಸಂಗ್ರಹ ಚಿತ್ರ)

Stock Market| ಸೆನ್ಸೆಕ್ಸ್ 1,400, ನಿಫ್ಟಿ 400 ಪಾಯಿಂಟ್ಸ್ ಇಳಿಕೆ; ಹೂಡಿಕೆದಾರರಿಗೆ ಆತಂಕ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇರಾನ್ ವಿರೋಧಿ ಹೇಳಿಕೆಯಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಇಂದು ಭಾರಿ ಕುಸಿತ ಕಂಡಿದೆ. ಸೆನ್ಸೆಕ್ಸ್ 1,416 ಪಾಯಿಂಟ್ಸ್ ಇಳಿಕೆಯಾಗಿದೆ.


Click the Play button to hear this message in audio format

ಜಾಗತಿಕ ರಾಜಕೀಯ ವಿದ್ಯಮಾನಗಳ ಪರಿಣಾಮವಾಗಿ ಭಾರತೀಯ ಷೇರು ಮಾರುಕಟ್ಟೆ ಗುರುವಾರ (ಏಪ್ರಿಲ್ 2) ಭಾರಿ ಕುಸಿತದೊಂದಿಗೆ ವಹಿವಾಟು ಆರಂಭಿಸಿದೆ. ಬುಧವಾರವಷ್ಟೇ ಏರಿಕೆ ಕಂಡಿದ್ದ ಮಾರುಕಟ್ಟೆ, ಇಂದು ಆರಂಭಿಕ ಹಂತದಲ್ಲೇ ಹೂಡಿಕೆದಾರರಿಗೆ ಭಾರಿ ಹೊಡೆತ ನೀಡಿದೆ.

ಮಾರುಕಟ್ಟೆಯ ಇಂದಿನ ಸ್ಥಿತಿ

ವಹಿವಾಟು ಆರಂಭವಾಗುತ್ತಿದ್ದಂತೆಯೇ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 1,400 ಪಾಯಿಂಟ್‌ಗಳಷ್ಟು ಕುಸಿತ ಕಂಡಿದೆ. ಮತ್ತೊಂದೆಡೆ ನಿಫ್ಟಿ ಸುಮಾರು 400 ಪಾಯಿಂಟ್‌ಗಳಷ್ಟು ಇಳಿಕೆಯಾಗಿದೆ. ವಹಿವಾಟಿನ ಆರಂಭದಲ್ಲಿ ನಿಫ್ಟಿ 22,250 ಮಟ್ಟಕ್ಕೆ ಕುಸಿದಿದೆ. ಇದು ಸುಮಾರು 429.35 ಪಾಯಿಂಟ್ಸ್ (ಶೇ. 1.89) ಇಳಿಕೆಯಾಗಿದೆ. ಸೆನ್ಸೆಕ್ಸ್ ಸುಮಾರು 1,416.14 ಪಾಯಿಂಟ್ಸ್ (ಶೇ. 1.94) ಕುಸಿತ ಕಂಡು 71,718.18 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಬುಧವಾರದ ವಹಿವಾಟು ಸಕಾರಾತ್ಮಕವಾಗಿ ಅಂತ್ಯಗೊಂಡಿದ್ದರಿಂದ ಮಾರುಕಟ್ಟೆ ಚೇತರಿಸಿಕೊಳ್ಳುವ ನಿರೀಕ್ಷೆಯಿತ್ತು. ಆದರೆ, ಜಾಗತಿಕ ಮಟ್ಟದ ಬಿಕ್ಕಟ್ಟು ಈ ನಿರೀಕ್ಷೆಯನ್ನು ಉಲ್ಟಾ ಮಾಡಿದೆ.

ಕಚ್ಚಾ ತೈಲ ಬೆಲೆ ಏರಿಕೆ - ಬೆಳ್ಳಿ ದರ ಕುಸಿತ

ಟ್ರಂಪ್ ಅವರ ಭಾಷಣವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಮತ್ತು ಲೋಹಗಳ ಬೆಲೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಕಚ್ಚಾ ತೈಲ ಬ್ರೆಂಟ್ ಕ್ರೂಡ್ ಬೆಲೆಯು ಬ್ಯಾರೆಲ್‌ಗೆ 4.88 ಡಾಲರ್ (ಶೇ. 4.8) ಏರಿಕೆಯಾಗಿದ್ದು, 106.04 ಡಾಲರ್ ತಲುಪಿದೆ. ಯುಎಸ್ ತೈಲ ಪ್ರತಿ ಬ್ಯಾರೆಲ್‌ಗೆ 4.17 ಡಾಲರ್ (ಶೇ. 4.2) ಏರಿಕೆಯಾಗಿ 104.29 ಡಾಲರ್ ತಲುಪಿದೆ. ಅಚ್ಚರಿಯ ಬೆಳವಣಿಗೆಯಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆಯು ಕುಸಿತ ಕಂಡಿದೆ.

ಕುಸಿತಕ್ಕೆ ಪ್ರಮುಖ ಕಾರಣವೇನು?

ಈ ಭಾರಿ ಕುಸಿತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆ ಪ್ರಮುಖ ಕಾರಣವಾಗಿದೆ.

1. ತೈಲ ಬೆಲೆ ಏರಿಕೆ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 4 ಡಾಲರ್‌ಗಿಂತ ಹೆಚ್ಚು ಏರಿಕೆಯಾಗಿದೆ.

2. ಯುದ್ಧ ಮುಂದುವರಿಕೆ: ಇರಾನ್‌ನ ಇಂಧನ ಮತ್ತು ತೈಲ ನೆಲೆಗಳ ಮೇಲೆ ಅಮೆರಿಕ ದಾಳಿ ಮುಂದುವರಿಸಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈ ಯುದ್ಧವನ್ನು ಕೊನೆಗೊಳಿಸಲು ಯಾವುದೇ ನಿರ್ದಿಷ್ಟ ಸಮಯದ ಗಡುವನ್ನು ಅವರು ನೀಡಿಲ್ಲ.

ಹೂಡಿಕೆದಾರರ ಮೇಲೆ ಪ್ರಭಾವ:

ತೈಲ ಬೆಲೆ ಏರಿಕೆಯು ಭಾರತದಂತಹ ಆಮದು ಅವಲಂಬಿತ ದೇಶದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಲಿದೆ ಎಂಬ ಭೀತಿ ಹೂಡಿಕೆದಾರರಲ್ಲಿ ಮೂಡಿದೆ. ಇಂಧನ ಬೆಲೆ ಏರಿಕೆಯಿಂದ ಹಣದುಬ್ಬರ ಹೆಚ್ಚಾಗಬಹುದು ಎಂಬ ಆತಂಕದಿಂದಾಗಿ ಬ್ಯಾಂಕಿಂಗ್, ಐಟಿ ಮತ್ತು ಆಟೋಮೊಬೈಲ್ ವಲಯದ ಷೇರುಗಳು ಭಾರಿ ಮಾರಾಟದ ಒತ್ತಡಕ್ಕೆ ಒಳಗಾಗಿವೆ.

Read More
Next Story