26 ಭಾರತೀಯ ಸ್ಥಳಗಳಲ್ಲಿ ಡ್ರೋನ್‌ ದಾಳಿ
x

26 ಭಾರತೀಯ ಸ್ಥಳಗಳಲ್ಲಿ ಡ್ರೋನ್‌ ದಾಳಿ


ಭಾರತದೊಂದಿಗಿನ ಸೇನಾ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿದ ಪಾಕಿಸ್ತಾನ ಸೇನೆಯು, ಎರಡನೇ ರಾತ್ರಿಯೂ ಭಾರತದ ಪಶ್ಚಿಮ ಗಡಿಯುದ್ದಕ್ಕೂ ವ್ಯಾಪಕ ದಾಳಿಯನ್ನು ನಡೆಸಿತು. ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ರಾಜಸ್ಥಾನದ ಅಂತರರಾಷ್ಟ್ರೀಯ ಗಡಿ ಮತ್ತು ಗಡಿರೇಖೆ (LoC) ಯದ್ದಕ್ಕೂ ಡ್ರೋನ್ ದಾಳಿ ಮತ್ತು ಭಾರೀ ಫಿರಂಗಿ ದಾಳಿಗಳು ನಡೆದಿವೆ. ಒಟ್ಟು 26 ಭಾರತೀಯ ಸ್ಥಳಗಳಲ್ಲಿ ಡ್ರೋನ್‌ಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಿಂದ ಗುಜರಾತಿನ ಭುಜ್‌ವರೆಗಿನ ವಿಶಾಲ ವ್ಯಾಪ್ತಿಯಲ್ಲಿ ಈ ದಾಳಿಗಳು ನಡೆದಿವೆ. ವರದಿಯಾದ 26 ಸ್ಥಳಗಳಲ್ಲಿ ಕಂಡುಬಂದ ಡ್ರೋನ್‌ಗಳಲ್ಲಿ ಕೆಲವು ಸಶಸ್ತ್ರವಾಗಿದ್ದು, ಸೈನಿಕ ನೆಲೆಗಳು ಮತ್ತು ನಾಗರಿಕ ಪ್ರದೇಶಗಳಿಗೆ ಸಂಭಾವ್ಯ ಅಪಾಯವನ್ನುಂಟುಮಾಡಿದ್ದವು. ದಾಳಿಯ ಯತ್ನದಲ್ಲಿ 300-400 ಡ್ರೋನ್‌ಗಳು ಮತ್ತು ಇತರ ಹಾರುವ ಸಾಧನಗಳನ್ನು ಬಳಸಲಾಗಿದೆ ಎಂದು ಭಾರತ ತಿಳಿಸಿದೆ. ಇದು ಭಾರತದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಪರೀಕ್ಷಿಸುವ ಮತ್ತು ಗುಪ್ತಚರ ಮಾಹಿತಿ ಸಂಗ್ರಹಿಸುವ ಉದ್ದೇಶವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

Read More
Next Story