ಸದನದ ಮುಂದಿನ ಸಾಲಿನಲ್ಲಿ ಆಸನ ಕಲ್ಪಿಸುವಂತೆ ಶಾಸಕ ಯತ್ನಾಳ್ ಮನವಿ
ವಿಧಾನಸಭೆಗೆ ಆರು ಬಾರಿ ಸದಸ್ಯನಾಗಿ ಆಯ್ಕೆಯಾಗಿರುವ ನನಗೆ ಸದನದ ಕೊನೆಯ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಿರುವುದು ಸರಿಯಲ್ಲ. ಮುಂದಿನ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಬೇಕು ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸವನಗೌಡ ಯತ್ನಾಳ್ ಸಭಾಧ್ಯಕ್ಷರಿಗೆ ಮನವಿ ಮಾಡಿದರು.
ಶಾಸಕ ಎಸ್.ಟಿ. ಸೋಮಶೇಖರ್, ಶಾಸಕ ಶಿವರಾಮ ಹೆಬ್ಬಾರ್ ಹಾಗೂ ನಾನು ಹಿರಿಯ ಶಾಸಕರಾಗಿದ್ದೇವೆ. ಸಭೆಯಲ್ಲಿ ಇರುವುದು 224 ಸ್ಥಾನಗಳ ಮಾತ್ರ. ಆದರೆ 225 ಮತ್ತು 226ನೇ ಆಸನದ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಇದು ಬೋಗಸ್ ಎಂದಾಗುತ್ತದೆ. ನಮಗೆ ನಾನ್ ಅಡ್ಜಸ್ಟ್ಮೆಂಟ್ ಪ್ರತಿಪಕ್ಷ ಎಂದು ಆಸನವನ್ನು ಮುಂದಿನ ಸಾಲಿನಲ್ಲಿ ಕೊಡಿ ಎಂದು ತಿಳಿಸಿದರು.

Next Story