ಸೇಲ್‌(ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ) ಉತ್ಪಾದನೆಯಲ್ಲಿ ಶೇ.14 ಬೆಳವಣಿಗೆಯ ಹೊರತಾಗಿಯೂ, ಎರಡನೇ ದ್ವೈಮಾಸದ ಸಾಧನೆ ನಿರಾಶಾದಾಯಕವಾಗಿದೆ.


ಸೇಲ್‌ ಕಾರ‍್ಯಕ್ಷಮತೆ ಮೇಲೆ ಉಕ್ಕಿನ ಬೆಲೆ ಪರಿಣಾಮ

ನವದೆಹಲಿ:

ಸೇಲ್‌(ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ) ಉತ್ಪಾದನೆಯಲ್ಲಿ ಶೇ.14 ಬೆಳವಣಿಗೆಯ ಹೊರತಾಗಿಯೂ, ಎರಡನೇ ದ್ವೈಮಾಸದ ಸಾಧನೆ ನಿರಾಶಾದಾಯಕವಾಗಿದೆ.

ಪ್ರಭುದಾಸ್ ಲೀಲಾಧರ್ ವರದಿ ಪ್ರಕಾರ, 2022ರಲ್ಲಿ ಸೇಲ್‌ನ ಇಬಿಐಟಿಡಿಎ 3,870 ಕೋಟಿ ರೂ.ಗಳಾಗಿದ್ದು, ರೈಲಿನ ಸಾಗಣೆ ಬೆಲೆ ಪರಿಷ್ಕರಣೆಯಿಂದಾಗಿ 1,750 ಕೋಟಿ ರೂ. ಆದಾಯ ಬಂದಿದೆ. ಸೇಲ್‌ ತನ್ನ ಸಾರ‍್ಥ್ಯವನ್ನು ವರ‍್ಷಿಕ 20.2 ದಶಲಕ್ಷ ಟನ್‌ಗಳಿಂದ 2032ರ ವೇಳೆಗೆ 35 ದಶಲಕ್ಷ ಟನ್‌ಗೆ ಹೆಚ್ಚಿಸುವ ಯೋಜನೆಯನ್ನು ಹೊಂದಿದೆ.

ಇಬಿಐಟಿಡಿಎ ಪ್ರತಿ ಟನ್‌ಗೆ 4,416 ರೂ. ಇದ್ದು, ನಿರೀಕ್ಷಿತ 5,757 ರು.ಗಿಂತ ಕಡಿಮೆಯಾಗಿದೆ. ಕೋಕಿಂಗ್‌ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿದ್ದು, ಅದರ ವೆಚ್ಚಗಳು ಇಬಿಐಡಿಟಿಎ ಮೇಲೆ ಪರಿಣಾಮ ಬೀರುತ್ತದೆ. ಉತ್ಪಾದನಾ ಸಾರ‍್ಥ್ಯವನ್ನು ಹೆಚ್ಚಿಸಿದರೂ, ಸಾಲವನ್ನು ತೀರಿಸುವಲ್ಲಿನ ವಿಳಂಬ ಮತ್ತು ಒಟ್ಟಾರೆ ಕರ‍್ಯಾಚರಣೆಯ ಅಸರ‍್ಥತೆಯಿಂದಾಗಿ ಇನ್ನಷ್ಟು ವಿಳಂಬ ಉಂಟಾಗಬಹುದು ಎಂದು ವರದಿ ಹೇಳಿದೆ.

ಐಐಎಸ್‌ಸಿಒ ಉಕ್ಕಿನ ಸ್ಥಾವರದ ವಿಸ್ತೃತ ಯೋಜನಾ ವರದಿ ಸಿದ್ಧವಾಗಿದ್ದು, ಅನುಮೋದನೆಗೆ ಕಾಯುತ್ತಿದೆ. ಭವಿಷ್ಯದಲ್ಲಿ ಸ್ಥಾವರಗಳ ಅಡಚಣೆಗಳನ್ನು ಪರಿಹರಿಸುವ ಮೂಲಕ ಉತ್ಪಾದನೆಯನ್ನು ಹೆಚ್ಚಿಸಲು ಸೇಲ್‌ ನರ‍್ಧರಿಸುತ್ತದೆ. ಇದು 2026 ಮತ್ತು 2027ರಲ್ಲಿ ಭಿಲಾಯ್ ಮತ್ತು ರೂರ‍್ಕೆಲಾದಿಂದ ಸುಮಾರು 1 ದಶಲಕ್ಷ ಟನ್‌ ಉತ್ಪಾದನೆ ನಿರೀಕ್ಷಿಸಲಾಗಿದೆ. ಸೇಲ್‌ ಭವಿಷ್ಯ ಉಕ್ಕಿನ ಬೆಲೆಯನ್ನು ಅವಲಂಬಿಸಿದೆ ಎಂದು ವರದಿ ಹೇಳಿದೆ.

Next Story