ಸಚಿವ ಸಂಪುಟದಲ್ಲಿ ಕೆಎಸ್‌ಸಿಎ ವಿರುದ್ದ ಆಕ್ರೋಶ

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೇರಿದಂತೆ ಹಲವು ಸಚಿವರು ಸಚಿವ ಸಂಪುಟ ಸಭೆಯಲ್ಲಿ ಕೆಎಸ್‌ಸಿಎ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಸಭೆಗೆ ಮಾಹಿತಿ ನೀಡಿದ ಗೃಹ ಸಚಿವರು, ಕಾರ್ಯಕ್ರಮ ಆಯೋಜನೆ ಬಗ್ಗೆ ಕೆಎಸ್‌ಸಿಎ ಕಾರ್ಯಕ್ರಮ ನಡೆಸುತ್ತೇವೆ ಪೊಲೀಸ್ ಭದ್ರತೆ ಬೇಕೆಂದು ನನ್ನ ಗಮನಕ್ಕೆ ತಂದರು. ಆದರೆ ನಾನು ಈಗ ಕಾರ್ಯಕ್ರಮ ನಡೆಸುವುದು ಬೇಡ ಎಂದು ತಿಳಿಸಿದ್ದೆ ಎಂದರು.
ಆರ್‌ಸಿಬಿ ಹದಿನೆಂಟು ವರ್ಷಗಳ ನಂತರ ಗೆಲುವು ಸಾಧಿಸಿದೆ. ಸಂಭ್ರಮಾಚರಣೆ ಹಾಗೂ ಕಾರ್ಯಕ್ರಮಕ್ಕೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ ಹಾಗಾಗಿ ಕಾರ್ಯಕ್ರಮಕ್ಕೆ ಅವಕಾಶ ನೀಡುವಂತೆ ಕೇಳಿದರು. ನಾವು ಅನುಮತಿ ನೀಡಬಾರದಾಗಿತ್ತು ಎಂದ ಗೃಹ ಸಚಿವರು ಅಭಿಪ್ರಾಯಪಟ್ಟರು. ಸಭೆಯಲ್ಲಿ ಹಾಜರಿದ್ದ ಎಲ್ಲ ಸಚಿವರು ದುರಂತಕ್ಕೆ ಕೆಎಸ್‌ಸಿಎ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದರು.
Next Story