ಕ್ಷೇತ್ರದ ಪಾವಿತ್ರತೆ ಉಳಿಸಲೆಂದೇ ಎಸ್‌ಐಟಿ ರಚನೆ: ಶಾಸಕ ಶಿವಲಿಂಗೇಗೌಡ
ಧರ್ಮಸ್ಥಳ ರಾಜ್ಯದ ದೊಡ್ಡ ಪವಿತ್ರ ಕ್ಷೇತ್ರ. ಇದಕ್ಕೆ ಬಂದಿರುವ ಅಪವಾದವನ್ನು ಕಿತ್ತು ಹಾಕಬೇಕು. ಕೆಲವರು ಪಟ್ಟಭದ್ರರು ಬೇಕಂತಲೇ ಹೆಸರು ಹಾಳು ಮಾಡುತ್ತಿದ್ದಾರೆ. ಆ ಕಳಂಕವನ್ನು ತೆಗೆಯೋಕೆ ನಾವು ನೋಡುತ್ತಿರುವುದು ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ತಿಳಿಸಿದರು.
ದೂರುದಾರ 164 ರಡಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಾರೆ. ಕೋರ್ಟ್ ತನಿಖೆ ಮಾಡಿ ಅಂದ ಮೇಲೆ ಮಾಡಬೇಕಲ್ವೇ? ಕ್ಷೇತ್ರದ ಪಾವಿತ್ರತೆ ಉಳಿಸೋಕೆ ಎಂದೇ ಎಸ್‌ಐಟಿ ಮಾಡಿದ್ದು. ಇದನ್ನು ಕರ್ನಾಟಕದ ಜನ ಒಪ್ಪಿದ್ದಾರೆ ಎಂದರು.

Next Story