ಎಫ್‌ಎಸ್‌ಎಲ್ ವರದಿ ಬರುವವರೆಗೂ ಅಗೆಯುವುದಿಲ್ಲ: ಜಿ. ಪರಮೇಶ್ವರ್
ಯಾರದೇ ಒತ್ತಡಕ್ಕ ಮಣಿಯದೆ ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ಅಧಿಕಾರಿಗಳು ಬಹಳ ಗಂಭೀರವಾಗಿ ಹಾಗೂ ಪಾರದರ್ಶಕವಾಗಿ ತನಿಖೆ ನಡೆಸುತ್ತಿದ್ದಾರೆ. ದೂರುದಾರ ಇಡೀ ಧರ್ಮಸ್ಥಳ ಪೂರ್ತಿ ತೋರಿಸಿದರೆ ಅಗೆಯಲು ಸಾಧ್ಯವಿಲ್ಲ ಎಂದು ಡಾ.ಜಿ. ಪರಮೇಶ್ವರ್ ತಿಳಿಸಿದರು.
ಎಸ್‌ಐಟಿ ಅಧಿಕಾರಿಗಳಿಗೆ ಪೂರ್ಣ ಅಧಿಕಾರ ನೀಡಿದ್ದೇವೆ. ಎಷ್ಟು ಜಾಗದಲ್ಲಿ ಅಗೆಯಬೇಕು ಎಂದು ಎಸ್‌ಐಟಿ ತಿರ್ಮಾನ ಮಾಡುತ್ತದೆ. ಇದು ಸರ್ಕಾರದ ತೀರ್ಮಾನವಲ್ಲ. ಎಫ್‌ಎಸ್ಎಲ್ ವರದಿ ಬರುವವರೆಗೂ ತಕ್ಷಣದಿಂದಲೇ ಅಗೆಯುವುದನ್ನು ನಿಲ್ಲಿಸಿದ್ದಾರೆ ಎಂದರು.
ಪ್ರಕರಣ ಬಹಳ ಸೂಕ್ಷ್ಮವಾದದ್ದು, ಮಾಧ್ಯಮಗಳು ಊಹಾಪೋಹದಿಂದ ವರದಿ ಮಾಡುತ್ತಿವೆ ಎಂದು ತಿಳಿಸಿದರು.

Next Story