ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 31 ಸ್ಥಾನಗಳಲ್ಲಿ ಮೇಲುಗೈ ಸಾಧಿಸಿದೆ. ಬಿಜೆಪಿ 10 ಹಾಗೂ ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮುಂದೆ ಇವೆ. ಬೆಹ್ರಾಂಪುರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಅಧೀರ್ ಚೌಧರಿ, ಕೃಷ್ಣನಗರದಲ್ಲಿ ಟಿಎಂಸಿಯ ಮಹುವಾ ಮೊಯಿತ್ರಾ ಮುಂದೆ ಇದ್ದಾರೆ.
ಒಡಿಶಾ ಮತ್ತು ಜಾರ್ಖಂಡ್: ಒಡಿಶಾದಲ್ಲಿ ಬಿಜೆಪಿ 18 ಹಾಗೂ ಬಿಜೆಡಿ ಮತ್ತು ಕಾಂಗ್ರೆಸ್ ತಲಾ ಒಂದು ಸ್ಥಾನದಲ್ಲಿ ಮುಂದೆ ಇವೆ. ಜಾರ್ಖಂಡ್‌ನಲ್ಲಿ ಎನ್‌ಡಿಎ 11 ಹಾಗೂ ಇಂಡಿಯ ಒಕ್ಕೂಟ ಮೂರರಲ್ಲಿ ಮುನ್ನಡೆ ಸಾಧಿಸಿದೆ.
ಈಶಾನ್ಯ ರಾಜ್ಯಗಳು ಮತ್ತು ಸಿಕ್ಕಿಂ: ಈಶಾನ್ಯ ರಾಜ್ಯಗಳ ಪೈಕಿ ಅಸ್ಸಾಂನಲ್ಲಿ ಎನ್‌ಡಿಎ 10 ಹಾಗೂ ಇಂಡಿಯ ಒಕ್ಕೂಟ ನಾಲ್ಕರಲ್ಲಿ ಮುನ್ನಡೆ ಸಾಧಿಸಿವೆ. ಅರುಣಾಚಲ ಪ್ರದೇಶ-ತ್ರಿಪುರಾದಲ್ಲಿ ಎನ್‌ಡಿಎ ಎರಡೂ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಂಡಿಯ ಒಕ್ಕೂಟ ಮೇಘಾಲಯದ ಎರಡು ಸ್ಥಾನಗಳಲ್ಲಿ ಒಂದರಲ್ಲಿ ಮತ್ತು ನಾಗಾಲ್ಯಾಂಡ್‌ನ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಕಾಂಗ್ರೆಸ್ ಹಾಗೂ ಎನ್‌ಪಿಎಫ್ ಅಭ್ಯರ್ಥಿ ತಲಾ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಮಿಜೋರಾಂ ನ ಏಕೈಕ ಸೀಟಿನಲ್ಲಿ ಝಡ್‌ಪಿಎಂ ಮತ್ತು ಸಿಕ್ಕಿಂನಲ್ಲಿ ಎಸ್ ಕೆಎಂ ಮುಂದೆ ಇವೆ.