ಅಮೆಜಾನ್ ಕಂಪನಿ 2030 ರ ವೇಳೆಗೆ ಭಾರತದಲ್ಲಿ 35 ಬಿಲಿಯನ್ ಡಾಲರ್, ಅಂದರೆ 3.14 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆ ಮಾಡುವ ಯೋಜನೆಯನ್ನು ಪ್ರಕಟಿಸಿದೆ.

Click the Play button to hear this message in audio format

ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿ 2030 ರ ವೇಳೆಗೆ ಭಾರತದಲ್ಲಿ 35 ಬಿಲಿಯನ್ ಡಾಲರ್, ಅಂದರೆ 3.14 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆ ಮಾಡುವ ಯೋಜನೆಯನ್ನು ಪ್ರಕಟಿಸಿದೆ. ಅಮೆಜಾನ್‌ನ ಈ ನಡೆ AI ನೇತೃತ್ವದ ಡಿಜಿಟಲೀಕರಣ, ರಫ್ತು ಹೆಚ್ಚಿಸುವುದು ಮತ್ತು ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೈಕ್ರೋಸಾಫ್ಟ್ ಮತ್ತು ಗೂಗಲ್ ಮೀರಿಸಿದ ಅಮೆಜಾನ್

ನವದೆಹಲಿಯಲ್ಲಿ ನಡೆದ ಅಮೆಜಾನ್ ಸಂಭವ್ ಶೃಂಗಸಭೆಯಲ್ಲಿ ಮಾತನಾಡಿದ ಅಮೆಜಾನ್‌ನ ಎಮರ್ಜಿಂಗ್‌ ಮಾರ್ಕಟ್ಸ್‌ನ ಹಿರಿಯ ಉಪಾಧ್ಯಕ್ಷ ಅಮಿತ್ ಅಗರ್ವಾಲ್, ಕಂಪನಿಯು ಭಾರತದ ರಫ್ತುಗಳನ್ನು ಪ್ರಸ್ತುತ 20 ಬಿಲಿಯನ್ ಡಾಲರ್‌ನಿಂದ 80 ಬಿಲಿಯನ್ ಡಾಲರ್‌ಗೆ ನಾಲ್ಕು ಪಟ್ಟು ಹೆಚ್ಚಿಸುವ ಗುರಿಯನ್ನು ಹೊಂದಿದೆ.

"ಅಮೆಜಾನ್ 2010 ರಿಂದ ಭಾರತದಲ್ಲಿ 40 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಈಗ ನಾವು 2030 ರ ವೇಳೆಗೆ ದೇಶದ ನಮ್ಮ ಎಲ್ಲಾ ವ್ಯವಹಾರಗಳಲ್ಲಿ 35 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತೇವೆ" ಎಂದು ಅಗರ್ವಾಲ್ ಹೇಳಿದ್ದಾರೆ. ಆ ಮೂಲಕ ಭಾರತದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡುತ್ತಿರುವ ಮೈಕ್ರೋಸಾಫ್ಟ್‌ ಮತ್ತು ಗೂಲ್‌ ಕಂಪನಿಗಳನ್ನು ಅಮೆಜಾನ್‌ ಹಿಂದಿಕ್ಕಿದೆ. ಅಮೆಜಾನ್‌ನ ಹೂಡಿಕೆ ಯೋಜನೆಯು ಮೈಕ್ರೋಸಾಫ್ಟ್‌ನ 17.5 ಬಿಲಿಯನ್ ಡಾಲರ್ ಹೂಡಿಕೆ ಯೋಜನೆಯ ಎರಡು ಪಟ್ಟು ಮತ್ತು 2030 ರ ವೇಳೆಗೆ ಗೂಗಲ್‌ನ 15 ಬಿಲಿಯನ್ ಡಾಲರ್ ಹೂಡಿಕೆ ಯೋಜನೆಗಿಂತ 2.3 ಪಟ್ಟು ಹೆಚ್ಚಾಗಿದೆ.

ಒಂದು ಮಿಲಿಯನ್ ಹೊಸ ಉದ್ಯೋಗ ಸೃಷ್ಟಿ

ಮತ್ತು 2030 ರ ವೇಳೆಗೆ ಹೆಚ್ಚುವರಿಯಾಗಿ ಒಂದು ಮಿಲಿಯನ್ ನೇರ, ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಉದ್ಯೋಗ ಸೃಷ್ಟಿಯ ಪರಿಣಾಮವು ಅಮೆಜಾನ್‌ಗೆ ಮಾತ್ರ ಸೀಮಿತವಾಗಿರದೆ, ಪ್ಯಾಕೇಜಿಂಗ್, ಉತ್ಪಾದನೆ, ಲಾಜಿಸ್ಟಿಕ್ಸ್ ಮತ್ತು ಸಾರಿಗೆ-ಸಂಬಂಧಿತ ಕೈಗಾರಿಕೆಗಳಲ್ಲಿ ವಿಸ್ತರಿಸುತ್ತದೆ.

AI ಅಮೆಜಾನ್‌ನ ಕೇಂದ್ರಬಿಂದು

ಭವಿಷ್ಯದ ಹೂಡಿಕೆಗಳ ಪ್ರಮುಖ ಪಾಲು AI- ನೇತೃತ್ವದ ಡಿಜಿಟಲೀಕರಣಕ್ಕೆ ಹೋಗುತ್ತದೆ. ಅಮೆಜಾನ್ 15 ಮಿಲಿಯನ್ ಸಣ್ಣ ವ್ಯವಹಾರಗಳಿಗೆ AI ಪರಿಕರಗಳನ್ನು ತರಲು, ಬಹುಭಾಷಾ ಇಂಟರ್‌ಫೇಸಸ್‌ಗಳ ಮೂಲಕ ಶಾಪಿಂಗ್ ಅನುಭವಗಳನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಅನುಗುಣವಾಗಿ ನಾಲ್ಕು ಮಿಲಿಯನ್‌ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ AI ಶಿಕ್ಷಣ ಮತ್ತು ತರಬೇತಿ ನೀಡುವ ಗುರಿಯನ್ನು ಹೊಂದಿದೆ.

ರಫ್ತು ಗುರಿ $80 ಬಿಲಿಯನ್‌ಗೆ ಏರಿಕೆ

2030 ರ ವೇಳೆಗೆ ಭಾರತದಿಂದ ಒಟ್ಟು 80 ಬಿಲಿಯನ್ ಡಾಲರ್ ಇ-ಕಾಮರ್ಸ್ ರಫ್ತುಗಳನ್ನು ಸಕ್ರಿಯಗೊಳಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಅಮೆಜಾನ್ ಹೊಂದಿದೆ. ಪ್ರಸ್ತುತ ಇ-ಕಾಮರ್ಸ್‌ ರಫ್ತು 20 ಬಿಲಿಯನ್ ಡಾಲರ್‌ಗಳಷ್ಟೇ ಇದೆ. ಇನ್ನು ಮುಂದೆ ಇ-ಕಾಮರ್ಸ್‌ ರಫ್ತು ಹೆಚ್ಚಾದರೆ ಭಾರತವನ್ನು ಅಮೆಜಾನ್‌ನ ಅತಿದೊಡ್ಡ ಜಾಗತಿಕ ಸೋರ್ಸಿಂಗ್ ಮತ್ತು ರಫ್ತು ಕೇಂದ್ರಗಳಲ್ಲಿ ಒಂದನ್ನಾಗಿ ಮಾಡುತ್ತದೆ.

ಭಾರತದಿಂದ ರಫ್ತು ಬೆಳವಣಿಗೆಯನ್ನು ಹೆಚ್ಚಿಸಲು, ಅಮೆಜಾನ್ ಉತ್ಪಾದನಾ-ಕೇಂದ್ರಿತ "ಆಕ್ಸಿಲರೇಟ್ ಎಕ್ಸ್‌ಪೋರ್ಟ್ಸ್" ಯೋಜನೆಯನ್ನು ಪ್ರಾರಂಭಿಸಿದೆ, ಇದನ್ನು ಡಿಜಿಟಲ್ ಉದ್ಯಮಿಗಳನ್ನು ವಿಶ್ವಾಸಾರ್ಹ ತಯಾರಕರೊಂದಿಗೆ ಸಂಪರ್ಕಿಸಲು ಮತ್ತು ತಯಾರಕರು ಯಶಸ್ವಿ ಜಾಗತಿಕ ಮಾರಾಟಗಾರರಾಗುವಂತೆ ಮಾಡಲು ಆರಂಭಿಸಲಾಗಿದೆ. ಕಾರ್ಯಕ್ರಮದ ಭಾಗವಾಗಿ, ಅಮೆಜಾನ್ ತಿರುಪುರ್, ಕಾನ್ಪುರ ಮತ್ತು ಸೂರತ್ ಸೇರಿದಂತೆ ಭಾರತದಾದ್ಯಂತ 10 ಕ್ಕೂ ಹೆಚ್ಚು ಉತ್ಪಾದನಾ ಕ್ಲಸ್ಟರ್‌ಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Next Story