10,000 ರೂ. ಚುನಾವಣೆಯಲ್ಲಿ ಮತಗಳು 200 ರೂ.ಗೆ ತಿಂಗಳಿಗೆ ಮಾರಾಟ
ಜನ ಸೂರಾಜ್ ಪಕ್ಷವು ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ತೀವ್ರವಾಗಿ ಟೀಕಿಸಿದ್ದು, ಮತದಾರರಿಗೆ ಆಮಿಷವೊಡ್ಡಿರುವ ಬಗ್ಗೆ ತೀವ್ರ ನಿರಾಶೆ ವ್ಯಕ್ತಪಡಿಸಿದೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಅವರು,ʻʻಈ ಚುನಾವಣೆಯು ಒಂದು 10,000 ಚುನಾವಣೆಯಾಗಿ ಮಾರ್ಪಟ್ಟಿದೆ. ಸಣ್ಣ ಮೊತ್ತದ ಆರ್ಥಿಕ ಲಾಭಗಳಿಂದ ಮತಗಳು ಪ್ರಭಾವಿತವಾಗಿವೆ ಎಂದು ಸೂಚಿಸಲಾಗಿದ್ದು, ನಾವು ನಮ್ಮ ಮತಗಳನ್ನು ಕೇವಲ ತಿಂಗಳಿಗೆ 200 ರೂ.ಗೆ ಮಾರಿಬಿಟ್ಟಿದ್ದೇವೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದೆ. ತನ್ನ ಚೊಚ್ಚಲ ಚುನಾವಣೆಯಲ್ಲಿ 238 ಸ್ಥಾನಗಳಿಗೆ ಸ್ಪರ್ಧಿಸಿದ್ದ ಪಕ್ಷವು, ಮತದ ನಿಜವಾದ ಮೌಲ್ಯವನ್ನು ನಿರ್ಲಕ್ಷಿಸಿರುವ ಬಗ್ಗೆ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.
Next Story

