ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ದಿ ಬಂದಿದೆ: ಸುರೇಶ್ ಕುಮಾರ್
ಗುರುವಾರ ವಿಧಾನಸಭೆಯಲ್ಲಿ ನಡೆದ ಜನಸಂದಣಿ ನಿಯಂತ್ರಣಕ್ಕೆ ವಿಧೇಯಕ ಮಂಡನೆ ಕುರಿತು ಪ್ರತಿಪಕ್ಷದ ಶಾಸಕ ಸುರೇಶ್ ಕುಮಾರ್ ತೀವ್ರ ಅಸಮಾಧನ ವ್ಯಕ್ತಪಡಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಅವಘಡ ನಡೆದ ನಂತರ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬಂದಿದೆ. ಇದು ಪೋಸ್ಟ್‌ಮಾರ್ಟಮ್ ವಿಧೇಯಕವಾಗಿದೆ ಎಂದು ಟೀಕಿಸಿದರು.
ಒಡಿಶಾದಲ್ಲಿ ನಡೆಯುವ ಪುರಿ ಜಗನ್ನಾಥನ ರಥಯಾತ್ರೆಗೆ ಲಕ್ಷಗಟ್ಟಲೆ ಜನ ಸೇರುತ್ತಾರೆ. ಅಲ್ಲೆಲ್ಲ ಹೇಗೆ ಜನಸಂದಣಿ ನಿಯಂತ್ರಿಸುತ್ತಾರೆ? ನಮ್ಮ ರಾಜ್ಯದಲ್ಲೂ ಕರಗ ಸೇರಿ ಹಲವು ಧಾರ್ಮಿಕ ಉತ್ಸವಗಳಲ್ಲಿ ಜನ ಸೇರುತ್ತಾರೆ. ಆದರೆ ಆರ್‌ಸಿಬಿ ಕಾಲ್ತುಳಿತ ಸರ್ಕಾರದ ಪ್ರಚಾರದ ಹಪಾಹಪಿಯಿಂದ ನಡೆದಿದೆ. ಜನಸಂದಣಿ ನಿಯಂತ್ರಣಕ್ಕೆ ಕಾಯ್ದೆ ತರದೆಯೂ ನಿಯಮ ಮಾಡಬಹುದಿತ್ತು ಎಂದು ತಿಳಿಸಿದರು.

Next Story