
ಕೊಪ್ಪಳದ ಕುಟುಂಬಗಳನ್ನು ಭೇಟಿ ಮಾಡಿದ ಸಚಿವ ಸಂತೋಷ್ ಲಾಡ್
ಶ್ರೀನಗರ ಪ್ರವಾಸ ಕೈಗೊಂಡಿರುವ ಕೊಪ್ಪಳದ ನಾಲ್ಕು ಕುಟುಂಬಗಳ ಸದಸ್ಯರನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಬುಧವಾರ ಭೇಟಿಯಾಗಿದ್ದು, ಹೋಟೆಲ್ ಬಿಟ್ಟು ಎಲ್ಲಿಯೂ ಹೋಗದಂತೆ ಸಲಹೆ ನೀಡಿದ್ದಾರೆ. ಕೊಪ್ಪಳದ ಸಿದ್ದು ಗಣವಾರಿ, ಉದ್ಯಮಿ ಶರಣಪ್ಪ ಸಜ್ಜನ, ಕಾಂಗ್ರೆಸ್ ಮುಖಂಡ ಕಾಟನ್ ಪಾಷಾ ಮತ್ತು ಶಿವಕುಮಾರ ಪಾವಲಿ ಶೆಟ್ಟರ್ ಕುಟುಂಬ ಸದಸ್ಯರ ಜೊತೆ ಮಂಗಳವಾರ ಶ್ರೀನಗರಕ್ಕೆ ತೆರಳಿದ್ದು, ಅಲ್ಲಿಗೆ ಹೋದಾಗಿನಿಂದಲೂ ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದಾರೆ. ಪ್ರವಾಸ ರದ್ದುಗೊಳಿಸಿ ಬುಧವಾರ (ಇಂದು) ಸಂಜೆ ನವದೆಹಲಿಗೆ ವಾಪಸ್ ಹೋಗಲು ತೀರ್ಮಾನಿಸಿದ್ದಾರೆ.
Next Story