ಸದನದಲ್ಲಿ ಅಜಾನ್‌ ಗದ್ದಲ, ಉಭಯ ಪಕ್ಷಗಳ ಸದಸ್ಯರಿಂದ ಸವಾಲು-ಪ್ರತಿಸವಾಲು


ಗಣೇಶೋತ್ಸವದ ವೇಳೆ ಸೌಂಡ್‌ ಸಿಸ್ಟಂ ಹಾಕಲು ಪೊಲೀಸರು ತೊಂದರೆ ಮಾಡುತ್ತಿದ್ದಾರೆ. ಆದರೆ ಅಜಾನ್‌ ಯಾವುದೇ ಸಮಯದಲ್ಲಿ ಕೂಗಬಹುದು ಎಂಬ ಬಿಜೆಪಿ ಶಾಸಕರ ಮಾತಿಗೆ ಕಾಂಗ್ರೆಸ್‌ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ತಿರುಗೇಟು ನೀಡಿದ್ದಾರೆ.

ಸದನದಲ್ಲಿ ಮಾತನಾಡಿದ ಅವರು, ಇದೇ ಬಿಜೆಪಿ ಸದಸ್ಯರು ಆಜಾನ್‌ಗೆ ರಾತ್ರಿ ವೇಳೆ ಸೌಂಡ್ ಬೇಡ, ನಿಷೇಧ ಮಾಡಿ ಅಂತ ವಿರೋಧ ಮಾಡಿದವರು ಇವರೇ. ಈಗ ಸದನದಲ್ಲಿ ಕಾನೂನು ಬಾಹಿರ ವಿಚಾರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಶಾಸಕ ನರೇಂದ್ರ ಸ್ವಾಮಿ ಹೇಳಿಕೆಗೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಅಶ್ವಥ್ ನಾರಾಯಣ ಮಾತನಾಡಿ, ನಾವು ಹಿಂದೂಗಳ ಹಬ್ಬದಲ್ಲಿ ಸೌಂಡ್ ಸಿಸ್ಟಂ ಬಳಕೆ‌ ನಿಲ್ಲಿಸುತ್ತೇವೆ. ನೀವು ಆಜಾನ್ ಘೋಷಣೆ ನಿಲ್ಲಿಸಲಿ ನೋಡೋಣ. ನಾವು ಕಾನೂನು ಪಾಲನೆಗೆ ರೆಡಿ, ನೀವು ರೆಡಿ ಇದ್ದೀರಾ ಅಂತ ಸವಾಲು ಹಾಕಿದರು.

 

Read More
Next Story