ಲಾಯರ್‌ ಜಗದೀಶ್‌ ವಿರುದ್ಧ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಹಕ್ಕುಚ್ಯುತಿಗೆ ಆಗ್ರಹ


ಲಾಯರ್ ಜಗದೀಶ್ ವಿರುದ್ಧ ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ಹಕ್ಕು ಚ್ಯುತಿ ಮಂಡನೆ ಮಾಡಬೇಕು ಎಂದು ಸಭಾಪತಿ ಗಮನಕ್ಕೆ ತಂದರು. 

ನನ್ನನ್ನು ಒಬ್ಬ ಅಯೋಗ್ಯ ಎಂದು ಹೇಳಿದ್ದಾನೆ, ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ ಬಳಿ ನೂರು ಕೋಟಿ ರೂ. ಇಟ್ಟಿದ್ದಾನೆ. ಅಳ್ಳಾಲಸಂದ್ರದ ಯಾವುದೊ ಜಾಗ ತೋರಿಸಿ ಇದು ಧರ್ಮಸ್ಥಳ ಕ್ಷೇತ್ರದ ಜಾಗ ಎಂದು ತಿಳಿಸಿದ್ದಾನೆ ಎಂದು ಸದನದ ಗಮನಕ್ಕೆ ತಂದರು. 

ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಹೆಚ್. ಕೆ. ಪಾಟೀಲ್, ಇದು ಸದನಕ್ಕೆ ಆದ ಅಗೌರವ. ನೀವು ನಮಗೆ ನೊಟೀಸ್ ನೀಡಿ, ನಾವು ಅದನ್ನು ಪರಿಗಣಿಸುತ್ತೇವೆ ಎಂದು ತಿಳಿಸಿದರು.

 

Read More
Next Story