ವಿದೇಶದಿಂದ ಯಾವುದೇ ಹಣ ಬಂದಿಲ್ಲ, ಎಸ್‌ಐಟಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲಿ
ಪುತ್ತುರೂ ಉಪ ವಿಭಾಗಧಿಕಾರಿಯವರು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡಿ ಆದೇಶಿಸಿದ್ದಾರೆ. ಆದರೆ ಅದು ಸಾಧ್ಯವಿಲ್ಲ ಎಂದು ಗಿರೀಶ್ ಮಟ್ಟಣ್ಣನವರ್ ತಿಳಿಸಿದರು.
ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಾತನಾಡುತ್ತಾ, ನನ್ನ ಹೆಂಡತಿ ಜತೆ ಹಣದ ವ್ಯವಹಾರದ ಕಥೆ ಕಟ್ಟುತ್ತಿದ್ದಾರೆ. ಎರಡು ವರ್ಷದಿಂದ 5 ಸಾವಿರ ರೂ. ವ್ಯವಹಾರವಾಗಿದೆ. ನನ್ನ 10 ವರ್ಷದ ಎಲ್ಲಾ ಬ್ಯಾಂಕ್ ವ್ಯವಹಾರವನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಷಡ್ಯಂತ್ರ ಇದೆಯೋ ಇಲ್ಲವೊ ಸರ್ಕಾರ ಮೊದಲು ಹೇಳಲಿ. ನಮಗೆ ವಿದೇಶದಿಂದ ಯಾವುದೇ ಹಣ ಬಂದಿಲ್ಲ. ತನಿಖೆಯ ಆಧಾರದ ಮೇಲೆ ಷಡ್ಯಂತ್ರ ನಡೆದಿರುವ ಬಗ್ಗೆ ಸರ್ಕಾರ ಸ್ಪಷ್ಟಪಡಿಸಬೇಕು ಎಂದರು.
ದೂರುದಾರನ ಪತ್ನಿ ತನ್ನ ಪತಿಯನ್ನು ಎಸ್‌ಐಟಿಯವರಿಗೆ ಕೊಡಬೇಡಿ ಎಂದು ನನಗೆ ಹೇಳಿದ್ದರು. ಆತನಿಗೆ ಎಲ್ಲವೂ ಗೊತ್ತಿದೆ. ಒಂದೇ ಜಾಗದಲ್ಲಿ ಕ್ರಿಕೆಟ್ ಬಾಕ್ಸ್‌ನಲ್ಲಿ ಬಾಲುಗಳು ಇರುವ ಹಾಗೆ ಬುರಡೆಗಳು ಸಿಕ್ಕಿವೆ. ಮಾನವ ಅಂಗಗಳ ಕಳ್ಳಸಾಗಣೆ ನಡೆಯುತ್ತಿರುವ ಸಂಶಯವಿದ್ದು ಈ ಬಗ್ಗೆ ಎಸ್‌ಐಟಿ ತನಿಖೆ ನಡೆಸಲಿ ಹಾಗೂ ಸರ್ಕಾರ ಹೆಚ್ಚಿನ ಸ್ವಾತಂತ್ರ್ಯ ನೀಡಲಿ ಎಂದು ತಿಳಿಸಿದರು.
