Share Market: ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ ಬಿಎಸ್ಇ ಬೆಂಚ್ ಮಾರ್ಕ್ 628.34 ಪಾಯಿಂಟ್ ಏರಿಕೆ ಕಂಡು 78,669.93ಕ್ಕೆ ತಲುಪಿದೆ. ಎನ್ಎಸ್ಇ 219 ಪಾಯಿಂಟ್ಸ್ ಏರಿಕೆಯಾಗಿ 23,806.50ಕ್ಕೆ ತಲುಪಿದೆ.

ಕಳೆದ ಐದು ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದ್ದರಿಂದ ಹೂಡಿಕೆದಾರರಲ್ಲಿ ಉಂಟಾಗಿದ್ದ ಆತಂಕ ಸೋಮವಾರ ಬೆಳಗ್ಗೆ ವಹಿವಾಟು ಆರಂಭಗೊಂಡಾಗ ಕಡಿಮೆಯಾಗಿದೆ. ಈಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ ಬೆಳಿಗ್ಗೆ ಚೇತರಿಸಿಕೊಂಡವು.

ಬ್ಲೂ-ಚಿಪ್ ಷೇರುಗಳಲ್ಲಿನ ಖರೀದಿಯು ಮಾರುಕಟ್ಟೆಗಳ ಚೇತರಿಕೆಗೆ ಸಹಾಯ ಮಾಡಿತು. ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ ಬಿಎಸ್ಇ ಬೆಂಚ್ ಮಾರ್ಕ್ 628.34 ಪಾಯಿಂಟ್ ಏರಿಕೆ ಕಂಡು 78,669.93ಕ್ಕೆ ತಲುಪಿದೆ. ಎನ್ಎಸ್ಇ 219 ಪಾಯಿಂಟ್ಸ್ ಏರಿಕೆಯಾಗಿ 23,806.50ಕ್ಕೆ ತಲುಪಿದೆ.

ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಟಿಸಿ, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್ಟೆಲ್, ಟಾಟಾ ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಆಕ್ಸಿಸ್ ಬ್ಯಾಂಕ್ ಅತಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ.

ಆದರೆ ಹೊಸದಾಗಿ ಪ್ರವೇಶಿಸಿದ್ದ ಜೊಮ್ಯಾಟೊ ಮತ್ತು ಸನ್ ಫಾರ್ಮಾ ಹಿನ್ನಡೆ ಕಂಡವು. ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಸಕಾರಾತ್ಮಕ ವಹಿವಾಟು ನಡೆಸುತ್ತಿವೆ.

ಕಳೆದ ಐದು ದಿನಗಳಲ್ಲಿ, ಬಿಎಸ್ಇ ಬೆಂಚ್ಮಾರ್ಕ್ 4,091.53 ಪಾಯಿಂಟ್‌ಗಳು ಅಥವಾ ಶೇಕಡಾ 4.98 ರಷ್ಟು ಕುಸಿದಿದ್ದರೆ, ನಿಫ್ಟಿ 1,180.8 ಪಾಯಿಂಟ್‌ ಅಥವಾ ಶೇಕಡಾ 4.76 ರಷ್ಟು ಕುಸಿತ ಕಂಡಿತ್ತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಕಳೆದ ಶುಕ್ರವಾರ 3,597.82 ಕೋಟಿ ರೂ.ಗಳ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಅಂಕಿ ಅಂಶಗಳು ತಿಳಿಸಿವೆ. ಇದು ಶೇರ್‌ ಮಾರುಕಟ್ಟೆಗಳ ಕುಸಿತಕ್ಕೆ ಕಾರಣವಾಗಿದ್ದವು.

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಮೌಲ್ಯ ಶೇಕಡಾ 0.47 ರಷ್ಟು ಏರಿಕೆಯಾಗಿ ಬ್ಯಾರೆಲ್‌ಗೆ 73.28 ಡಾಲರ್‌ ತಲುಪಿದೆ.

Next Story