ಗೋ ಫಸ್ಟ್‌ ಸಿಇಒ ಕೌಶಿಕ್ ಖೋನಾ ರಾಜೀನಾಮೆ

ಮುಂಬೈ, ನವೆಂಬರ್ 30 (ಪಿಟಿಐ): ವಾಯು ಸಂಚಾರ ನಿಲ್ಲಿಸಿದ್ದ ಗೋ ಫಸ್ಟ್‌ನ ಸಿಇಒ ಕೌಶಿಕ್ ಖೋನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಏರ್‌ಲೈನ್ಸ್‌ ನ ಉದ್ಯೋಗಿಗಳಿಗೆ ಬರೆದ ಇಮೇಲ್‌ನಲ್ಲಿ ʻನವೆಂಬರ್ 30 ಕೊನೆಯ ದಿನʼ ಎಂದು ಹೇಳಿದ್ದರು. ವಾಯುಯಾನ ಸಂಸ್ಥೆ ದಿವಾಳಿತನ ಪ್ರಕ್ರಿಯೆಗೆ ಅರ‍್ಜಿ ಸಲ್ಲಿಸಿದ ಸುಮಾರು ಏಳು ತಿಂಗಳ ನಂತರ ಯಾವುದೇ ಸದ್ದುಗದ್ದಲ ಇಲ್ಲದೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. .

2008 ರಿಂದ 2011 ರವರೆಗೆ ಗೋಫಸ್ಟ್‌ನೊಂದಿಗೆ ಇದ್ದ ಖೋನಾ, ಆನಂತರ ಆಗಸ್ಟ್ 2020ರಲ್ಲಿ ಸಿಇಒ ಆಗಿ ಮರಳಿದ್ದರು. ʻನಿರ‍್ದೇ ಶಕರ ಮಂಡಳಿಯು ಐಬಿಸಿಯ ವಿಭಾಗ 10ರಡಿ ಅರ‍್ಜಿಯನ್ನು ಸಲ್ಲಿಸಲು ನಿರ‍್ಧರಿಸಿದೆ. ನಾವು ಶೀಘ್ರ ದಲ್ಲೇ ಕಾರ‍್ಯಾಚರಣೆ ಪುನರಾರಂಭಿಸುವ ಭರವಸೆ ಹೊಂದಿದ್ದೆವು.ಆದರೆ, ಅದು ಅನಿವಾರ‍್ಯ ಕಾರಣಗಳಿಂದ ವಿಳಂಬವಾಯಿತುʼ ಎಂದು ಹೇಳಿದ್ದಾರೆ.

ವಿಭಾಗ 10 ಸ್ವಯಂಪ್ರೇರಿತ ದಿವಾಳಿತನ ಪ್ರಕ್ರಿಯೆಗಳಿಗೆ ಸಂಬಂಧಿಸಿದೆ. ಅವರ ಪ್ರಕಾರ, ʻಏರ್‌ಲೈನ್‌ನ ಎಲ್ಲ ಉದ್ಯೋಗಿಗಳು ವಿಸ್ತೃತ ಆಡಿಟ್ ನಡೆಸಿ, ಕಾರ‍್ಯಾಚರಣೆಯನ್ನು ಪುನರಾರಂಭಿಸಲು ನಾಗರಿಕ ವಿಮಾನಯಾನ ಮಹಾ ನಿರ‍್ದೇಶನಾಲಯ (ಡಿಜಿಸಿಎ) ಅನುಮೋದನೆ ಪಡೆಯಲು ಪ್ರಾಮಾಣಿಕವಾಗಿ ಕೆಲಸ ಮಾಡಿದರು. ಆದರೆ, ದುರದೃಷ್ಟವಶಾತ್ ಪರಿಸ್ಥಿತಿ ನಮ್ಮ ಪರವಾಗಿ ರಲಿಲ್ಲʼ.

ಗೋಫಸ್ಟ್‌ ಮೇ ತಿಂಗಳಿನಲ್ಲಿ ಹಾರಾಟ ನಿಲ್ಲಿಸಿತು. ಸಿಬ್ಬಂದಿಗೆ 6 ತಿಂಗಳಿನಿಂದ ವೇತನ ಪಾವತಿಸಿಲ್ಲ.

Next Story