ಮತ್ತೆ ಚಿನ್ನ ಮತ್ತು ಬೆಳ್ಳಿ ದರ  ಭಾರಿ ಏರಿಕೆ; ಗ್ರಾಹಕರು ಮತ್ತೆ ಸುಸ್ತು
x

ಮತ್ತೆ ಚಿನ್ನ ಮತ್ತು ಬೆಳ್ಳಿ ದರ ಭಾರಿ ಏರಿಕೆ; ಗ್ರಾಹಕರು ಮತ್ತೆ ಸುಸ್ತು

ಶುದ್ಧ ಚಿನ್ನ ಎಂದು ಕರೆಯಲ್ಪಡುವ 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿಯೂ ಇಂದು 339 ರೂ. ಏರಿಕೆಯಾಗಿದ್ದು, ಬೆಲೆ 14,820 ರೂಪಾಯಿಗೆ ತಲುಪಿದೆ.


ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಶನಿವಾರ (ಮಾರ್ಚ್ 28ರಂದು) ಚಿನ್ನದ ದರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಮಾರುಕಟ್ಟೆ ವರದಿಗಳ ಪ್ರಕಾರ, 22 ಕ್ಯಾರಟ್‌ನ ಒಂದು ಗ್ರಾಂ ಆಭರಣ ಚಿನ್ನದ ದರದಲ್ಲಿ ಇಂದು 310 ರೂ. ಏರಿಕೆಯಾಗಿದ್ದು, ಬೆಲೆ 13,575 ರೂಪಾಯಿಗೆ ತಲುಪಿದೆ.

ಅದೇ ರೀತಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 1,35,750 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 13,57,500 ರೂ. ಪಾವತಿ ಮಾಡಬೇಕಾಗುತ್ತದೆ. ಸೆಂಟ್ರಲ್ ಬ್ಯಾಂಕ್‌ನಲ್ಲಿ ಚಿನ್ನದ ಮೀಸಲು ಸಂಗ್ರಹ ಹೆಚ್ಚಾಗಿರುವುದು ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಆಮದು ಪ್ರಮಾಣ ಏರಿಕೆಯಾಗಿರುವುದು ಚಿನ್ನದ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

24 ಕ್ಯಾರಟ್ ಶುದ್ಧ ಚಿನ್ನದ ದರ

ಶುದ್ಧ ಚಿನ್ನ ಎಂದು ಕರೆಯಲ್ಪಡುವ 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿಯೂ ಇಂದು 339 ರೂ. ಏರಿಕೆಯಾಗಿದ್ದು, ಬೆಲೆ 14,820 ರೂಪಾಯಿಗೆ ತಲುಪಿದೆ. 24 ಕ್ಯಾರಟ್‌ನ 10 ಗ್ರಾಂ ಚಿನ್ನ ಖರೀದಿಸಲು ಗ್ರಾಹಕರು 1,48,200 ರೂ. ಹಾಗೂ 100 ಗ್ರಾಂಗೆ ನೀವು 14,82,000 ರೂ. ಪಾವತಿಸಬೇಕಾಗುತ್ತದೆ. ಇದರ ಜೊತೆಗೆ 18 ಕ್ಯಾರಟ್ ಚಿನ್ನದ ದರವೂ ಏರಿಕೆ ಕಂಡಿದ್ದು, ಒಂದು ಗ್ರಾಂ ಬೆಲೆ 11,115 ರೂ. ಹಾಗೂ 10 ಗ್ರಾಂಗೆ 1,11,150 ರೂ. ನಿಗದಿಯಾಗಿದೆ. ಬೆಂಗಳೂರು ಮಾತ್ರವಲ್ಲದೆ ಚೆನ್ನೈ, ಮುಂಬೈ, ಹೈದರಾಬಾದ್ ಹಾಗೂ ಕೋಲ್ಕತ್ತಾದಂತಹ ಪ್ರಮುಖ ನಗರಗಳಲ್ಲೂ ಇದೇ ದರಗಳು ಅನ್ವಯವಾಗುತ್ತಿವೆ.

ಬೆಳ್ಳಿ ದರದಲ್ಲೂ ಏರಿಕೆ

ಚಿನ್ನದ ಬೆಲೆ ಮಾತ್ರವಲ್ಲದೆ ಬೆಳ್ಳಿ ದರದಲ್ಲಿಯೂ ಶನಿವಾರ ಮಾರುಕಟ್ಟೆಯಲ್ಲಿ ಭಾರಿ ಏರಿಕೆ ದಾಖಲಾಗಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಬೆಳ್ಳಿಯ ಬೆಲೆ 245 ರೂಪಾಯಿ ಇದ್ದು, 10 ಗ್ರಾಂ ಬೆಳ್ಳಿಗೆ 2,450 ರೂಪಾಯಿ ಪಾವತಿಸಬೇಕಾಗುತ್ತದೆ. ಅದೇ ರೀತಿ ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆಯು 2,45,000 ರೂಪಾಯಿಗೆ ತಲುಪಿದೆ. ದಿನೇ ದಿನೇ ಏರಿಕೆಯಾಗುತ್ತಿರುವ ಆಭರಣಗಳ ಬೆಲೆಯು ಗ್ರಾಹಕರಿಗೆ ಆತಂಕ ತಂದಿದೆ.

Read More
Next Story