ದೇಶದಲ್ಲಿ 2.4 ದಶಲಕ್ಷ ಆಸ್ಪತ್ರೆ ಹಾಸಿಗೆಗಳ ಕೊರತೆ: ವರದಿ

ನವದೆಹಲಿ: ಭಾರತಕ್ಕೆ ಹೆಚ್ಚುವರಿ 24 ಲಕ್ಷ ಆಸ್ಪತ್ರೆ ಹಾಸಿಗೆಗಳ ಅಗತ್ಯವಿದೆ. ಇದರಿಂದ 1,000 ಜನರಿಗೆ 3 ಹಾಸಿಗೆಗಳ ಅನುಪಾತವನ್ನು ತಲುಪಬಹುದು. ಇದರ ಪರಿಣಾಮವಾಗಿ ಆರೋಗ್ಯ ಸಂಬಂಧಿತ ರಿಯಲ್ ಎಸ್ಟೇಟ್‌ಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಜಾಗತಿಕ ರಿಯಲ್ ಎಸ್ಟೇಟ್ ಸಲಹೆಗಾರ ನೈಟ್ ಫ್ರಾಂಕ್ ಮತ್ತು ಯುಎಸ್ ಮೂಲದ ರ‍್ಕಾಡಿಯಾ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

ಪ್ರಸ್ತುತ ಭಾರತ ಅಂದಾಜು 70,000 ಆಸ್ಪತ್ರೆಗಳನ್ನು ಹೊಂದಿದೆ. ಅದರಲ್ಲಿ ಶೇ. 63 ಖಾಸಗಿ ವಲಯದಲ್ಲಿದೆ ಎಂದು ವರದಿ ಹೇಳಿದೆ. ನೈಟ್ ಫ್ರಾಂಕ್ ಇಂಡಿಯಾ ಪ್ರಕಾರ, 1.42 ಶತಕೋಟಿ ಜನಸಂಖ್ಯೆಯ ಆರೋಗ್ಯ ಕ್ಷೇತ್ರದಲ್ಲಿ ದೇಶ 2 ಶತಕೋಟಿ ಚದರ ಅಡಿ ಸ್ಥಳಾವಕಾಶದ ಕೊರತೆ ಇದೆ. ದೇಶದಲ್ಲಿ ಲಭ್ಯವಿರುವ ಆಸ್ಪತ್ರೆಯ ಹಾಸಿಗೆಗಳ ಸಂಖ್ಯೆ ಮತ್ತು ಅಗತ್ಯದ ನಡುವೆ ಗಣನೀಯ ಅಂತರ ಇದೆ. ʻಭಾರತದಲ್ಲಿ ಹಾಸಿಗೆ-ಜನಸಂಖ್ಯೆ ಅನುಪಾತವು 1.3/1000 ಇದ್ದು, 1000ಕ್ಕೆ 1.7 ಹಾಸಿಗೆಗಳ ಕೊರತೆಯಿದೆ. ಇದನ್ನು ತುಂಬಲು 24 ಲಕ್ಷ ಹೆಚ್ಚುವರಿ ಹಾಸಿಗೆಗಳು ಬೇಕಾಗುತ್ತವೆ ಎಂದು ವರದಿ ಹೇಳಿದೆ.

ʻಜನಸಂಖ್ಯೆ-ಹಾಸಿಗೆ ಅನುಪಾತ, ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ದೇಶದ ಆರೋಗ್ಯ ಮೂಲಸೌರ‍್ಯದಲ್ಲಿ ಗಮನರ‍್ಹ ಬೆಳವಣಿಗೆಯ ಅಗತ್ಯವನ್ನು ಒತ್ತಿಹೇಳುತ್ತದೆʼ ಎಂದು ನೈಟ್ ಫ್ರಾಂಕ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನರ‍್ದೇಶಕ ಶಿಶಿರ್ ಬೈಜಾಲ್ ಹೇಳಿದರು. ʻಈ ಅಸಮಾನತೆಯು ಸರ‍್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಭಾರತದಲ್ಲಿ ಆರೋಗ್ಯ ಉದ್ಯಮದಲ್ಲಿ ತಮ್ಮ ಹೆಜ್ಜೆ ಗುರುತನ್ನು ವಿಸ್ತರಿಸಲು ಅವಕಾಶವನ್ನು ಒದಗಿಸುತ್ತದೆ.

ʻಭಾರತದ ಜನಸಂಖ್ಯೆ-ಹಾಸಿಗೆ ಅನುಪಾತದ ಸವಾಲು, ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ, ದೇಶದ ಆರೋಗ್ಯ ಮೂಲಸೌರ‍್ಯದಲ್ಲಿ ಗಮನರ‍್ಹವಾದ ರ‍್ಧನೆಯ ಅಗತ್ಯವನ್ನು ಒತ್ತಿಹೇಳುತ್ತದೆ. ಈ ಬೇಡಿಕೆಯನ್ನು ಪೂರೈಸಲು ಪ್ರಸ್ತುತ ರಿಯಲ್ ಎಸ್ಟೇಟ್ ಸಾರ‍್ಥ್ಯವನ್ನು ದ್ವಿಗುಣಗೊಳಿಸುವ ಅಗತ್ಯವಿದೆʼ ಎಂದು ಹೇಳಿದರು.

ಭಾರತದ ಆರೋಗ್ಯ ಮಾರುಕಟ್ಟೆಯು 2022 ರಲ್ಲಿ 372 ಶತಕೋಟಿ ಡಾಲರ್‌ ಮೌಲ್ಯ ಹೊಂದಿತ್ತು. ದಶಕದ ಹಿಂದೆ ಈ ಮೊತ್ತ 73 ಶತಕೋಟಿ ಡಾಲರ್‌ ಇತ್ತು.


Next Story