ಆರ್‌ಬಿಐ ಮಾಜಿ ಗವರ‍್ನರ್ ರಘುರಾಮ್ ರಾಜನ್‌, ದೊಡ್ಡ ಪ್ರಮಾಣದಲ್ಲಿ ಸೂಕ್ತ ತರಬೇತಿ ನೀಡುವ ಮೂಲಕ ದೇಶದ ಅಪಾರ ಮಾನವ ಸಂಪನ್ಮೂಲವನ್ನು ಸಮರ‍್ಥವಾಗಿ ಬಳಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಪೌಷ್ಟಿಕತೆ, ಮಾನವ ಸಂಪನ್ಮೂಲದತ್ತ ಗಮನ ಅಗತ್ಯ: ರಘುರಾಮ ರಾಜನ್

ಹೈದರಾಬಾದ್, ಡಿ.೧೮ (ಪಿಟಿಐ) ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಭಾರತವು ಅಪೌಷ್ಟಿಕತೆಯಂತಹ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವಿದೆ ಮತ್ತು ಮಾನವ ಬಂಡವಾಳದ ತನ್ನ ಪ್ರಮುಖ ಸಂಪತ್ತಿನತ್ತ ಗಮನಹರಿಸಬೇಕು ಎಂದು ಆರ್‌ಬಿಐ ಮಾಜಿ ಗರ‍್ನರ್ ಡಾ. ರಘುರಾಮ್ ರಾಜನ್ ಹೇಳಿದ್ದಾರೆ.

ಭಾನುವಾರ ಇಲ್ಲಿನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ (ಐಎಸ್‌ಬಿ) ಅವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಅಪೌಷ್ಟಿಕತೆ ಎಂಬುದು ಏರಿಕೆಯಾಗುತ್ತಿರುವ ಹೊತ್ತಿನಲ್ಲಿ ದೇಶವು ಹೇಗೆ ಅಭಿವೃದ್ಧಿ ಹೊಂದುತ್ತದೆ ಎಂಬ ಸಭಿಕರೊಬ್ಬರ ಪ್ರಶ್ನೆಗೆ ಅವರು ಉತ್ತರಿಸಿ, "ನಾವು ೨೦೪೭ರ ವೇಳೆಗೆ ಅಭಿವೃದ್ಧಿ ಹೊಂದಿದ, ಶ್ರೀಮಂತ ರಾಷ್ಟ್ರವಾಗಲು ನರ‍್ಧರಿಸಿದ್ದೇವೆ. ಆದರೆ, ಶೇ.೩೫ರಷ್ಟು ಅಪೌಷ್ಟಿಕತೆಯ ಸಮಾಜವನ್ನು ಇಟ್ಟುಕೊಂಡು ೨೦೪೭ರ ವೇಳೆಗೆ ಅಭಿವೃದ್ಧಿ ಹೊಂದಿದ ಶ್ರೀಮಂತ ದೇಶವಾಗುತ್ತೀರಿ ಎಂದರೆ ಅದೊಂದು ತಮಾಷೆಯಂತೆ ಭಾಸವಾಗುತ್ತದೆ" ಎಂದರು.

ಈಗ ಅಪೌಷ್ಟಿಕತೆಯಿಂದ ಬಳಲುತ್ತಿರುವ ನಮ್ಮ ಜನಸಂಖ್ಯೆಯ ಶೇ.೩೫ ರಷ್ಟಿರುವ ಮಕ್ಕಳು ಇನ್ನು ೧೦ ರ‍್ಷಗಳ ನಂತರ ಕರ‍್ಮಿಕರಾಗಿ ಸಮಾಜದ ಮುಖ್ಯವಾಹಿನಿಗೆ ಸೇರುತ್ತಾರೆ. ಪರಿಸ್ಥಿತಿ ಹೀಗಿರುವಾಗ ನಾವು ಶ್ರೀಮಂತ ರಾಷ್ಟ್ರದ ಕನಸು ಕಾಣುವುದು ಕ್ರೂರ ವ್ಯಂಗ್ಯ ಎಂದು ಅವರು ಹೇಳಿದರು.

ದೊಡ್ಡ ಪ್ರಮಾಣದಲ್ಲಿ ಸೂಕ್ತ ತರಬೇತಿ ನೀಡುವ ಮೂಲಕ ದೇಶದ ಅಪಾರ ಮಾನವ ಸಂಪನ್ಮೂಲವನ್ನು ಪೋಷಿಸಲು ಅವರು ಒತ್ತು ನೀಡಬೇಕಿದೆ. ಆಗ ಮಾತ್ರ ನಾವು ಮುಂದುವರಿಯಲು ಸಾಧ್ಯ ಎಂದ ಅವರು, "ಭಾರತದ ಪ್ರಮುಖ ಸಂಪನ್ಮೂಲವೇ ಅದರ ಮಾನವ ಬಂಡವಾಳ. ಅದರ ಮೇಲೆ ಕೇಂದ್ರೀಕರಿಸಿ, ಸೂಕ್ತ ಶಿಕ್ಷಣ ಮತ್ತು ತರಬೇತಿ ನೀಡಿ ಆ ಸಂಪನ್ಮೂಲವನ್ನು ಸಂಪತ್ತು ಸೃಜನೆಯ ಅವಕಾಶವಾಗಿ ಬಳಸಿಕೊಂಡರೆ ನಾವು ಖಂಡಿತಾಗಿಯೂ ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಬಹುದು. ಆದರೆ, ನಿಜವಾಗಿಯೂ ಇವತ್ತು ಅಂತಹ ಆದ್ಯತೆಯ ಕೆಲಸ ಆಗುತ್ತಿದೆಯೇ?" ಎಂದು ಪ್ರಶ್ನಿಸಿದರು.

ತಾವು ಆರ್‌ಬಿಐ ಗರ‍್ನರ್ ಆಗಿದ್ದಾಗ ಬ್ಯಾಂಕಿಂಗ್ ವ್ಯವಸ್ಥೆಯನ್ನು ʼಸ್ವಚ್ಛಗೊಳಿಸಲುʼ ಆರಂಭಿಸಿದ ಕರ‍್ಯ ಮುಂದುವರಿದಿದೆಯೇ? ನಿಜವಾಗಿಯೂ ಬ್ಯಾಂಕಿಂಗ್‌ ವ್ಯವಸ್ಥೆ ಸುಧಾರಿಸಿದೆಯೇ? ಎಂಬ ಪ್ರಶ್ನೆಗೆ, ರಾಜನ್‌, "ಅದು ಬಹಳ ಸುಧರ‍್ಘ ಅವಧಿಯ ಕರ‍್ಯ. ಆದಾಗ್ಯೂ ಬಹುತೇಕ ಬ್ಯಾಂಕಿಂಗ್‌ ವ್ಯವಸ್ಥೆ ʼಸ್ವಚ್ಛಗೊಂಡಿದೆʼ ಎಂದು ಅಂದುಕೊಂಡಿದ್ದೇನೆ" ಎಂದರು.


Next Story