Gold rate Today | ಚಿನ್ನದ ದರ ಏರಿಕೆಗೆ ಬ್ರೇಕ್! ಸತತ ಎರಡನೇ ದಿನವೂ ಯಥಾಸ್ಥಿತಿ
x

ಸಾಂದರ್ಭಿಕ ಚಿತ್ರ

Gold rate Today | ಚಿನ್ನದ ದರ ಏರಿಕೆಗೆ ಬ್ರೇಕ್! ಸತತ ಎರಡನೇ ದಿನವೂ ಯಥಾಸ್ಥಿತಿ

ಏ.2ರಿಂದ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗದಿರುವುದು ಆಭರಣಪ್ರಿಯರಲ್ಲಿ ಸಂತಸ ಮೂಡಿಸಿದೆ. ಕಳೆದೆರಡು ದಿನದಿಂದ ಒಂದು ಗ್ರಾಂ ಬೆಳ್ಳಿಗೆ 250 ರೂ. ಇದ್ದು, 10 ಗ್ರಾಂಗೆ 2,500 ರೂ, ದಾಖಲಿಸಿದೆ.


Click the Play button to hear this message in audio format

ಜಾಗತಿಕವಾಗಿ ಹಲವಾರು ವಿದ್ಯಾಮಾನಗಳು ಸಂಭವಿಸುತ್ತಿದ್ದರೂ ಹಲವಾರು ದಿನಗಳಿಂದ ಏರಿಕೆಯಾಗುತ್ತಿದ್ದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಕಳೆದೆರಡು ದಿನಗಳಿಂದ ಯಾವುದೇ ವ್ಯತ್ಯಾಸವಾಗಿಲ್ಲ. ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ 24 ಕ್ಯಾರಟ್‌ನ 1 ಗ್ರಾಂ ಚಿನ್ನ 15,093 ರೂ. ದಾಖಲಿಸಿದ್ದು, 10 ಗ್ರಾಂಗೆ 1,50,930 ರೂ. ತಲುಪಿದೆ

ಶನಿವಾರ(ಏ.4) ಚಿನಿವಾರಪೇಟೆಯಲ್ಲಿ 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 13,835 ರೂ. ತಲುಪಿದ್ದು, 10 ಗ್ರಾಂಗೆ 1,38,350 ರೂ. ದಾಖಲಿಸಿದೆ. 18 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 11,320 ರೂ. ಆಗಿದ್ದು, ಪ್ರತೀ 10 ಗ್ರಾಂ ಗೆ 1,13,200 ರೂ. ತಲುಪಿದೆ.

ಬೆಳ್ಳಿ ದರ ಯಥಾಸ್ಥಿತಿ

ಏ.2ರಿಂದ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗದಿರುವುದು ಆಭರಣಪ್ರಿಯರಲ್ಲಿ ಸಂತಸ ಮೂಡಿಸಿದೆ. ಕಳೆದೆರಡು ದಿನದಿಂದ ಒಂದು ಗ್ರಾಂ ಬೆಳ್ಳಿಗೆ 250 ರೂ. ಇದ್ದು, 10 ಗ್ರಾಂಗೆ 2,500 ರೂ, ದಾಖಲಿಸಿದೆ. ಒಂದು ಕೆ.ಜಿ. ಬೆಳ್ಳಿ ದರ 2.50 ಲಕ್ಷ ರೂ. ತಲುಪಿದ್ದು, ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ವಿವಿಧ ನಗರಗಳಲ್ಲಿ ಚಿನ್ನ-ಬೆಳ್ಳಿ ದರ

ಚೆನ್ನೈನಲ್ಲಿ 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನಕ್ಕೆ 15,218 ರೂ. ಹಾಗೂ ಒಂದು ಕೆ.ಜಿ. ಬೆಳ್ಳಿಗೆ 2.55 ಲಕ್ಷ ರೂ. ತಲುಪಿದೆ. ಹೈದರಬಾದ್‌ನಲ್ಲಿ 24 ಕ್ಯಾರೆಟ್‌ನ ಒಂದು ಗ್ರಾಂಗೆ 15,093 ರೂ. ತಲುಪಿದ್ದು, ಬೆಳ್ಳಿ 1 ಕೆ.ಜಿ. ಗೆ2.5 ಲಕ್ಷ ರೂ. ತಲುಪಿದೆ. ದೆಹಲಿಯಲ್ಲಿ 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನಕ್ಕೆ 15,108 ರೂ. ತಲುಪಿದ್ದು, ಬೆಳ್ಳಿ 1 ಕೆ.ಜಿ. ಗೆ 2.5 ಲಕ್ಷ ರೂ. ತಲುಪಿದೆ. ಮುಂಬೈನಲ್ಲಿ ಒಂದು ಗ್ರಾಂಗೆ 15,093 ರೂ. ತಲುಪಿದ್ದು, ಬೆಳ್ಳಿಗೆ ಒಂದು ಕೆ.ಜಿ.ಗೆ 2.5 ಲಕ್ಷ ರೂ. ತಲುಪಿದೆ.

Read More
Next Story