ಬಿಜೆಪಿಯೇತರ ಅಧಿಕಾರ ಹೊಂದಿರುವ ದಕ್ಷಿಣ ರಾಜ್ಯಗಳು, ಅದರಲ್ಲೂ ಪ್ರಮುಖವಾಗಿ ಕರ್ನಾಟಕಕ್ಕೆ ಬಜೆಟ್ ಯಾವ ಕೊಡುಗೆ ನೀಡಲಿದೆ ಎನ್ನುವುದನ್ನು ನೋಡಬೇಕಿದೆ. ತೆರಿಗೆ ಆದಾಯದ ಸಮಾನ ಹಂಚಿಕೆ, ಬರ ಮತ್ತು ಪ್ರವಾಹ ಪರಿಹಾರ ಮತ್ತಿತರ ವಿಷಯಗಳಿಗೆ ಸಂಬಂದಿಸಿದಂತೆ ನಿರ್ಮಲಾ ಸೀತಾರಾಮನ್ ಅವರು ಯಾವ ಹೆಜ್ಜೆ ಇರಿಸಲಿದ್ದಾರೆ ಎಂಬ ಬಗ್ಗೆಕರ್ನಾಟಕ ಆಸಕ್ತಿ ಹೊಂದಿದೆ.
ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ತಮ್ಮ ಬಜೆಟ್‌ನಲ್ಲಿ ಏನು ಕೊಡುಗೆ ನೀಡಲಿದ್ದಾರೆ ಹಾಗೂ ರೈಲ್ವೇ, ಮೂಲಸೌಕರ್ಯ ಮತ್ತಿತರ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಯಾವ ರೀತಿಯಲ್ಲಿ ಬಜೆಟ್ ಪಾಲು ನೀಡಲಿದ್ದಾರೆ ಎನ್ನವುದು ಕುತೂಹಲಕರ ಅಂಶವಾಗಿದೆ.
Next Story