Gold Rate Today | Great news for jewelry lovers: Huge drop in gold and silver prices!
x

ಸಾಂದರ್ಭಿಕ ಚಿತ್ರ

Gold Rate Today | ಆಭರಣ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ!

ಬೆಳ್ಳಿ ದರದಲ್ಲೂ ಕುಸಿತವಾಗಿದ್ದು, ಏ.12ರಂದು ಒಂದು ಕೆ.ಜಿ. ಬೆಳ್ಳಿಗೆ 2.60 ಲಕ್ಷ ರೂ. ತಲುಪಿತ್ತು. ಸೋಮವಾರ ಒಂದು ಕೆ.ಜಿ. ಬೆಳ್ಳಿ ದರ 5 ಸಾವಿರ ರೂ. ಕಡಿಮೆಯಾಗಿದ್ದು, 2.55 ಲಕ್ಷ ರೂ. ದಾಖಲಿಸಿದೆ.


Click the Play button to hear this message in audio format

ಶುಭ ಸಮಾರಂಭಗಳಿಗೆ ಆಭರಣ ಕೊಳ್ಳಬೇಕು ಎಂದುಕೊಳ್ಳವವರಿಗೆ ಹಾಗೂ ಚಿನ್ನ, ಬೆಳ್ಳಿ ಮೇಲೆ ಬಂಡವಾಳ ಹೂಡಿಕೆ ಮಾಡುವವರಿಗೆ ಸಿಹಿ ಸುದ್ದಿಯೊಂದಿದೆ. ಸದಾ ಏರಿಕೆ ಕಾಣುತ್ತಿದ್ದ ಚಿನಿವಾರ ಪೇಟೆ ಇದೀಗ ಇಳಿಕೆಯತ್ತ ಮುಖ ಮಾಡಿದ್ದು ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ.

ಬೆಂಗಳೂರು ಸೇರಿದಂತೆ ದೇಶದ ಇತರೆ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿದರ ಕಡಿಮೆಯಾಗಿದ್ದು, 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ 15,246 ರೂ ದಾಖಲಿಸಿದೆ. 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆ 13,975 ಹಾಗೂ 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆ 11,434 ರೂ. ಗೆ ತಲುಪಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 380 ರೂ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 350 ರೂ. ಕಡಿಮೆಯಾಗಿದೆ.

ಬೆಳ್ಳಿ ದರದಲ್ಲೂ ಇಳಿಕೆ

ಬೆಳ್ಳಿ ದರದಲ್ಲೂ ಕುಸಿತವಾಗಿದ್ದು, ಏ.12ರಂದು ಒಂದು ಕೆ.ಜಿ. ಬೆಳ್ಳಿಗೆ 2.60 ಲಕ್ಷ ರೂ. ತಲುಪಿತ್ತು. ಸೋಮವಾರ ಒಂದು ಕೆ.ಜಿ. ಬೆಳ್ಳಿ ದರ 5 ಸಾವಿರ ರೂ. ಕಡಿಮೆಯಾಗಿದ್ದು, 2.50 ಲಕ್ಷ ರೂ. ದಾಖಲಿಸಿದೆ. ಕಳೆದ ಮೂರು ದಿನಗಳಿಂದ ಹಿಂದೆ ಏರಿಕೆಯಾಗಿದ್ದ ದರ ಇದೀಗ ಮತ್ತೆ ಇಳಿಕೆಯಾಗಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ.

ಯಾವ ನಗರದಲ್ಲಿ ಎಷ್ಟು ದರ ?

ಚೆನ್ನೈನಲ್ಲಿ 24 ಕ್ಯಾರೆಟ್ ಒಂದು ಗ್ರಾಂಗೆ ಚಿನ್ನದ ಬೆಲೆ 15,338 ರೂ, 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 14,060 ರೂ. ಅದೇ ರೀತಿ 18 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 11,730 ರೂ. ದೆಹಲಿಯಲ್ಲಿ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 15,261 ರೂ. 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 13,990 ರೂ. 18 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 11,449 ರೂ. ಆಗಿದೆ. ಹೈದರಾಬಾದ್‌ ಹಾಗೂ ಮುಂಬೈನಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 15,246 ರೂ. 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 13,975 ರೂ. 18 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 11,434 ರೂ. ಆಗಿದೆ.

ಬೆಲೆ ಇಳಿಕೆಗೆ ಜಾಗತಿಕ ಕಾರಣಗಳು

ಚಿನ್ನದ ಬೆಲೆಯಲ್ಲಿನ ಈ ಕುಸಿತಕ್ಕೆ ಪ್ರಮುಖವಾಗಿ ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ ಹಾಗೂ ಭೌಗೋಳಿಕ ವಿದ್ಯಮಾನಗಳು ಕಾರಣವಾಗಿವೆ. ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿರುವುದು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ. ಇದರ ಜೊತೆಗೆ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಪರಿಣಾಮವಾಗಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಜಾಗತಿಕ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯಿಂದ ಹಿಂದೆ ಸರಿದು ಪರ್ಯಾಯ ವಲಯಗಳತ್ತ ತಮ್ಮ ಗಮನ ಹರಿಸಿರುವುದು ಚಿನ್ನದ ದರ ಇಳಿಯಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.

Read More
Next Story