ಖಾತೆಯನ್ನು 10 ವರ್ಷಗಳವರೆಗೆ ಬಳಸದಿದ್ದರೆ ಏನಾಗುತ್ತದೆ? ಅದನ್ನು ಮರುಸಕ್ರಿಯಗೊಳಿಸಲು ಶುಲ್ಕ ಎಷ್ಟು? ಏಪ್ರಿಲ್ 1, 2024 ರಿಂದ ಪ್ರಾರಂಭವಾಗುವ ಹೊಸ ನಿಯಮಗಳ ಕುರಿತು ಮಾಹಿತಿ.

ನಿಷ್ಕ್ರಿಯ ಖಾತೆ: ಆರ್‌ಬಿಐ ನೂತನ ನಿಯಮ


-ದ ಫೆಡರಲ್

………………………………………

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ )ನ ನಿಷ್ಕ್ರಿಯ ಖಾತೆಗಳಿಗೆ ಸಂಬಂಧಿಸಿದ ಹೊಸ ನಿಯಮಗಳು ಏಪ್ರಿಲ್ 1, 2024 ರಿಂದ ಜಾರಿಗೆ ಬರುತ್ತವೆ. ಬ್ಯಾಂಕ್ ಗ್ರಾಹಕರು ತಿಳಿದುಕೊಳ್ಳಬೇಕಾದ ಹೊಸ ನಿಯಮಗಳು ಇಲ್ಲಿವೆ.


* ಯಾವ ಖಾತೆಯನ್ನು ನಿಷ್ಕ್ರಿಯ ಎಂದು ಪರಿಗಣಿಸಲಾಗುತ್ತದೆ?

ಎಪ್ಪತ್ತೊಂದು ತಿಂಗಳುಗಳ ಕಾಲ ಯಾವುದೇ ವಹಿವಾಟು ನಡೆಸದೆ ಇದ್ದರೆ, ಅಂಥ ಖಾತೆಯನ್ನು ನಿಷ್ಕ್ರಿಯ ಎಂದು ಪರಿಗಣಿಸಲಾಗುತ್ತದೆ.

* ವಹಿವಾಟು ಎಂದು ಯಾವುದನ್ನು ಪರಿಗಣಿಸಲಾಗುತ್ತದೆ?

ಗ್ರಾಹಕನ ಪರವಾಗಿ ಬ್ಯಾಂಕ್ ಅಥವಾ ಮೂರನೇ ವ್ಯಕ್ತಿ ಮಾಡಿದ ನಗದು ವಹಿವಾಟನ್ನು ʻವಹಿವಾಟುʼ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ನೀವು ಸ್ಥಿರ ಆದೇಶ(ಸ್ಟ್ಯಾಂಡಿಂಗ್ ಇನ್ ಸ್ಟ್ರಕ್ಷನ್) ಅಥವಾ ತನ್ನಿಂತಾನೇ ನವೀಕರಣಗೊಳ್ಳುವಂತೆ ಸೂಚನೆ ನೀಡಿದ್ದರೆ, ಸೇವಾ ಖಾತೆ /ಚಾಲ್ತಿ ಖಾತೆಯಿಂದ ಇತರ ವಹಿವಾಟು ಮಾಡದಿದ್ದರೂ, ನಿಮ್ಮ ಖಾತೆ ಸಕ್ರಿಯಾಗಿರುತ್ತದೆ.

ಹಣಕಾಸು ಒಳಗೊಳ್ಳದ ವಹಿವಾಟು ಅಥವಾ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ)ಯನ್ನು ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಮಾಡುವುದು ಕೂಡ ಗ್ರಾಹಕ ಮಾಡಿದ ವಹಿವಾಟು ಎಂದು ಪರಿಗಣಿಸಲಾಗುತ್ತದೆ. ಇನ್ನೊಂದೆಡೆ, ಶುಲ್ಕಗಳು, ಬಡ್ಡಿ ಪಾವತಿ ಮತ್ತು ತೆರಿಗೆ ಕೂಡ ವಹಿವಾಟು ಎಂದು ಪರಿಗಣಿಸಲ್ಪಡುತ್ತದೆ.

* ಹಲವು ವರ್ಷಗಳಿಂದ ಯಾವುದೇ ವಹಿವಾಟು ನಡೆಸದೇ ಇದ್ದರೆ ಏನಾಗುತ್ತದೆ? ನೀವು 10 ವರ್ಷ ಕಾಲ ನಿಮ್ಮ ಉಳಿತಾಯ ಖಾತೆಯಲ್ಲಿ ಯಾವುದೇ ವಹಿವಾಟು ನಡೆಸದಿದ್ದರೆ, ಬ್ಯಾಂಕ್ ಬ್ಯಾಲೆನ್ಸ್ ಅನ್ನು ಆರ್ಬಿಐ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ವರ್ಗಾಯಿಸಲಾಗುತ್ತದೆ.

* ನಿಷ್ಕ್ರಿಯ ಖಾತೆಯನ್ನು ಸಕ್ರಿಯಗೊಳಿಸಲು ಏನು ಮಾಡಬೇಕು? ಕೆವೈಸಿ ದಾಖಲೆಗಳನ್ನು ಬ್ಯಾಂಕ್ಗೆ ಸಲ್ಲಿಸುವ ಮೂಲಕ ಅಥವಾ ಹೊಸ ವಹಿವಾಟು ಮಾಡುವ ಮೂಲಕ ನಿಷ್ಕ್ರಿಯ ಖಾತೆಯನ್ನು ಸಕ್ರಿಯಗೊಳಿಸಬಹುದು. ನಿಮ್ಮ ಖಾತೆ ಇರುವ ಬ್ಯಾಂಕ್ನ ಯಾವುದೇ ಶಾಖೆಯಲ್ಲಿ ಖಾತೆ ಸಕ್ರಿಯಗೊಳಿಸಬಹುದು. ನ್ಯಾಯಾಲಯ, ನ್ಯಾಯಾಧಿಕರಣ ಅಥವಾ ಕಾನೂನು ಅನುಷ್ಠಾನ ಏಜೆನ್ಸಿಯ ಆದೇಶದಿಂದ ನಿಷ್ಟ್ರಿಯಗೊಂಡ ಖಾತೆಯಲ್ಲಿನ ಹಣ ಪಡೆದುಕೊಳ್ಳಬಹುದು.

* ನಿಷ್ಕ್ರಿಯ ಠೇವಣಿ ಎಂದರೇನು?

10 ವರ್ಷದಿಂದ ಉಳಿತಾಯ ಅಥವಾ ಚಾಲ್ತಿ ಖಾತೆಯಲ್ಲಿ ಯಾವುದೇ ವಹಿವಾಟು ನಡೆಸಿಲ್ಲವಾದರೆ ಅಥವಾ ೧೦ ವರ್ಷವಾದರೂ

ಅವಧಿ ಮುಗಿದ ಟರ್ಮ್ ಠೇವಣಿಗಳನ್ನು ಪಡೆದುಕೊಳ್ಳದಿದ್ದರೆ, ಅದನ್ನು ʻಸುಪ್ತ ಖಾತೆಗಳುʼ ಎಂದು ಕರೆಯಲಾಗುತ್ತದೆ. ಮಾರ್ಚ್ 2023 ರಲ್ಲಿ ಇಂಥ 42,270 ಕೋಟಿ ರೂ. ಠೇವಣಿಗಳು ಬ್ಯಾಂಕ್ಗಳಲ್ಲಿ ನಿಷ್ಕ್ರಿಯವಾಗಿವೆ ಎಂದು ಸರ್ಕಾರವು ಇತ್ತೀಚೆಗೆ ಹೇಳಿದೆ.

* ನಿಷ್ಕ್ರಿಯ ಖಾತೆಯಲ್ಲಿ ಇರಬೇಕಾದ ಕನಿಷ್ಠ ಮೊತ್ತವೆಷ್ಟು?

ನಿಷ್ಕ್ರಿಯ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದರೆ, ಬ್ಯಾಂಕ್ಗಳು ದಂಡ ವಿಧಿಸುವಂತಿಲ್ಲ ಎಂದು ಆರ್ಬಿಐ ಹೇಳಿದೆ. ನಿಷ್ಕ್ರಿಯ ಖಾತೆಯನ್ನು ಸಕ್ರಿಯಗೊಳಿಸಲು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ.

* ನಿಷ್ಕ್ರಿಯ ಉಳಿತಾಯ ಖಾತೆ ಬಡ್ಡಿ ಗಳಿಸುವುದೇ?

ಖಾತೆ ಸಕ್ರಿಯವಾಗಿರಲಿ ಅಥವಾ ಇಲ್ಲದಿರಲಿ, ಉಳಿತಾಯ ಖಾತೆಯಲ್ಲಿರುವ ಮೊತ್ತಕ್ಕೆ ಬಡ್ಡಿ ನೀಡುವುದಾಗಿ ಆರ್ಬಿಐ ಹೇಳಿದೆ..

* ಎರಡು ವರ್ಷ ಕಾಲ ಯಾವುದೇ ವಹಿವಾಟು ನಡೆಸದಿದ್ದರೆ, ಯಾವೆಲ್ಲ ಖಾತೆಗಳು ನಿಷ್ಕ್ರಿಯವಾಗುತ್ತವೆ?

ಸರ್ಕಾರದ ಯೋಜನೆಗಳ ಫಲಾನುಭವಿಗಳು ಮತ್ತು ವಿದ್ಯಾರ್ಥಿ ವೇತನ ಖಾತೆಗಳನ್ನು ಶೂನ್ಯ ಬ್ಯಾಲೆನ್ಸ್ ಖಾತೆಗಳು ಈ ನಿಯಮದಿಂದ ವಿನಾಯಿತಿ ಪಡೆದಿವೆ. ಎರಡು ವರ್ಷಕ್ಕಿಂತ ಹೆಚ್ಚು ಕಾಲ ವಹಿವಾಟು ಇಲ್ಲದಿದ್ದರೂ, ಅಂತಹ ಖಾತೆಗಳನ್ನು ನಿಷ್ಕ್ರಿಯಗೊಳಿಸದಂತೆ ಆರ್ಬಿಐ ಬ್ಯಾಂಕ್ಗಳಿಗೆ ಸೂಚನೆ ನೀಡಿದೆ.

* ಖಾತೆ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇರುವಾಗ ಬ್ಯಾಂಕ್ ಏನು ಮಾಡುತ್ತದೆ?

ಗ್ರಾಹಕರು ಒಂದು ವರ್ಷಕ್ಕೂ ಹೆಚ್ಚು ಕಾಲ ವಹಿವಾಟು ನಡೆಸುತ್ತಿಲ್ಲ ಅಥವಾ ಅವಧಿ ಠೇವಣಿ ನವೀಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸೂಚನೆ ನೀಡದೆ ಇದ್ದರೆ, ಇಂಥ ಖಾತೆಗಳ ಪರಿಶೀಲನೆ ನಡೆಸಬೇಕೆಂದು ಆರ್ಬಿಐ ಹೇಳಿದೆ.

ಅಂತಹ ಸಂದರ್ಭಗಳಲ್ಲಿ ಬ್ಯಾಂಕ್ಗಳು ಖಾತೆದಾರರಿಗೆ ಮುಂಬರುವ ವರ್ಷದಲ್ಲಿ ಯಾವುದೇ ವಹಿವಾಟು ಮಾಡದಿದ್ದರೆ, ಖಾತೆ ನಿಷ್ಕ್ರಿಯಗೊಳ್ಳುತ್ತದೆ ಎಂದು ಪತ್ರ, ಇಮೇಲ್ ಅಥವಾ ಎಸ್ಎಂಎಸ್ ಮೂಲಕ ಸಂದೇಶ ರವಾನಿಸಬೇಕು. ಆನಂತರ, ಖಾತೆಯನ್ನು ಸಕ್ರಿಯಗೊಳಿಸಬೇಕೆಂದರೆ, ಖಾತೆದಾರರು ಹೊಸ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

………………………………………

̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤ಫೊಟೋ: ಪ್ರಾತಿನಿಧಿಕ ಚಿತ್ರ. ಫ್ರೀಪಿಕ್ ನ rawpixel.com

Next Story