ಏಳು ನಗರಗಳಲ್ಲಿ ಮೂರು ವರ‍್ಷದಲ್ಲಿ ವಸತಿ ಬೆಲೆಗಳಲ್ಲಿ ಶೇ.13-33 ಏರಿಕೆಯಾಗಿದೆ ಎಂದು ವರದಿ ಹೇಳಿದೆ.

ಏಳು ನಗರಗಳಲ್ಲಿ ವಸತಿ ದುಬಾರಿ: ಅನರಾಕ್ ವರದಿ

ಏಳು ನಗರಗಳಲ್ಲಿ ಮೂರು ವರ‍್ಷದಲ್ಲಿ ವಸತಿ ಬೆಲೆಗಳಲ್ಲಿ ಶೇ.13-33 ಏರಿಕೆಯಾಗಿದೆ ಎಂದು ವರದಿ ಹೇಳಿದೆ.

ಹೆಚ್ಚಿನ ಬೇಡಿಕೆಯಿಂದಾಗಿ ಪ್ರಮುಖ ನಗರಗಳಲ್ಲಿ ಕಳೆದ 3 ರ‍್ಷಗಳಲ್ಲಿ ವಸತಿ ಬೆಲೆಗಳು ಶೇ.13-33 ಹೆಚ್ಚಾಗಿದೆ ಎಂದು ಅನರಾಕ್ ವರದಿ ಹೇಳಿದೆ.

ಹೈದರಾಬಾದ್‌ನ ಗಚಿಬೌಲಿಯು ಕಳೆದ ಮೂರು ವರ‍್ಷಗಳಲ್ಲಿ ಸರಾಸರಿ ವಸತಿ ಬೆಲೆ ಶೇ.33 ಹೆಚ್ಚಳವನ್ನು ದಾಖಲಿಸಿದೆ.

ಹೈದರಾಬಾದ್‌ನ ಗಚಿಬೌಲಿಯಲ್ಲಿ, ಅಕ್ಟೋಬರ್ 2020 ರಲ್ಲಿ ಪ್ರತಿ ಚದರ ಅಡಿಗೆ ಬೆಲೆ 4,790 ರೂ. ಇತ್ತು. ಅಕ್ಟೋಬರ್‌ 2023ರಲ್ಲಿ 6,355 ರೂ.ಗೆ ಹೆಚ್ಚಳಗೊಂಡಿತು. 2023 ರ ಅಂತ್ಯದಲ್ಲಿ ಚದರ ಅಡಿಗೆ 6,355 ರೂ.ಗೆ ಹೆಚ್ಚಳಗೊಂಡಿತ್ತು. ಹೈದರಾಬಾದ್‌ನ ಕೊಂಡಾಪುರದಲ್ಲಿ ಸರಾಸರಿ ದರ ಪ್ರತಿ ಚದರ ಅಡಿಗೆ 4,650 ರೂ.ಗಳಿಂದ 6,090 ರೂ.ಗೆ ಶೇ.31ರಷ್ಟು ಏರಿಕೆಯಾಗಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಚದರ ಅಡಿಗೆ 4,900 ರೂ.ನಿಂದ 6,325 ರೂ.ಗೆ ಹೆಚ್ಚಾಗಿದೆ.

ʻಬೇಡಿಕೆ ಮತ್ತು ಹೆಚ್ಚಿನ ಇನ್‌ಪುಟ್ ವೆಚ್ಚಗಳಿಂದ ಏಳು ನಗರಗಳಲ್ಲಿ ಸರಾಸರಿ ವಸತಿ ಬೆಲೆಗಳು ಗಣನೀಯವಾಗಿ ಏರಿಕೆಯಾಗಿವೆʼ ಎಂದು ಅನರಾಕ್‌ನ ಪ್ರಾದೇಶಿಕ ನಿರ‍್ದೇಶಕ ಮತ್ತು ಮುಖ್ಯಸ್ಥ ಪ್ರಶಾಂತ್‌ ಠಾಕೂರ್ ಹೇಳಿದ್ದಾರೆ.

ಸಿಗ್ನೇಚರ್ ಗ್ಲೋಬಲ್ (ಇಂಡಿಯಾ) ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ‍್ದೇಶಕ ರವಿ ಅರ‍್ವಾಲ್ ಪ್ರತಿಕ್ರಿಯಿಸಿ, ಆಸ್ತಿ ಬೆಲೆ, ಕಚ್ಚಾ ವಸ್ತುಗಳು ಹಾಗೂ ನಿರ‍್ಮಾಣ ವೆಚ್ಚದ ಹೆಚ್ಚಳದಿಂದ ವಸತಿಯ ದರ ಹೆಚ್ಚಿದೆ ಎಂದರು.

......

Next Story