Gold price today |ಸ್ವರ್ಣಪ್ರಿಯರಿಗೆ ಗುಡ್‌ನ್ಯೂಸ್‌! ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ
x

ಸಾಂದರ್ಭಿಕ ಚಿತ್ರ

Gold price today |ಸ್ವರ್ಣಪ್ರಿಯರಿಗೆ ಗುಡ್‌ನ್ಯೂಸ್‌! ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ಭಾರತದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 810 ರೂ. ಇಳಿಕೆಯಾಗಿದ್ದು 1,47,280 ರೂ. ಕ್ಕೆ ತಲುಪಿದೆ. 100 ಗ್ರಾಂ 14,72,800 ರೂ. ಆಗಿದೆ. 22 ಕ್ಯಾರೆಟ್ 10 ಗ್ರಾಂ ಗೆ 750 ರೂ. ಕಡಿಮೆಯಾಗಿ 1,35,000 ರೂ. ತಲುಪಿದೆ.


Click the Play button to hear this message in audio format

ಜಾಗತಿಕ ಮಾರುಕಟ್ಟೆಯಲ್ಲಿನ ಕ್ಷಿಪ್ರ ಬದಲಾವಣೆ ಹಾಗೂ ಭೌಗೋಳಿಕ ರಾಜಕೀಯ ವಿದ್ಯಮಾನಗಳ ಪರಿಣಾಮವಾಗಿ ಭಾರತದಲ್ಲಿ ಬುಧವಾರ ಚಿನ್ನದ ಬೆಲೆಯಲ್ಲಿ ತುಸು ಇಳಿಕೆ ಕಂಡಿದೆ. ಇಂದು ಒಂದೇ ದಿನ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 100 ಗ್ರಾಂ ಗೆ ಬರೋಬ್ಬರಿ 8,100 ರೂ. ರಷ್ಟು ಇಳಿಕೆಯಾಗುವ ಮೂಲಕ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.

ಭಾರತದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 810 ರೂ. ಇಳಿಕೆಯಾಗಿದ್ದು 1,47,280 ರೂ. ಕ್ಕೆ ತಲುಪಿದೆ. 100 ಗ್ರಾಂ 14,72,800 ರೂ. ಆಗಿದೆ. 22 ಕ್ಯಾರೆಟ್ 10 ಗ್ರಾಂ ಗೆ 750 ರೂ. ಕಡಿಮೆಯಾಗಿ 1,35,000 ರೂ. ತಲುಪಿದೆ. 18 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 610 ರೂ. ಇಳಿಕೆಯಾಗಿದ್ದು, 1,10,460 ರೂ. ಗೆ ಇಳಿಕೆಯಾಗಿದೆ.

ಚಿನ್ನದ ಬೆಲೆ ಇಳಿಕೆ ಬೆನ್ನಲ್ಲೇ ಬೆಳ್ಳಿಯ ದರದಲ್ಲಿ ಯಾವುದೇ ಏರುಪೇರಾಗದೇ ಯಥಾಸ್ಥಿತಿ ಕಾಪಾಡಿಕೊಂಡಿದೆ. ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆ.ಜಿ. ಬೆಳ್ಳಿಗೆ 2,45,000 ರೂ. ಆಗಿದೆ. ಒಂದು ಗ್ರಾಂ ಬೆಳ್ಳಿ ಬೆಲೆ 245 ರೂ. ಆಗಿದ್ದು ಮಾ.27 ಕ್ಕೆ ಹೋಲಿಸಿದರೆ 5,000 ರೂ. ಹೆಚ್ಚಳವಾಗಿದೆ.

ಪ್ರಮುಖ ನಗರಗಳಲ್ಲಿನ ಇಂದಿನ ದರ

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನಕ್ಕೆ 1,47,280 ರೂ. ಚೆನ್ನೈ ನಲ್ಲಿ 10 ಗ್ರಾಂ ಗೆ 1,48,370 ರೂ. ಹೈದರಾಬಾದ್‌ನಲ್ಲಿ 1,47,280 ರೂ. ಮುಂಬೈನಲ್ಲಿ 1,47,280 ರೂ. ದೆಹಲಿಯಲ್ಲಿ 1,47,430 ರೂ. ತಲುಪಿದೆ.

ಬೆಲೆ ಇಳಿಕೆಗೆ ಜಾಗತಿಕ ಕಾರಣಗಳು

ಚಿನ್ನದ ಬೆಲೆಯಲ್ಲಿನ ಈ ಕುಸಿತಕ್ಕೆ ಪ್ರಮುಖವಾಗಿ ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ ಹಾಗೂ ಭೌಗೋಳಿಕ ವಿದ್ಯಮಾನಗಳು ಕಾರಣವಾಗಿವೆ. ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿರುವುದು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ. ಇದರ ಜೊತೆಗೆ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಪರಿಣಾಮವಾಗಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಜಾಗತಿಕ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯಿಂದ ಹಿಂದೆ ಸರಿದು ಪರ್ಯಾಯ ವಲಯಗಳತ್ತ ತಮ್ಮ ಗಮನ ಹರಿಸಿರುವುದು ಚಿನ್ನದ ದರ ಇಳಿಯಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.

Read More
Next Story