ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಮಂಡನೆ; ಕಾಂತರಾಜು ಸ್ವಾಗತ


ಸಚಿವ ಸಂಪುಟದ ಮುಂದೆ ಮಂಡನೆಯಾಗುತ್ತಿರುವುದು ಜಾತಿಗಣತಿಯಲ್ಲ. ಅದನ್ನು ನಾವು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಎಂದು ಕರೆದಿದ್ದೇವೆ. ಸಮೀಕ್ಷೆಯಲ್ಲಿ ಬಳಸಲಾದ 54ಅಂಶಗಳಲ್ಲಿ ಜಾತಿಯೂ ಒಂದು. ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರೂ ಆಗಿರುವ ಸಮೀಕ್ಷೆ ನಡೆಸಿದ ಎಚ್‌.ಕಾಂತರಾಜು ತಿಳಿಸಿದ್ದಾರೆ.

ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಲಾಗಿದೆ. ವರದಿ ಮಾಹಿತಿ ಸೋರಿಕೆ ಕುರಿತಂತೆ ಏನನ್ನೂ ಹೇಳುವುದಿಲ್ಲ. ವರದಿ ತೆರದ ಬಳಿಕ ವಸ್ತುಸ್ಥಿತಿ ತಿಳಿಯಲಿದೆ ಎಂದು ಹೇಳಿದ್ದಾರೆ. 

Read More
Next Story