ವಿಧಾನಪರಿಷತ್‌ನಲ್ಲಿ ಸಹಕಾರ ಸೌಹಾರ್ದ(ತಿದ್ದುಪಡಿ ) ವಿಧೇಯಕಕ್ಕೆ ಸೋಲು, ಕಾಂಗ್ರೆಸ್‌ಗೆ ಮುಖಭಂಗ
ಸಹಕಾರ ವಲಯದಲ್ಲಿ ದುರ್ವಿನಿಯೋಗ, ವಂಚನೆ ಪ್ರಕರಣ ತಡೆಯುವ, ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಕಾಪಾಡುವ ಸಲುವಾಗಿ ರಾಜ್ಯ ಸರ್ಕಾರ ಮಂಡಿಸಿದ್ದ ʼಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕʼ ವಿಧಾನ ಪರಿಷತ್‌ನಲ್ಲಿ ತಿರಸ್ಕೃತವಾಗಿದೆ.
ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿದ್ದ ವಿಧೇಯಕವನ್ನು ಬುಧವಾರ ಪರಿಷತ್‌ನಲ್ಲಿ ಮಂಡಿಸಲಾಯಿತು. ಆದರೆ, ವಿಧೇಯಕಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ, ಮತಕ್ಕೆ ಹಾಕುವಂತೆ ಪಟ್ಟು ಹಿಡಿದರು.
ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧೇಯಕವನ್ನು ಮತಕ್ಕೆ ಹಾಕಿದರು. ಮತ ಚಲಾಯಿಸಲು ಸದಸ್ಯರಿಗೆ ಎರಡು ನಿಮಿಷಗಳ ಕಾಲಾವಕಾಶ ನೀಡಿದರು. ಈ ವೇಳೆ ವಿಧೇಯಕದ ಪರವಾಗಿ 23 ಮತಗಳು ಚಲಾವಣೆಯಾದರೆ, ವಿಧೇಯಕ ವಿರುದ್ಧವಾಗಿ 26 ಮತಗಳು ಚಲಾವಣೆಯಾದವು. ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರೆಲ್ಲರೂ ವಿಧೇಯಕದ ವಿರುದ್ಧವಾಗಿ ಮತ ಚಲಾಯಿಸಿದ್ದರಿಂದ ಸಹಕಾರ ಸೌಹಾರ್ದ(ತಿದ್ದುಪಡಿ ) ವಿಧೇಯಕಕ್ಕೆ ಸೋಲಾಯಿತು.

Next Story