Rupee breaches dollar|ಡಾಲರ್ ಎದುರು ಮೊದಲ ಬಾರಿಗೆ 93ರ ಗಡಿ ದಾಟಿದ ರೂಪಾಯಿ ಮೌಲ್ಯ
x

ಗುರುವಾರದ ಷೇರುಪೇಟೆ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ 21 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದಾಗ ವಿದೇಶಿ ಪೋರ್ಟ್‌ಫೋಲಿಯೊ ಹೂಡಿಕೆದಾರರು (ಎಫ್‌ಪಿಐ) ಭಾರಿ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದರು. 

Rupee breaches dollar|ಡಾಲರ್ ಎದುರು ಮೊದಲ ಬಾರಿಗೆ 93ರ ಗಡಿ ದಾಟಿದ ರೂಪಾಯಿ ಮೌಲ್ಯ

ಡಾಲರ್‌ಗಳನ್ನು ಮಾರಾಟ ಮಾಡುವ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾತ್ರವೇ ರೂಪಾಯಿಯನ್ನು ಮತ್ತಷ್ಟು ಕುಸಿಯದಂತೆ ರಕ್ಷಿಸುತ್ತಿದೆ ಎಂದು ಫಿನ್‌ರೆಕ್ಸ್ ಟ್ರೆಷರಿ ಅಡ್ವೈಸರ್ಸ್ ಎಲ್‌ಎಲ್‌ಪಿಯ ಖಜಾನೆ ಮುಖ್ಯಸ್ಥ ಅನಿಲ್ ಕುಮಾರ್ ಭನ್ಸಾಲಿ ವಿಶ್ಲೇಷಿಸಿದ್ದಾರೆ.


Click the Play button to hear this message in audio format

ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಯುದ್ಧದ ಬಿಕ್ಕಟ್ಟು ಹಾಗೂ ಜಾಗತಿಕ ಮಾರುಕಟ್ಟೆಯ ಏರಿಳಿತಗಳ ಪರಿಣಾಮವಾಗಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡಿದೆ. ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 19 ಪೈಸೆ ಕುಸಿದು, ಇದೇ ಮೊದಲ ಬಾರಿಗೆ 93ರ ಗಡಿಯನ್ನು ದಾಟುವ ಮೂಲಕ 93.08 ಕ್ಕೆ ತಲುಪಿದೆ. ಬಲಗೊಳ್ಳುತ್ತಿರುವ ಅಮೆರಿಕನ್ ಡಾಲರ್ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿರಂತರವಾಗಿ ಬಂಡವಾಳ ಹಿಂಪಡೆಯುತ್ತಿರುವುದು ರೂಪಾಯಿ ಮೌಲ್ಯದ ಮೇಲೆ ತೀವ್ರ ಒತ್ತಡ ಹೇರಿದೆ.

ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಶುಕ್ರವಾರ ಬೆಳಗ್ಗೆ ಡಾಲರ್ ಎದುರು 92.92 ರೊಂದಿಗೆ ವಹಿವಾಟು ಆರಂಭಿಸಿದ ರೂಪಾಯಿ, ಬಳಿಕ 19 ಪೈಸೆ ನಷ್ಟದೊಂದಿಗೆ 93.08 ಕ್ಕೆ ಕುಸಿಯಿತು. ಇದಕ್ಕೂ ಮೊದಲು, ಬುಧವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು ಬರೋಬ್ಬರಿ 49 ಪೈಸೆ ಕುಸಿದು 92.89 ರ ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. ಗುಡಿಪಾಡ್ಯ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ವಿದೇಶಿ ವಿನಿಮಯ ಮಾರುಕಟ್ಟೆಗಳಿಗೆ ರಜೆ ಘೋಷಿಸಲಾಗಿತ್ತು. ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ತುಸು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 106.9 ಡಾಲರ್‌ಗೆ ತಲುಪಿದ್ದರೂ, ಒಟ್ಟಾರೆ ತೈಲ ದರದ ಏರಿಕೆಯು ಸ್ಥಳೀಯ ಕರೆನ್ಸಿಯ ಮೇಲೆ ಒತ್ತಡ ಮುಂದುವರಿಸಿದೆ.

ಷೇರುಪೇಟೆ ಚೇತರಿಕೆ

ಡಾಲರ್‌ಗಳನ್ನು ಮಾರಾಟ ಮಾಡುವ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾತ್ರವೇ ರೂಪಾಯಿಯನ್ನು ಮತ್ತಷ್ಟು ಕುಸಿಯದಂತೆ ರಕ್ಷಿಸುತ್ತಿದೆ ಎಂದು ಫಿನ್‌ರೆಕ್ಸ್ ಟ್ರೆಷರಿ ಅಡ್ವೈಸರ್ಸ್ ಎಲ್‌ಎಲ್‌ಪಿಯ ಖಜಾನೆ ಮುಖ್ಯಸ್ಥ ಅನಿಲ್ ಕುಮಾರ್ ಭನ್ಸಾಲಿ ವಿಶ್ಲೇಷಿಸಿದ್ದಾರೆ. ಆರು ಪ್ರಮುಖ ಕರೆನ್ಸಿಗಳ ಎದುರು ಅಮೆರಿಕನ್ ಡಾಲರ್‌ನ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇಕಡಾ 0.17 ರಷ್ಟು ಏರಿಕೆ ಕಂಡು 100.25 ರಲ್ಲಿ ವಹಿವಾಟು ನಡೆಸುತ್ತಿದೆ. ಈ ನಡುವೆ ದೇಶೀಯ ಷೇರುಪೇಟೆಗಳು ಶುಕ್ರವಾರ ಸಕಾರಾತ್ಮಕ ಆರಂಭ ಕಂಡಿದ್ದು, ರೂಪಾಯಿ ಮೌಲ್ಯ ಮತ್ತಷ್ಟು ತೀವ್ರವಾಗಿ ಕುಸಿಯದಂತೆ ತಡೆಯುವಲ್ಲಿ ಕೊಂಚ ನೆರವಾಗಿವೆ. ಸೆನ್ಸೆಕ್ಸ್ 960.67 ಅಂಕಗಳ (ಶೇಕಡಾ 1.29) ಜಿಗಿತ ಕಂಡು 75,167.91 ಕ್ಕೆ ಹಾಗೂ ನಿಫ್ಟಿ 311.50 ಅಂಕಗಳ (ಶೇಕಡಾ 1.35) ಏರಿಕೆಯೊಂದಿಗೆ 23,313.65 ಕ್ಕೆ ತಲುಪಿವೆ.

ವಿದೇಶಿ ಹೂಡಿಕೆದಾರರ ಮಾರಾಟದ ಭರಾಟೆ

ಗುರುವಾರದ ಷೇರುಪೇಟೆ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ 21 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದಾಗ ವಿದೇಶಿ ಪೋರ್ಟ್‌ಫೋಲಿಯೊ ಹೂಡಿಕೆದಾರರು (ಎಫ್‌ಪಿಐ) ಭಾರಿ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದರು. ವಿನಿಮಯ ಕೇಂದ್ರಗಳ ಅಧಿಕೃತ ದತ್ತಾಂಶದ ಪ್ರಕಾರ, ಗುರುವಾರವೊಂದೇ ದಿನ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 7,558.19 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ನಿರಂತರ ಬಂಡವಾಳ ಹೊರಹರಿವು ಹಾಗೂ ವಿದೇಶಿ ಹೂಡಿಕೆದಾರರ ಹಿಂದೇಟು ರೂಪಾಯಿಯ ಮೌಲ್ಯವರ್ಧನೆಗೆ ಪ್ರಮುಖ ತೊಡಕಾಗಿ ಪರಿಣಮಿಸಿದೆ.

Read More
Next Story