ಹಿಂದೂ ಆಚರಣೆಗಳಿಗೆ ಅಡ್ಡಿ ಮಾಡುತ್ತಿದೆ ಸರ್ಕಾರ - ಆರ್. ಅಶೋಕ್ ಗರಂ


ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರಾವಳಿಯಲ್ಲಿ ಹಿಂದೂ ಆಚರಣೆಗಳಿಗೆ ಅಡ್ಡಿಪಡಿಸಲಾಗುತ್ತಿದೆ ಎಂದು ವೇದವ್ಯಾಸ್ ಕಾಮತ್ ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ "ಕೋಲಾ ಆರಂಭವಾಗುವುದೇ ರಾತ್ರಿ ವೇಳೆ. ಗಣೇಶ ಹಬ್ಬದ ಸಮಯದಲ್ಲಿ ಇಷ್ಟೊಂದು ಪೊಲೀಸ್ ಭದ್ರತೆ ಯಾಕೆ? ಕಳೆದ ಬಾರಿ ಗಣೇಶನನ್ನೇ ಬಂಧಿಸಿದ್ದಿರಿ. ಈ ಬಾರಿ ಹಾಗೆ ಮಾಡಬೇಡಿ" ಎಂದು ಹೇಳಿದರು. ಗಣೇಶ ಹಬ್ಬ ಕೇವಲ ಬಿಜೆಪಿ ಮಾತ್ರ ಆಚರಿಸುವುದಿಲ್ಲ, ಎಲ್ಲಾ ಪಕ್ಷದವರೂ ಆಚರಿಸುತ್ತಾರೆ. ಸರ್ಕಾರಕ್ಕೆ ಕಣ್ಣು-ಕಿವಿ ಇಲ್ಲ, ಹೀಗಾಗಿ ಕಣ್ಣು ತೆರೆದು ನೋಡಿ ಎಂದು ಅಶೋಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

Read More
Next Story