ದಲಿತರ ಹಣ ನುಂಗಿದ್ದೀರಲ್ಲ ,ನಿಮಗೆಷ್ಟು ಧೈರ್ಯ?
x

ದಲಿತರ ಹಣ ನುಂಗಿದ್ದೀರಲ್ಲ ,ನಿಮಗೆಷ್ಟು ಧೈರ್ಯ?


ಎಸ್‌ಸಿಪಿ/ ಟಿಎಸ್‌ಪಿ ಹಣವನ್ನು ನಾವು ದುರ್ಬಳಕೆ ಮಾಡಿದ್ದರೆ ನೀವು ಸುಮ್ಮನೆ ಬಿಡುತ್ತಿದ್ರಾ ಎಂದು ಪ್ರತಿಪಕ್ಷ ಆರ್‌. ಅಶೋಕ್‌ ವಾಗ್ದಾಳಿ ನಡೆಸಿದರು. ನಾವು ದಲಿತರ ಹಣವನ್ನು ದುರ್ಬಳಕೆ ಮಾಡಿದ್ದರೆ ಮಹದೇವಪ್ಪ ನಮ್ಮನ್ನು ಸುಮ್ಮನೆ ಬಿಡ್ತಿದ್ರಾ, ಈಗ ಮಹದೇವಪ್ಪರಿಂದಲೇ ಸಮಾಜಕ್ಕೆ ಅನ್ಯಾಯ ಆಗ್ತಿದೆ. ದಲಿತರಿಗೆ ಮೀಸಲಿಟ್ಟ ಹಣದ ಬಗ್ಗೆ ಹಣಕಾಸು ಸಚಿವರು ತೀರ್ಮಾನ ಮಾಡಬಾರದು, ಸಮಾಜ ಕಲ್ಯಾಣ ಸಚಿವರು ತೀರ್ಮಾನ ಮಾಡಬೇಕು ಎಂದು ಕಿಡಿಕಾರಿದರು.

ನೂರು ಗ್ಯಾರಂಟಿ ಮಾಡಿ, ನಮ್ಮದೇನು ತಕರಾರು ಇಲ್ಲ, ಅವೆಲ್ಲ ವಾರೆಂಟಿ ಆಗಿ ಹೋಗಿವೆ, ದಲಿತರ ಹಣ ನುಂಗಿದ್ದೀರಲ್ಲ ನಿಮಗೆ ಎಷ್ಟು ಧೈರ್ಯ ಎಂದು ಆಕ್ರೋಶ ಹೊರಹಾಕಿದರು. 

Read More
Next Story