ಕರಾವಳಿ ಜಿಲ್ಲೆಗಳಲ್ಲಿ ಹಬ್ಬದ ಆಚರಣೆಗಳಿಗೆ ಪೊಲೀಸರಿಂದ ತೊಂದರೆ: ಶಾಸಕ ವೇದವ್ಯಾಸ್ ಕಾಮತ್ ಪ್ರಸ್ತಾಪ


ಶೂನ್ಯವೇಳೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಹಬ್ಬ, ಧಾರ್ಮಿಕ ಆಚರಣೆ, ಉತ್ಸವ ವೇಳೆ ಪೊಲೀಸರಿಂದಾಗುತ್ತಿರುವ ತೊಂದರೆಗಳ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಪ್ರಸ್ತಾಪಿಸಿದ್ದು, ಇದಕ್ಕೆ ಇತರ ಬಿಜೆಪಿ ಸದಸ್ಯರು ಧ್ವನಿಗೂಡಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಕ್ಷಗಾನ, ಕೋಲಾಟ, ಗಣೇಶೋತ್ಸವ, ಹುಲಿವೇಶ, ಶಾರದಾ ಮಹೋತ್ಸವ, ಕೃಷ್ಣ ಜನ್ಮಾಷ್ಠಮಿ ಮುಂತಾದ ಆಚರಣೆಗಳ ಸಂದರ್ಭದಲ್ಲಿ ಪೊಲೀಸರು ಸೌಂಡ್ ಸಿಸ್ಟಮ್‌ಗಳ ಬಳಕೆಗೆ ನಿರ್ಬಂಧ ಹೇರುತ್ತಿದ್ದಾರೆ, ಸೌಂಡ್ ಸಿಸ್ಟಮ್‌ಗಳನ್ನು ಸೀಜ್ ಮಾಡುತ್ತಿದ್ದಾರೆ, ರಾತ್ರಿ 10:30ರ ನಂತರ ಮೊಸರು ಕುಡಿಕೆ ಒಡೆಯಲು ಬಿಡದೆ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

Read More
Next Story