ಯೂಸರ್​ ಮ್ಯಾನುವಲ್​ ನೀಡದ ಒನ್​ಪ್ಲಸ್ ಕಂಪನಿಗೆ ಗ್ರಾಹಕರಿಗೆ 5,000 ರೂ. ದಂಡ ಪರಿಹಾರ ನೀಡುವಂತೆ ಆದೇಶಿಸಿದ ಕೋರ್ಟ್​​
x
ಒನ್ ಪ್ಲಸ್​ ಮೊಬೈಲ್​ (ಪ್ರಾತಿನಿಧಿಕ ಚಿತ್ರ)

ಯೂಸರ್​ ಮ್ಯಾನುವಲ್​ ನೀಡದ ಒನ್​ಪ್ಲಸ್ ಕಂಪನಿಗೆ ಗ್ರಾಹಕರಿಗೆ 5,000 ರೂ. ದಂಡ ಪರಿಹಾರ ನೀಡುವಂತೆ ಆದೇಶಿಸಿದ ಕೋರ್ಟ್​​

ಕಂಪನಿಯ ಆರಂಭಿಕ ನಿರ್ಲಕ್ಷ್ಯದಿಂದ ಬೇಸತ್ತು ಜೂನ್ 3ರಂದು ಬೆಂಗಳೂರು ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.


ಹೊಸ ಮೊಬೈಲ್ ಫೋನ್ ಖರೀದಿಸುವಾಗ ಬಳಕೆದಾರ ಕೈಪಿಡಿಯನ್ನು (ಯೂಸರ್​ ಮ್ಯಾನುವಲ್​) ನೀಡದ ತಪ್ಪಿಗೆ ಆ ಗ್ರಾಹಕನಿಗೆ 5,000 ರೂ.ಗಳನ್ನು ಪಾವತಿಸುವಂತೆ ಬೆಂಗಳೂರು ಗ್ರಾಹಕ ನ್ಯಾಯಾಲಯವು ಒನ್​ಪ್ಲಸ್​ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್​ ಕಂಪನಿಗೆ ಆದೇಶಿಸಿದೆ.

ಗ್ರಾಹಕ ನ್ಯಾಯಾಲಯವು ಇದನ್ನು ಕಂಪನಿಯ ಕಡೆಯಿಂದ "ಸಂಪೂರ್ಣ ನಿರ್ಲಕ್ಷ್ಯ ಮತ್ತು ಉದಾಸೀನ ಧೋರಣೆ " ಎಂದು ಅಭಿಪ್ರಾಯಪಟ್ಟಿದೆ. ಯೂಸರ್ ಮ್ಯಾನುಯಲ್​ ನೀಡಲು ವಿಳಂಬ ಮಾಡಿರುವುದು ಗ್ರಾಹಕರಿಗೆ ಕೊಟ್ಟಿರುವ ಮಾನಸಿಕ ವೇದನೆ ಎಂದು ಪರಿಗಣಿಸಿದೆ ಎಮದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ.

ವರದಿಯ ಪ್ರಕಾರ, ಬೆಂಗಳೂರಿನ ಸಂಜಯ್ ನಗರದ ನಿವಾಸಿ ಎಸ್.ಎಂ.ರಮೇಶ್ ಅವರು ಡಿಸೆಂಬರ್ 6, 2023 ರಂದು ಒನ್​ಪ್ಲಸ್​ ನಾರ್ಡ್ ಸಿಇ 3 ಮೊಬೈಲ್ ಫೋನ್ ಖರೀದಿ ಮಾಡಿದ್ದಾರೆ. ಅದಕ್ಕೆ 24,598 ರೂಪಾಯಿ ಪಾವತಿ ಮಾಡಿದ್ದರು. ಆದಾಗ್ಯೂ, ಫೋನ್​ನ ವಿವಿಧ ಸೆಟ್ಟಿಂಗ್​ಗಳ ಕುರಿತು ವಿವರವಾದ ಮಾಹಿತಿ ನೀಡುವ ಬಳಕೆದಾರ ಕೈಪಿಡಿ ಪುಸ್ತಕವನ್ನು ಅವರಿಗೆ ಕೊಟ್ಟಿರಲಿಲ್ಲ. ಈ ನಿರ್ಣಾಯಕ ಮಾಹಿತಿಯ ಅನುಪಸ್ಥಿತಿಯು ವಾರಂಟಿ ಮಾಹಿತಿ ಮತ್ತು ಕಂಪನಿಯ ವಿಳಾಸದ ಕುರಿತು ಗ್ರಾಹಕರನ್ನು ಗೊಂದಲಕ್ಕೆ ಸಿಲುಕಿಸಿತ್ತು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಗ್ರಾಹಕರ ಹಲವಾರು ಪ್ರಯತ್ನಗಳ ನಂತರ, ಒನ್​ಪ್ಲಸ್​ ಇಂಡಿಯಾ 2024ರ ಏಪ್ರಿಲ್​​ನಲ್ಲಿ ಅವರಿಗೆ ಬಳಕೆದಾರ ಕೈಪಿಡಿ ತಲುಪಿಸಿತ್ತು. ಆದರೆ, ಕಂಪನಿಯ ಆರಂಭಿಕ ನಿರ್ಲಕ್ಷ್ಯದಿಂದ ಬೇಸತ್ತು ಜೂನ್ 3ರಂದು ಬೆಂಗಳೂರು ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ನೋಟಿಸ್​ ನೀಡಿದರೂ ಕಂಪನಿಯು ವಿಚಾರಣೆಗೆ ಹಾಜರಾಗಲಿಲ್ಲ. ಹೀಗಾಗಿ ಗ್ರಾಹಕರ ನ್ಯಾಯಾಲಯವು ಈ ವಿಷಯವನ್ನು ನಿರ್ಲಕ್ಷ್ಯ ಎಂದು ಗ್ರಾಹಕರ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆಯೋಗವು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ ಗ್ರಾಹಕರಿಗೆ ಬಳಕೆದಾರ ಕೈಪಿಡಿಯನ್ನು ಒದಗಿಸುವುದು ಕಂಪನಿಯ ಕರ್ತವ್ಯ. ಯೂಸರ್ ಮ್ಯಾನುಯಲ್​ ನೀಡದ ಕಾರಣ ಅವರು ಮಾನಸಿಕವಾಗಿ ತೊಂದರೆ ಎದುರಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿತು

ವೆಂಬರ್ 29 ರಂದು ಆಯೋಗವು ಕಂಪನಿಗೆ 5,000 ರೂ.ಗಳನ್ನು ಗ್ರಾಹಕರಿಗೆ ಪರಿಹಾರವಾಗಿ ಮತ್ತು 1,000 ರೂ.ಗಳನ್ನು ವ್ಯಾಜ್ಯ ವೆಚ್ಚ ಪಾವತಿಸುವಂತೆ ಆದೇಶಿಸಿದೆ.

Read More
Next Story