Gold prices rise further: gold increases by Rs 1.57 lakh, silver by Rs 5 thousand
x

ಚಿನ್ನ ಹಾಗೂ ಬೆಳ್ಳಿ

ಚಿನ್ನದ ದರ ಮತ್ತಷ್ಟು ಏರಿಕೆ:ಬಂಗಾರ 1.57 ಲಕ್ಷ ರೂ, ಬೆಳ್ಳಿ 5 ಸಾವಿರ ರೂ. ಹೆಚ್ಚಳ

ಶುಕ್ರವಾರ ಡಾಲರ್ ವಿರುದ್ಧ ರೂಪಾಯಿ 90.73 ಕ್ಕೆ ಕುಸಿದಿದ್ದು ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಬೆಳ್ಳಿಯ ದರವು ಪ್ರತಿ ಕೆ.ಜಿ. ಗೆ ಸುಮಾರು 2,70 ಲಕ್ಷ ರೂ. ನಿಂದ 2,75 ಲಕ್ಷ ರೂ. ಗೆ ಏರಿಕೆಯಾಗಿದೆ.


Click the Play button to hear this message in audio format

ಹಳದಿ ಲೋಹ ಮತ್ತೊಮ್ಮೆ ಗಗನಕ್ಕೇರಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ರೂಪಾಯಿ ಮೌಲ್ಯ ಸತತ ಕುಸಿತದಿಂದಾಗಿ ಚಿನ್ನದ ಬೆಲೆ ಏರಿಕೆಯ ಹಾದಿಯಲ್ಲಿದ್ದು, ಕಳೆದ 24 ಗಂಟೆಗಳಲ್ಲಿ ಶೇ. 2.65 ರಷ್ಟು ಹೆಚ್ಚಾಗಿದೆ. ಶನಿವಾರ ಬೆಂಗಳೂರಿನಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ (ಶುದ್ಧ) ಚಿನ್ನದ ಬೆಲೆ ಪ್ರತಿ ಗ್ರಾಂ ಗೆ ಸುಮಾರು 15,738 ರಷ್ಟಿದ್ದರೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂ ಗೆ ಸುಮಾರು 14,426 ರಷ್ಟಿದೆ. 18 ಕ್ಯಾರೆಟ್ ಒಂದು ಗ್ರಾಂ ಗೆ ಸುಮಾರು 11,804 ರೂ. ತಲುಪಿದೆ. ಪ್ರತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,57,600 ರೂ. 22 ಕ್ಯಾರೆಟ್‌ ಚಿನ್ನ 10 ಗ್ರಾಂ ಗೆ 1,44, 260 ರೂ. ತಲುಪಿದ್ದು, 18 ಕ್ಯಾರೆಟ್ 10 ಗ್ರಾಂ ಗೆ 1,18,040 ರೂ.ಗೆ ಏರಿಕೆಯಾಗಿದೆ.

ಬೆಳ್ಳಿ ಒಂದು ಕೆ.ಜಿ. ಗೆ 5 ಸಾವಿರ ಹೆಚ್ಚಳ

ಶುಕ್ರವಾರ ಡಾಲರ್ ವಿರುದ್ಧ ರೂಪಾಯಿ 90.73 ಕ್ಕೆ ಕುಸಿದಿದ್ದು ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಬೆಳ್ಳಿಯ ದರವು ಪ್ರತಿ ಕೆ.ಜಿ. ಗೆ ಸುಮಾರು 2,70 ಲಕ್ಷ ರೂ. ನಿಂದ 2,75 ಲಕ್ಷ ರೂ. ಗೆ ಏರಿಕೆಯಾಗಿದ್ದು, ಒಂದು ಗ್ರಾಂ ಗೆ 275 ರೂ. ಹೆಚ್ಚಳವಾಗಿದೆ.

ಚಿನ್ನ ಹಾಗೂ ಬೆಳ್ಳಿಯ ಬೆಲೆ ಹೆಚ್ಚಾಗಲು ಪ್ರಮುಖ ಕಾರಣಗಳು

ಜಾಗತಿಕ ರಾಜಕೀಯ ಅಸ್ಥಿರತೆ: ರಷ್ಯಾ-ಉಕ್ರೇನ್ ಮತ್ತು ಮಧ್ಯಪ್ರಾಚ್ಯದ ಸಂಘರ್ಷಗಳ ಜೊತೆಗೆ, 2026ರಲ್ಲಿ ಅಮೆರಿಕ - ಯುರೋಪ್ ನಡುವಿನ ಸುಂಕದ ಸಮರ ಮತ್ತು ಗ್ರೀನ್‌ಲ್ಯಾಂಡ್ ವಿಚಾರವಾಗಿ ಉಂಟಾಗಿರುವ ಉದ್ವಿಗ್ನತೆ ಹೂಡಿಕೆದಾರರನ್ನು ಚಿನ್ನದತ್ತ ಸೆಳೆಯುತ್ತಿದ್ದು ಏರಿಕೆಯಾಗುವಂತೆ ಮಾಡಿದೆ.

ಕೇಂದ್ರ ಬ್ಯಾಂಕುಗಳಿಂದ ಚಿನ್ನದ ಖರೀದಿ: ಜಾಗತಿಕವಾಗಿ ಅನೇಕ ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳು, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು, ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಟನ್‌ಗಟ್ಟಲೆ ಚಿನ್ನವನ್ನು ಖರೀದಿಸಿ ಮೀಸಲಿಡುತ್ತಿರುವುದು ಪ್ರಮುಖ ಕಾರಣವಾಗಿದೆ.

ಬೆಳ್ಳಿಯ ಕೈಗಾರಿಕಾ ಬೇಡಿಕೆ: ಸೌರಶಕ್ತಿ ಫಲಕಗಳು, ಎಲೆಕ್ಟ್ರಿಕ್ ವಾಹನಗಳು (EV) ಮತ್ತು 5G ತಂತ್ರಜ್ಞಾನದಲ್ಲಿ ಬೆಳ್ಳಿಯ ಬಳಕೆ ಹೆಚ್ಚಾಗುತ್ತಿದೆ. ಸರಬರಾಜಿನ ಕೊರತೆ ಮತ್ತು ಚೀನಾದ ರಫ್ತು ನಿರ್ಬಂಧಗಳಿಂದಾಗಿ ಬೆಳ್ಳಿ ಬೆಲೆ ಗಗನಕ್ಕೇರುತ್ತಿದೆ.

ರೂಪಾಯಿ ಮೌಲ್ಯದ ಕುಸಿತ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಇಳಿಕೆಯಾಗುತ್ತಿರುವುದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೆಚ್ಚಾಗಲು ನೇರ ಕಾರಣವಾಗಿದೆ.

ಬಡ್ಡಿದರ ಕಡಿತದ ನಿರೀಕ್ಷೆ: ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಕಡಿತಗೊಳಿಸುವ ನಿರೀಕ್ಷೆಯಿರುವುದು ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನವನ್ನು ಆಯ್ಕೆ ಮಾಡಿಕೊಳ್ಳಲು ಪ್ರೇರೇಪಿಸುತ್ತಿದೆ.

ದೇಶೀಯ ಬೇಡಿಕೆ: ಭಾರತದಲ್ಲಿ ಮದುವೆಯ ಸೀಸನ್ ಮತ್ತು ಹಬ್ಬಗಳ ಸಮಯದಲ್ಲಿ ಹೆಚ್ಚಾಗುವ ಬೇಡಿಕೆಯು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

Read More
Next Story