ಆ.16ರಂದು 400 ಕಾರುಗಳಲ್ಲಿ ಧರ್ಮಸ್ಥಳಕ್ಕೆ ಭೇಟಿ


ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆ ಅನುಮಾನಸ್ಪದವಾಗಿದೆ. ನೂರಾರು ಹೆಣಗಳನ್ನು ಹೂತಿದ್ದೇನೆ ಎಂದು ಹೇಳಿಕೆ ನೀಡಿರುವ ದೂರುದಾರನೇ ಮೊದಲ ಅಪರಾಧಿ. ಶವಗಳನ್ನು ಹೂತಿರುವುದು ನೋಡಿದ್ದೇನೆ ಎಂದು ಹೇಳಿಕೆ ನೀಡಿರುವ ಸಾಕ್ಷಿಗಳದು ತಪ್ಪು. ಮೊದಲು ಅವರನ್ನು ತನಿಖೆ ಮಾಡಬೇಕು ಎಂದು ಶಾಸಕ ಎಸ್‌.ಆರ್‌. ವಿಶ್ವನಾಥ್‌ ತಿಳಿಸಿದರು.

ಆ.16 ರಂದು 400 ಕಾರುಗಳ ಮೂಲಕ ಧರ್ಮಸ್ಥಳಕ್ಕೆ ತೆರಳಿ, ಆ ಸ್ಥಳದ ಪರವಾಗಿ ಇದ್ದೇವೆ ಎಂದು ತಿಳಿಸಲು ಹೋಗುತ್ತಿದ್ದೇವೆ. ಧರ್ಮಸ್ಥಳದ ಬಗ್ಗೆ ಮಾತನಾಡಿದರೆ ವೈಯಕ್ತಿಕ ಕೇಸ್‌ ಹಾಕುತ್ತೇನೆ ಎಂದು ನಕಲಿ ವಕೀಲರು ಹೇಳುತ್ತಿದ್ದಾರೆ. ಎಸ್‌ಐಟಿ ತನಿಖೆಯಲ್ಲಿ ಧರ್ಮಸ್ಥಳ ಪ್ರಕರಣ ಸುಳ್ಳು ಎಂದು ತನಿಖೆಯಲ್ಲಿ ಬಂದರೆ ಸಿಎಂ, ಡಿಸಿಎಂ, ಗೃಹಸಚಿವರ ಬಗ್ಗೆಯೂ ಯೂಟ್ಯೂಬರ್‌ಗಳು ಮಾತನಾಡುತ್ತಾರೆ ಎಂದರು.

 

Read More
Next Story