ಎನ್‌ಡಿಎ ಮುನ್ನಡೆ: ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದ ಮಾಂಝಿ

2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಬಹುಮತದ ಗಡಿಯನ್ನು ದಾಟುತ್ತಿದ್ದಂತೆ, ಕೇಂದ್ರ ಸಚಿವ ಮತ್ತು ಹಿಂದುಸ್ತಾನಿ ಆವಾಮ್ ಮೋರ್ಚಾ ನಾಯಕ ಜೀತನ್ ರಾಮ್ ಮಾಂಝಿ ಅವರು ಮೈತ್ರಿಕೂಟದ ಕಾರ್ಯಕ್ಷಮತೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರಂಭಿಕ ಗೆಲುವಿಗೆ ಪ್ರತಿಕ್ರಿಯೆ ನೀಡಿರುವ ಅವರು, ಇದು ಅನಿರೀಕ್ಷಿತವಲ್ಲ. ಎನ್‌ಡಿಎ ಭಾರಿ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಮತ್ತು ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ ಎಂದು ಅವರು ತಿಳಿಸಿದರು. 

ಬಿಜೆಪಿ ಮತ್ತು ಜೆಡಿ(ಯು) ನೇತೃತ್ವದ ಆಡಳಿತಾರೂಢ ಮೈತ್ರಿಕೂಟವು ಮತ ಎಣಿಕೆ ಪ್ರಾರಂಭವಾದಾಗಿನಿಂದ ತನ್ನ ಮುನ್ನಡೆಯನ್ನು ಹೆಚ್ಚುತ್ತಿದೆ. ಎನ್‌ಡಿಎಯ ಅಂದಾಜು ಪ್ರಾಬಲ್ಯವನ್ನು ಉಲ್ಲೇಖಿಸಿರುವ ಮಾಂಝಿ, ನಾವು ಅದರತ್ತ ಸಾಗುತ್ತಿದ್ದೇವೆ. ನಾವು 160 ಸ್ಥಾನಗಳಿಗಿಂತ ಕಡಿಮೆಯಾಗುವುದಿಲ್ಲ. ಅವರು (ಮಹಾಮೈತ್ರಿಕೂಟ) 70-80 ಸ್ಥಾನಗಳಿಗೆ ಸೀಮಿತರಾಗುತ್ತಾರೆ ಎಂದು ಅವರು ತಿಳಿಸಿದರು. 

ನಾಯಕತ್ವದ ಬಗ್ಗೆ ಊಹಾಪೋಹಗಳನ್ನು ತಳ್ಳಿಹಾಕಿದ ಅವರು, ನಿತೀಶ್ ಕುಮಾರ್ ಹಿ ಬನೆಂಗೆ ಮುಖ್ಯಮಂತ್ರಿ ಎಂದು ದೃಢವಾಗಿ ಹೇಳುವ ಮೂಲಕ, ನಿತೀಶ್ ಕುಮಾರ್ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಉಳಿಸಿಕೊಳ್ಳಲು ಮೈತ್ರಿಕೂಟದ ಬದ್ಧತೆಯನ್ನು ಖಚಿತಪಡಿಸಿದರು.

Read More
Next Story